ಗದಗ: ವಿಶ್ವದ ಪ್ರಸಿದ್ಧ ಆಭರಣ ಬ್ರ್ಯಾಂಡ್ ಆಗಿರುವ ಮಲಬಾರ್ ಗೋಲ್ಡ್ & ಡೈಮಂಡ್ಸ್ ಇದೀಗ ಗದಗ ನಗರದಲ್ಲಿ ತನ್ನ ಹೊಸ ಶೋರೂಂ ಅನ್ನು ಆರಂಭಿಸಲು ಸಜ್ಜಾಗಿದೆ.
ವರದಿ:ಮಹಲಿಂಗೇಶ್ ಹಿರೇಮಠ. ಗದಗ
ಏಪ್ರಿಲ್ 18, 2026 ಶನಿವಾರ ಸಂಜೆ 4:30ಕ್ಕೆ ನಡೆಯಲಿರುವ ಈ ಭವ್ಯ ಉದ್ಘಾಟನಾ ಸಮಾರಂಭದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟ, ‘ರೋರಿಂಗ್ ಸ್ಟಾರ್’ ಶ್ರೀಮುರಳಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ನಗರದ ಟಿಎಸ್ ಸರ್ಕಲ್‌ನ ಯು-ಮಾಲ್‌ನಲ್ಲಿ ಸ್ಥಾಪನೆಯಾಗಿರುವ ಈ ನೂತನ ಶೋರೂಂ, ಗ್ರಾಹಕರಿಗೆ ವಿಶ್ವಮಟ್ಟದ ಶಾಪಿಂಗ್ ಅನುಭವ ನೀಡುವ ಉದ್ದೇಶದಿಂದ ವಿನ್ಯಾಸಗೊಳಿಸಲಾಗಿದೆ.
ಸಾಂಪ್ರದಾಯಿಕ ಮತ್ತು ಆಧುನಿಕ ಶೈಲಿಗಳ ಸಂಯೋಜನೆಯೊಂದಿಗೆ ರೂಪುಗೊಂಡಿರುವ ಸಾವಿರಕ್ಕೂ ಹೆಚ್ಚು ಆಭರಣ ವಿನ್ಯಾಸಗಳು ಇಲ್ಲಿ ಲಭ್ಯವಿದ್ದು, ಚಿನ್ನ, ವಜ್ರ, ಪ್ಲಾಟಿನಂ, ರತ್ನಗಳು ಹಾಗೂ ಬೆಳ್ಳಿಯ ವಿಶಿಷ್ಟ ಸಂಗ್ರಹ ಗ್ರಾಹಕರನ್ನು ಆಕರ್ಷಿಸಲು ಸಿದ್ಧವಾಗಿದೆ.
ಪ್ರತಿಷ್ಠಿತ ಬ್ರ್ಯಾಂಡ್ ಆಗಿರುವ ಮಲಬಾರ್ ಗೋಲ್ಡ್ & ಡೈಮಂಡ್ಸ್, ತನ್ನ ವಿಶ್ವಾಸಾರ್ಹತೆ ಮತ್ತು ಗುಣಮಟ್ಟಕ್ಕಾಗಿ ವಿಶ್ವದಾದ್ಯಂತ ಹೆಸರುವಾಸಿಯಾಗಿದ್ದು, 14 ದೇಶಗಳಲ್ಲಿ 445ಕ್ಕೂ ಹೆಚ್ಚು ಶೋರೂಂಗಳನ್ನು ಹೊಂದಿದೆ.
ಇದೀಗ ಗದಗ ನಗರದಲ್ಲೂ ತನ್ನ ಸೇವೆಯನ್ನು ವಿಸ್ತರಿಸುವ ಮೂಲಕ ಸ್ಥಳೀಯ ಗ್ರಾಹಕರಿಗೆ ಅತ್ಯುತ್ತಮ ಆಭರಣ ಖರೀದಿ ಅನುಭವ ಒದಗಿಸಲು ಮುಂದಾಗಿದೆ.

“ಪ್ರಿಯ ಗ್ರಾಹಕರೇ, ನಮ್ಮ ಹೊಸ ಶೋರೂಂಗೆ ಭೇಟಿ ನೀಡಿ, ನಮ್ಮ ವೈವಿಧ್ಯಮಯ ಆಭರಣ ಸಂಗ್ರಹವನ್ನು ಸ್ವತಃ ಅನುಭವಿಸಿ,” ಎಂದು ಸಂಸ್ಥೆಯ ಆಡಳಿತ ಮಂಡಳಿ ಹಾಗೂ ತಂಡ ಮನವಿ ಮಾಡಿಕೊಂಡಿದೆ.
ಈ ನೂತನ ಶೋರೂಂ ಉದ್ಘಾಟನೆಯೊಂದಿಗೆ ಗದಗ ನಗರದ ಆಭರಣ ವ್ಯಾಪಾರ ಕ್ಷೇತ್ರಕ್ಕೆ ಹೊಸ ಚೈತನ್ಯ ಸಿಗಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.
