Home » News » ಡೀಸೆಲ್‌ ಕೊರತೆ: ರೈತರ ಪರದಾಟ…! ಸರ್ಕಾರ ರೈತರ ಸಮಸ್ಯೆಗೆ ಸ್ಪಂದಿಸಲಿ : ರಮೇಶ ಲಮಾಣಿ..!

ಡೀಸೆಲ್‌ ಕೊರತೆ: ರೈತರ ಪರದಾಟ…! ಸರ್ಕಾರ ರೈತರ ಸಮಸ್ಯೆಗೆ ಸ್ಪಂದಿಸಲಿ : ರಮೇಶ ಲಮಾಣಿ..!

by CityXPress
0 comments

ಲಕ್ಷ್ಮೇಶ್ವರ : ಪಟ್ಟಣವು ಸೇರಿದಂತೆ ತಾಲ್ಲೂಕಿನ ವಿವಿಧ ಪೆಟ್ರೋಲ್ ಬಂಕ್‌ಗಳಲ್ಲಿ ಕಳೆದ 3–4 ದಿನಗಳಿಂದ ಡಿಸೇಲ್ ಕೊರತೆ ಉಂಟಾಗಿದ್ದು, ಅಗತ್ಯಕ್ಕೆ ತಕ್ಕಷ್ಟು ಡೀಸೆಲ್ ದೊರೆಯದೆ ರೈತರು‌ ಹಾಗೂ ವಾಹನ ಸವಾರರು ಪರದಾಡುತ್ತಿದ್ದಾರೆ.

ವರದಿ : ಪರಮೇಶ ಎಸ್ ಲಮಾಣಿ.

ಪಟ್ಟಣದ ಕೆಲವೊಂದು ಪೆಟ್ರೋಲ್ ಬಂಕ್ ಅಲ್ಲಿ ಮಾತ್ರ ಡಿಸೇಲ್ ಲಭ್ಯವಿದ್ದು, ಅದನ್ನು ಪಡೆದುಕೊಳ್ಳಲು ರೈತರು, ವಾಹನ ಸವಾರರು ಕ್ಯಾನ್ ಗಳನ್ನು ಸರದಿ ಸಾಲಾಗಿ ಇಟ್ಟು ಕಾಯುವ ಪರಿಸ್ಥಿತಿ ಏದುತಾಗಿದೆ . ಬಂಕ್ ಅಲ್ಲಿ ಪೆಟ್ರೋಲ್ ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹವಿದ್ದು, ಗ್ರಾಹಕರು ಕೇಳಿದಷ್ಟು ಪೆಟ್ರೋಲ್ ದೊರೆಯುತ್ತಲಿದೆ. ಆದರೆ ಡೀಸೆಲ್ ಮಾತ್ರ ಸಾಕಷ್ಟು ಪ್ರಮಾಣದಲ್ಲಿ ದೊರೆಯುತ್ತಿಲ್ಲ.

ಇದೀಗ ಮುಂಗಾರು ಹಂಗಾಮು ಆರಂಭವಾಗಿದ್ದು, ರೈತರು ಬಿತ್ತನೆಗಾಗಿ ತಮ್ಮ ಜಮೀನನ್ನು ಹದಗೊಳಿಸಬೇಕಾಗಿದೆ. ಬಹುತೇಕ ರೈತರು ಜಮೀನು ಉಳುಮೆ, ಒಕ್ಕಲು, ಸಾಗಾಣಿಕೆ ಮೊದಲಾದವುಗಳಿಗೆ ಟ್ರ್ಯಾಕ್ಟರ್ ಅವಲಂಬಿಸಿದ್ದು, ಅಗತ್ಯಕ್ಕೆ ತಕ್ಕಷ್ಟು ಇಂಧನ ದೊರೆಯದೆ ಪರದಾಡುವಂತಾಗಿದೆ ಎಂದು ರೈತ ಮುಖಂಡ ರಮೇಶ ಲಮಾಣಿ ಅಸಹಾಯಕತೆ ವ್ಯಕ್ತಪಡಿಸಿದರು.

banner

ಬಿತ್ತನೆ ಮಾಡುವ ಯಂತ್ರಕ್ಕೆ ತಕ್ಕಷ್ಟು ಡಿಸೇಲ್ ದೊರೆಯದಿರುವುದರಿಂದ ಬಿತ್ತನೆ ಹಿನ್ನಡೆಯಾಗಿದೆ ಎಂದು ರೈತರು ತಿಳಿಸಿದರು.

ಮೂರನಾಲ್ಕು ದಿನಗಳಿಂದ ಮಳೆ ಆಗಿದ್ದರಿಂದ ಬಿತ್ತನೆ ಕಾರ್ಯ ಚುರುಕಾಗಿದೆ. ಆದರೆ ಟ್ರ್ಯಾಕ್ಟರ್ ಗಳಿಗೆ ಡೀಸೆಲ್‌ ಇಲ್ಲದೇ, ರೈತರು ಬಂಕ್ ಗಳಲ್ಲಿ ಕಾದು ಕಾದು ಸುಸ್ತಾಗುತ್ತಿದ್ದಾರೆ. ಸರ್ಕಾರ ಮತ್ತು ಸಂಬಂಧಿಸಿದ ಅಧಿಕಾರಿಗಳು ರೈತರ ಸಮಸ್ಯೆಗೆ ಸ್ಪಂದಿಸಿ ಡೀಸೆಲ್‌ ಸಮಸ್ಯೆ ನೀವಾರಣೆ ನೀಡಬೇಕಾಗಿದೆ.

—————————————————————-

ಲಕ್ಷ್ಮೇಶ್ವರ ತಾಲೂಕಿನಲ್ಲಿ ಡೀಸೆಲ್‌ ಸಿಗದೆ ರೈತರು, ವಾಹನ ಸವಾರರು ಪರದಾಡುವಂತಾಗಿದೆ. ತಾಲೂಕ ಆಡಳಿತ‌ ಅಧಿಕಾರಿಗಳು ರೈತರ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಬೇಕು ಮತ್ತು ರೈತರು ಹೊಲವನ್ನು ಹದಾಗೊಳಿಸಲು, ಬಿತ್ತನೆ ಮಾಡಲು ಟ್ರ್ಯಾಕ್ಟರ್ ನ್ನು ಅವಲಂಬಿಸಿದ್ದು ಅವುಗಳಿಗೆ ಡೀಸೆಲ್‌ ಸಿಗುತ್ತಿಲ್ಲ, ಸರ್ಕಾರ ರೈತರ ಸಮಸ್ಯೆಗೆ ಸ್ಪಂದಿಸಿ, ಡೀಸೆಲ್‌ ಕೊರತೆಯನ್ನು ನಿವಾರಣೆ ಮಾಡಬೇಕು.

ರಮೇಶ ಎಸ್ ಲಮಾಣಿ.
ರೈತ ಮುಖಂಡ ಲಕ್ಷ್ಮೇಶ್ವರ ತಾಲೂಕ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb