ಗದಗ : ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಾ ತಹಶೀಲ್ದಾರ ಕಚೇರಿಯಲ್ಲಿ ವೀರ ರಾಣಿ ಕಿತ್ತೂರ ಚನ್ನಮ್ಮ ಜಯಂತಿ ಆಚರಿಸಲು ನಿರ್ಲಕ್ಷ್ಯ ತೋರಿದ ತಹಶಿಲ್ದಾರರ ವಿರುದ್ಧ ಶುಕ್ರವಾರದಿಂದ ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದವರು ತಹಶಿಲ್ದಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ತಹಶೀಲ್ದಾರ ಕಚೇರಿಯ ಎದುರು ಪ್ರತಿಭಟನೆ ಕೈಗೊಂಡು ಅಹೋರಾತ್ರಿ ಧರಣಿಯನ್ನು ಹಮ್ಮಿಕೊಳ್ಳಲಾಗಿತ್ತು.
ವರದಿ: ಪರಮೇಶ ಎಸ್ ಲಮಾಣಿ
ಈ ಸುದ್ದಿ ಜಿಲ್ಲಾದ್ಯಾಂತ ಹಬ್ಬಿ ಪರಿಸ್ಥಿತಿ ಸುಕ್ಷಮತೆಯನ್ನು ಅರಿತ ಜಿಲ್ಲಾಧಿಕಾರಿ ಶ್ರೀಧರ ಅವರು ಶುಕ್ರವಾರ ತಹಶಿಲ್ದಾರರ ಕಾರ್ಯಾಲಯಕ್ಕೆ ದೌಡಾಯಿಸಿ ವೀರಶೈವ ಲಿಂಗಾಯತ ಪಂಚಮಸಾಲಿ ಮುಖಂಡರೊಂದಿಗೆ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ತಾಲೂಕ ಅಧ್ಯಕ್ಷ ಮಂಜುನಾಥ ಮಾಗಡಿ ಸೇರಿದಂತೆ ಅನೇಕರು ತಹಶೀಲ್ದಾರರ ವಿರುದ್ಧ ಹರಿಹಾಯ್ದು ಸ್ವಾತಂತ್ರ್ಯ ಹೋರಾಟಗಾರ್ತಿ, ದೇಶಪ್ರೇಮಿ ವೀರ ರಾಣಿ ಕಿತ್ತೂರು ರಾಣಿ ಚೆನ್ನಮ್ಮಗೆ ಅವಮಾನ ಮಾಡಿದ್ದಾರೆ ಆಕ್ರೋಶ ವ್ಯಕ್ತಪಡಿಸಿದಲ್ಲದೇ,
ಅವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದು ಬಿಗಿಪಟ್ಟು ಹಿಡಿದರು ಆಗ ಜಿಲ್ಲಾಧಿಕಾರಿ ಪ್ರತಿಭಟನಾಕಾರರಿಗೆ ತಹಶಿಲ್ದಾರ ಮಾಡಿದ ಅಕ್ಷಮ್ಯ ಅಪರಾಧಕ್ಕೆ ಸಮುದಾಯದ ಕ್ಷಮೆಯಾಚಿಸಿದರು.
ತಕ್ಷಣವೇ ತಹಶಿಲ್ದಾರ ಗೆ ರಜೆಯ ಮೇಲೆ ಕಳುಹಿಸಿ ಜಿಲ್ಲೆಯ ಯಾವುದೇ ತಾಲೂಕಿನಲ್ಲೂ ಕಾರ್ಯನಿರ್ವಹಿಸದಂತೆ ಕ್ರಮ ಕೈಗೊಳ್ಳುವ ಕುರಿತು ಸರಕಾರಕ್ಕೆ ವರದಿ ಕಳುಹಿಸಲಾಗುವುದು ಎಂದು ಹೇಳಿದರು.
ವೀರಶೈವ ಪಂಚಮಸಾಲಿ ಸಂಘದವರು ನಿಗಧಿ ಪಡಿಸುವ ದಿನಾಂಕದಂದು ಅದ್ದೂರಿಯಾಗಿ ಚೆನ್ನಮ್ಮ ಜಯಂತಿ ಆಚರಿಸಲು ನಿರ್ಧರಿಸಿದರು ತಾವು ಕೂಡಾ ಪಾಲ್ಗೊಳ್ಳುವುದಾಗಿ ಹೇಳಿದರು.
