ಗದಗ: ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ಅವೈಜ್ಞಾನಿಕವಾಗಿ ವರ್ಗೀಕರಣ ಮಾಡಿ ಬಂಜಾರ, ಭೋವಿ, ಕೊರಚ, ಕೊರಮ ಸಮುದಾಯಗಳಿಗೆ ಅನ್ಯಾಯವೆಸಗಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಲೆದ 12 ದಿನಗಳ ಅಹೋರಾತ್ರಿ ಧರಣಿಯನ್ನು ಕೊನೆಯವಾಗಿದ್ದರಿಂದ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ವರದಿ: ಪರಮೇಶ ಲಮಾಣಿ.
ಬಂಜಾರಾ ಸಮಾಜದ ಗದಗ ಜಿಲ್ಲೆಯ 72 ತಾಂಡಾದ ನಾಯಜ, ಡಾವ, ಕಾರಭಾರಿ ಗಳಿಂದ ಗೋರ ಸಮಾಜ ಮಹಾ ಪಂಚಾಯತ್ ನಡೆಯಿತು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಪಿ. ರಾಜೀವ್ ಅವರು ಒಳ ಮಿಸಲಾತಿಯಲ್ಲಿನ ಸ್ಪೃಶ್ಯ ಮತ್ತು ಅಸ್ಪೃಶ್ಯ ಪದ ಬಳಸಿದ್ದು ಅಸಂವಿಧಾನಿಕವಾಗಿದೆ. ಬಂಜಾರ ಸಮಾಜ ಅಸ್ಪೃಶ್ಯ ವಾಗಿದ್ದು ಈ ಸಮಾಜವನ್ನು ಸ್ಪೃಶ್ಯರು ಎಂದು ಈ ಸರ್ಕಾರ ಹೇಳಿದ್ದು ಇದಕ್ಕೆ ನಾವು ವಿರೋಧಿಸುತ್ತೆವೆ. ಸರ್ಕಾರಕ್ಕೆ ನಾವು ಈ ಹಿಂದೆ ಹಲವಾರು ಬಾರಿ ಬೇಡಿಕೆಗಳನ್ನು ಸಲ್ಲಿಸಲಾಗಿದೆ. ಆದರೂ ಸಮಾಜಕ್ಕೆ ಅನ್ಯಾಯ ಮಾಡಲಾಗುತ್ತಿದೆ. ‘ಇಂದಿನದು ಕೇವಲ ಟ್ರೈಲರ್ ಮಾತ್ರ; ಪಿಕ್ಚರ್ ಅಭಿ ಬಾಕಿ ಹೈ’ ಎಂದು ಎಚ್ಚರಿಕೆ ನೀಡಿದರು.
ಒಳ ಮಿಸಲಾತಿ ವರ್ಗೀಕರಣವನ್ನು ಗದಗ ಜಿಲ್ಲಾ ತಾಂಡಾಗಳ ನಾಯಕರು ಒಪ್ಪಲಿಲ್ಲ. 1919 ರಲ್ಲಿ ಕೃಷ್ಣರಾಜ ಒಡೆಯರ ಅವರು ಕೆವಲ ಆರು ಜಾತಿಗಳಿಗೆ ಶೋಷಿತ ಜಾತಿಗಳೆಂದು ಸೇರಿಸಿತ್ತು ಅವುಗಳಲ್ಲಿ ಬಂಜಾರ ಒಂದಾಗಿದೆ. ಇಗ ಈ ಕಾಂಗ್ರೆಸ್ ಸರ್ಕಾರ ಬಂಜಾರ ಸಮಾಜಕ್ಕೆ ಅನ್ಯಾಯ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ 12 ದಿನಗಳಿಂದ ಬಂಜಾರಾ ಸಮಾಜ ಅಹೋರಾತ್ರಿ ಧರಣಿ ಕೈಗೊಂಡರು ಸರ್ಕಾರದ ಯಾವುದೇ ಸಚಿವರು ಸಮಾಜದ ನೋವನ್ನು ಕೇಳಲಿಕ್ಕೆ ಬರದಿರುವುದು ವಿಷಾಧನಿಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗದಗ ಜಿಲ್ಲೆಯ ಉಸ್ತುವಾರಿ ಸಚಿವರು ಬಂಜಾರ ಸಮಾಜದ ಬಗ್ಗೆ ಕಾಳಜಿ ಹೊಂದಿಲ್ಲ. ಅವರು ಸಚಿವರು ಆಗಿ ಸರ್ಕಾರದಲ್ಲಿ ಇರುವುದಕ್ಕೆ ಬಂಜಾರ ಸಮಾಜವು ಕಾರಣವಾಗಿದೆ. ಇದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂದು ತಾಂಡಾಗಳ ನಾಯಕರು ಏನು ನಿರ್ಣಯ ತಗೆದುಕೊಳ್ಳುತ್ತಾರೋ ಅದಕ್ಕೆ ಸಮಾಜ ಒಪ್ಪುಕೊಳ್ಳುತ್ತದೆ. ಇದು ಗದಗ ಜಿಲ್ಲೆಯಲ್ಲಿ ಅಷ್ಟೆ ಅಲ್ಲ ಮುಂದಿನ ದಿನದಲ್ಲಿ ಎಲ್ಲಾ ಜಿಲ್ಲೆಯಲ್ಲಿ ನಡೆಯುತ್ತದೆ ಎಂದು ಎಚ್ಚರಿಸಿದರು.
