Home » News » ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಭ್ರಷ್ಟಾಚಾರ: ನೇರ ಹೊಣೆ ರಾಹುಲ ಗಾಂಧಿ ಮತ್ತು ಸಿಎಂ ಸಿದ್ದರಾಮಯ್ಯ; ಶ್ರೀರಾಮುಲು ಆರೋಪ…

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಭ್ರಷ್ಟಾಚಾರ: ನೇರ ಹೊಣೆ ರಾಹುಲ ಗಾಂಧಿ ಮತ್ತು ಸಿಎಂ ಸಿದ್ದರಾಮಯ್ಯ; ಶ್ರೀರಾಮುಲು ಆರೋಪ…

by CityXPress
0 comments

ಗದಗ : ದೇಶದಾದ್ಯಂತ ಮಹರ್ಷಿ ವಾಲ್ಮೀಕಿ ಜಯಂತಿ ನಡೆಯುತ್ತಿದೆ. ಶ್ರೀವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಭ್ರಷ್ಟಾಚಾರ ನಡೆದಿದೆ ನಿಗಮದ ಹಣವನ್ನು ತೆಲಂಗಾಣಕ್ಕೆ ಕಲಿಸಿದ್ದಾರೆ ಇದಕ್ಕೆಲ್ಲ ನೇರ ಹೊಣೆ ಸಿಎಂ ಸಿದ್ದರಾಮಯ್ಯ ಹಾಗೂ ರಾಹುಲ ಗಾಂಧಿ ಎಂದು ಮಾಜಿ ಸಚಿವ ಶ್ರೀರಾಮುಲು ಆರೋಪಿಸಿದರು.

ಲಕ್ಷ್ಮೇಶ್ವರ ಪಟ್ಟಣದಲ್ಲಿ ಶ್ರೀವಾಲ್ಮೀಕಿ ಜಯಂತಿಯಲ್ಲಿ ಪಾಲ್ಗೊಂಡು ನಂತರ ಪ್ರವಾಸಿ ಮಂದಿರದಲ್ಲಿ  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,

ಸರಕಾರದಲ್ಲಿ ಎಲ್ಲಾವೂ ಸರಿಯಿಲ್ಲ, ತಮ್ಮಲ್ಲಿಯೇ ಕೆಲವರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಸರಕಾರಕ್ಕೆ ಯಾರು ಕಪ್ಪು ಹಣವನ್ನು ಕೊಡುತ್ತಾರೆ ಅವರನ್ನು ಮಾತ್ರ ಉಳಿಸುವುದು, ಇನ್ನುಳಿದವರನ್ನು ಗೇಟಪಾಸ್ ಮಾಡುವ ಪ್ರಯತ್ನ ನಡೆಯಿತ್ತಿದೆ. ಸರ್ಕಾರ ಐಪಿಎಲ್ ಬೆಟ್ಟಿಂಗ್ ತರಹವಾಗಿದೆ ಎಂದು ಹೇಳಿದರು.

ವರದಿ: ಪರಮೇಶ ಎಸ್ ಲಮಾಣಿ

banner

ಉಪಮುಖ್ಯಮಂತ್ರಿ ನವಂಬರ್ ಕ್ರಾಂತಿ ಎಂದು ಹೇಳುತ್ತಿದ್ದಾರೆ. ಆದರೆ ಸಿಎಂ ಒಂದತರ ಮಾತನಾಡಿದರೆ, ಡಿಕೆಸಿ ಒಂದು ತರಹದ ಮಾತನಾಡುತ್ತಾರೆ.

ಈಗಾಗಲೇ ಜನರು ರೊಚ್ಚಿಗೆದ್ದಿದ್ದಾರೆ ಮುಂದೆ ಜನರು ಸರಕಾರಕ್ಕೆ ತಕ್ಕಪಾಠ ಕಲಿಸುತ್ತಾರೆ ಎಂದು ಹೇಳಿದರು.

ಬಿಜೆಪಿಯಲ್ಲಿ ಬಿನ್ನಪ್ರಾಯದ ಬಗ್ಗೆ ಗದಗನಲ್ಲಿ ಶ್ರೀರಾಮಲು ಹೇಳಿದ್ದೇನು..!

ಬಿಜೆಪಿಯಲ್ಲಿ ಭಿನ್ನಾಭಿಪ್ರಾಯದ ಬಗ್ಗೆ ಮಾದ್ಯಮದವರು ಕೇಳಿದ ಪ್ರೇಶ್ನೆಗೆ ಬಿಜೆಪಿ ಮಾಜಿ ಸಚಿವ ಶ್ರೀರಾಮಲು ಮಾತನಾಡಿ ಪಕ್ಷದಲ್ಲಿ ಭಿನ್ನಾಭಿಪ್ರಾಯಗಳು ಬರುವುದು ಸಹಜ ನಾವು ಎಲ್ಲರೂ ಸೇರಿಕೊಂಡು ಬಿಜೆಪಿ ತೀರ್ಮಾನವನ್ನು ಒಪ್ಪುತ್ತೇವೆ ಮುಂದಿನ ಚುನಾವಣೆಯಲ್ಲಿ ಎಲ್ಲರೂ ಒಗ್ಗುಡಿಕೊಂಡಿಕೊಂಡು ಹೋಗುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

RSS ತಪ್ಪು ಮಾಡಿದೆ ಎನ್ನುವುದಕ್ಕೆ ಒಂದು ಸಬುತು ತೋರಿಸಲಿ; ಶ್ರೀರಾಮುಲು

ಸುಮಾರು ನೂರು ವರ್ಷಗಳ ಕಾಲ ದೇಶದ ಸೇವೆ ಜನರ ಸೇವೆಯನ್ನು ಮಾಡುಕೊಂಡು ಬಂದಿರುವ ಆರ್.ಎಸ್.ಎಸ್ ಗೆ ಬ್ಯಾನ ಮಾಡುತ್ತೇವೆ ಎನ್ನುತ್ತಾರಲ್ಲ ತಪ್ಪು ಮಾಡಿದ ಉದಾಹರಣೆ ತೋರಿಸಿ ಎಂದು ಮಾಜಿ ಸಚಿವ ಶ್ರೀರಾಮುಲು‌ ಎಂದು ಹೇಳಿದರು.

ಆರ್.ಎಸ್.ಎಸ್. ನ್ನು ಜವಾಹರಲಾಲ್ ನೆಹರು ಅವರು ಮೆಚ್ಚಿದರು ಆರ್.ಎಸ್.ಎಸ್ ತಪ್ಪು ಮಾಡಿದೆ ಎನ್ನುವುದಕ್ಕೆ ಒಂದು ಸಬುತು ಸಾಕ್ಷಿ ತೋರಿಸಲಿ ಆರ್.ಎಸ್.ಎಸ್. ಜನರ ಸೇವೆ ದೇಶದ ಸೇವೆಯನ್ನು ಮಾಡಿಕೊಂಡು ಬಂದಿದೆ ಎಂದು ಹೇಳಿದರು.

ಬಿಜೆಪಿ, ಕಾಂಗ್ರೆಸ್ ಸರಕಾರದ ಗ್ಯಾರಂಟಿಯನ್ನು ಕಾಪಿ ಮಾಡುತ್ತಿದ್ದಾರೆ ಎನ್ನುವುದಕ್ಕೆ ಶ್ರೀರಾಮುಲು ಹೇಳಿದ್ದೇನು..!

2023 ರ ಚುನಾವಣೆಯಲ್ಲಿ ಜನರು ನಮ್ಮನ್ನು ತಿರಸ್ಕಾರ ಮಾಡಿದ್ದಾರೆ. ಬೇರೆ ಬೇರೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದೆ ಅವರ ಪರಿಸ್ಥಿತಿ ಏನಾಗಿದೆ ತೆಲಂಗಾಣದಲ್ಲಿ ಸಂಬಳ ಕೊಡುವುದಕ್ಕೆ ಆಗುತ್ತಿಲ್ಲ. ಇದಕ್ಕೆಲ್ಲ ಗ್ಯಾರಂಟಿ ಎಫೆಕ್ಟ್ ಅಲ್ಲವೇ ಎಂದು ಹೇಳಿದರು.

ಬಿಜೆಪಿಯವರು ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳನ್ನು ಕಾಪಿ ಮಾಡುತ್ತಿಲ್ಲ, ನಾವು ಉದ್ಯೋಗ ಸೃಷ್ಟಿ ಮಾಡುತ್ತೇವೆ. ಅದು ಹೇಗೆ ಎಂದರೆ ಸಣ್ಣ ಕೈಗಾರಿಕೆ, ಉದ್ಯೋಗ ಖಾತ್ರಿ ಒಂದು ವ್ಯಕ್ತಿಯನ್ನು ಸ್ವಾವಲಂಭಿಯಾಗಿ ಮಾಡುತ್ತೇವೆ ಎಂದು ಅಭಿಪ್ರಾಯ ಪಟ್ಟರು.

ಕಾಂಗ್ರೆಸ್ ಸರಕಾರದ ಪ್ರತಿಯೊಂದು ಇಲಾಖೆಯಲ್ಲಿ ಭ್ರಷ್ಟಾಚಾರ; ಶ್ರೀರಾಮುಲು

ಕಾಂಗ್ರೆಸ್ ಸರಕಾರದ ಪ್ರತಿಯೊಂದು ಇಲಾಖೆಯಲ್ಲಿ ಭ್ರಮಾಂಡ ಭ್ರಷ್ಟಾಚಾರ ನಡೆದಿದೆ ಅದಕ್ಕೆ ಸರಕಾರದ ಬಗ್ಗೆ ಜನರು ವಿಶ್ವಾಸ ಕಳೆದುಕೊಂಡಿದ್ದಾರೆ ಸರಕಾರಕ್ಕೆ ಮುಂದೆ ಭವಿಷ್ಯವಿಲ್ಲ ಎಂದು ಶ್ರೀರಾಮುಲು ಹೇಳಿದರು.

ಸರಕಾರದಲ್ಲಿ ಇದ್ದವರಿಗೊಂದು ನ್ಯಾಯ ಇಲ್ಲದವರಿಗೊಂದು ನ್ಯಾಯವಾಗಿದೆ ಲಾ ಆಂಡ್ ಆರ್ಡರ್ ಸರಿಇಲ್ಲ ಎಲ್ಲ ನೋಡಿದರು ಭ್ರಷ್ಟಾಚಾರ ದೌರ್ಜನ್ಯ ಅತ್ಯಾಚಾರ ನಡೆಯುತ್ತಿದೆ ಎಂದು ಗುಡುಗಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಶಾಸಕ ಡಾ.ಚಂದ್ರು ಲಮಾಣಿ ಸುನೀಲ ಮಹಾಂತಶೆಟ್ಟರ ಗಂಗಾಧರ ಮೆಣಸಿನಕಾಯಿ ಭೀಮಣ್ಣ ಯಂಗಾಡಿ ಸೇರಿದಂತೆ ಅನೇಕರು ಇದ್ದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb