ಕುಂದಗೋಳ: ರಾಷ್ಟ್ರೀಯ ಪಲ್ಸ್ ಪೋಲಿಯೋ ದಿನದಂದು ರಾಜ್ಯ ರಾಷ್ಟ್ರದ ಹಿತ ದೃಷ್ಟಿಯಿಂದ ಎರಡು ಹನಿ ಪೋಲಿಯೋ ಲಸಿಕೆ ಹಾಕಿಸಿ ಮಗುವಿನ ಆರೋಗ್ಯಕರ ಭವಿಷ್ಯ ರಕ್ಷಣೆಗಾಗಿ ಪೋಲಿಯೋ ಮುಕ್ತ ಸಮಾಜ ನಮ್ಮದಾಗಲೂ ದೇಶದ ಪಾಲಕರು ಬದ್ಧರಾಗ ಬೇಕು ಎಂದು ಭಾರತ ಜೋಡೋ ಐಕ್ಯತೆ ಯಾತ್ರೆ ಬರಿಗಾಲಿನ ರಾಜ್ಯ ಸಂಚಾಲಕ ಎಚ್ಎಸ್ ಲಕ್ಷ್ಮೇಶ್ವರ ಹೇಳಿದರು.
ವರದಿ : ಪರಮೇಶ ಎಸ್ ಲಮಾಣಿ.
ಅವರು ತಾಲೂಕಿನ ಸಂಸಿ ಗ್ರಾಮದ ಹೊಸ ಬಸ್ ಸ್ಟ್ಯಾಂಡ್ ನಿಲ್ದಾಣದ ಬೂತ ನಂಬರ್ 39ರಲ್ಲಿ ರಾಷ್ಟ್ರೀಯ ಎರಡು ಹನಿಯ ಐದು ವರ್ಷದ ಒಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೋ ಹನಿ ಹಾಕುವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಈಗಾಗಲೇ ಸರಕಾರವು ಭಾರತ ದೇಶವು ಪೋಲಿಯೋ ಸಂಪೂರ್ಣ ಮುಕ್ತವಾಗಲು ರಾಜ್ಯದ ಸರ್ಕಾರಿ ಎಲ್ಲಾ ಆಸ್ಪತ್ರೆಗಳು ಗ್ರಾಮೀಣ ಪಟ್ಟಣ ನಗರ ಗುಡ್ಡಗಾಡು ಪ್ರದೇಶ ಸೇರಿದಂತೆ ಹಲವಾರು ಕಡೆ ಆರೋಗ್ಯ ಇಲಾಖೆಯವತಿಂದ ವ್ಯವಸ್ಥೆ ಮಾಡಲಾಗುತ್ತಿದೆ. ಪಾಲಕರು, ತಾಯಂದಿರು ಮಕ್ಕಳಿಗೆ ಪಲ್ಸ್ ಪೋಲಿಯೋ ಹನಿ ಹಾಕಿಸಲು ಸಹಕಾರ ನೀಡಬೇಕು ಎಂದರು.
ಇದೇ ಸಂದರ್ಭದಲ್ಲಿ ಐದನೇ ವಾರ್ಡಿನ ಅಂಗನವಾಡಿ ಕೇಂದ್ರದ ಕಾರ್ಯಕರ್ತೇ ಶಿಕ್ಷಕಿ ಹೆಚ್ ಆಯ ಹರ್ಲಾಪುರ ಮಾತನಾಡಿ ಪಲ್ಸ್ ಪೋಲಿಯೋ ಎರಡು ಹನಿಯನ್ನು ಐದು ವರ್ಷದ ಒಳಗಿನ ಮಕ್ಕಳಿಗೆ ಜೂನ್ 28 ರಿಂದ ಮೂರು ದಿವಸ ಸಂಬಂಧಿಸಿದ ಸಿಬ್ಬಂದಿಗಳು ಕಾರ್ಯಸೇವೆ ಕೈಗೊಂಡಿದ್ದು ಸಾರ್ವಜನಿಕರು ಅಭಿಯಾನವನ್ನು ಯಶಸ್ವಿಗೊಳಿಸಿ ಪಾಲಕರು ಸದುಪಯೋಗ ಪಡಿಬೇಕು ಎಂದರು.
ಸಂದರ್ಭದಲ್ಲಿ ಆರೋಗ್ಯ ಆಸ್ಪತ್ರೆಯ ಡಾ. ಸುರೇಶ ಕಳಸಣ್ಣವರ, ಕೇಂದ್ರದ ಮೇಲ್ವಿಚಾರಕ ಅಧಿಕಾರಿ ಎಂ ಜಿ ಭಟ್, ಅನಿತಾ ಕುಣ್ಣಬೇವು, ಎಸ್ ಎ ಮೊದಿಗಣ್ಣವರ್, ಶಿವಾನಂದ್ ಬಿ ಕಡಕೋಳ, ಬಸಪ್ಪ ಕೊಡ್ಲಿವಾಡ ಮುಂತಾದವರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.
