Home » News » ಕೋಟಿ ಮೌಲ್ಯದ ಕಾರು‌ ಅಪ್ಪಚ್ಚಿ! ಕಂಟೇನರ್ ಬಿದ್ದು ವಿಜಯಪುರದ ಟೆಕ್ಕಿ ಸೇರಿ 6 ಮುಗ್ಧ ಜೀವಗಳು ಬಲಿ!

ಕೋಟಿ ಮೌಲ್ಯದ ಕಾರು‌ ಅಪ್ಪಚ್ಚಿ! ಕಂಟೇನರ್ ಬಿದ್ದು ವಿಜಯಪುರದ ಟೆಕ್ಕಿ ಸೇರಿ 6 ಮುಗ್ಧ ಜೀವಗಳು ಬಲಿ!

by CityXPress
0 comments

ನೆಲಮಂಗಲ: ಬೃಹತ್ ಕಂಟೇನರ್ ವಾಹನ ಕಾರ್ ಮೇಲೆ ಬಿದ್ದು ಕಾರಿನಲ್ಲಿದ್ದವರೆಲ್ಲರೂ ಸ್ಥಳದಲ್ಲೇ ಉಸಿರು ಚೆಲ್ಲಿರುವ ಘಟನೆ ಬೆಂಗಳೂರಿನ ನೆಲಮಂಗಲ ಸಮೀಪ ನಡೆದಿದೆ.ಭೀಕರ ಅಪಘಾತದಲ್ಲಿ 6 ಮುಗ್ಧ ಜೀವಗಳು ಬಲಿಯಾಗಿವೆ.

ಘಟನೆಯ ದೃಶ್ಯಾವಳಿ ನೋಡಿದ್ರೆ ಎದೆ ಝಲ್ ಅನ್ನಿಸುತ್ತದೆ. ಮೃತಪಟ್ಟವರೆಲ್ಲರೂ ಒಂದೇ ಕುಟುಂಬದವರಾಗಿದ್ದು, ವಿಜಯಪುರದ ಸಾಫ್ಟ್‌ವೇರ್ ಇಂಜಿನಿಯರ್ ಚಂದ್ರಮ್, ಗೌರಾಬಾಯಿ, ಮಕ್ಕಳಾದ ದೀಕ್ಷಾ,ಧ್ಯಾನ್,ಆರ್ಯ ಹಾಗೂ ಮತ್ತೋರ್ವ ಮಗು ಧೀಕ್ಷಾ ಅನ್ನುವವರು ದಾರುಣವಾಗಿ ಸಾವನ್ನಪ್ಪಿದ್ದಾರೆ.

ಬೃಹತ್ ಗಾತ್ರದ ಕಂಟೇನ‌ರ್ ಚಲಿಸುತ್ತಿರುವ ಚಾಲಕ, ಒಂದು ಕಾರನ್ನ ತಪ್ಪಿಸಲು ಹೋಗಿ, ಎಡಭಾಗಕ್ಕೆ ಚಲಿಸಿದ್ದರಿಂದ ಈ ಕಾರ್ ನ‌ ಮೇಲೆ ಕಂಟೇನರ್ ಬಿದ್ದು ಅಪಘಾತ ಸಂಭವಿಸದೆ. ನೆಲಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ಜರುಗಿದೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb