Home » News » ರೈತ ಹೋರಾಟ ಬೆಂಬಲಿಸಿ ಲಕ್ಷ್ಮೇಶ್ವರ ಬಂದ್ ಯಶಸ್ವಿ..! ಉಪವಾಸ ನಿರತ ಕುಮಾರ ಮಹಾರಾಜರು ಅಸ್ವಸ್ಥ…!

ರೈತ ಹೋರಾಟ ಬೆಂಬಲಿಸಿ ಲಕ್ಷ್ಮೇಶ್ವರ ಬಂದ್ ಯಶಸ್ವಿ..! ಉಪವಾಸ ನಿರತ ಕುಮಾರ ಮಹಾರಾಜರು ಅಸ್ವಸ್ಥ…!

by CityXPress
0 comments

ಗದಗ(ಲಕ್ಷ್ಮೇಶ್ವರ):  ಪಟ್ಟಣದಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸುವಂತೆ ವಿವಿಧ ರೈತಪರ ಸಂಘಟನೆಗಳು ನಡೆಸುತ್ತಿರುವ ಧರಣಿ ಸತ್ಯಾಗ್ರಹದ ಆರನೇ ದಿನವಾದ ಗುರುವಾರ ಲಕ್ಷ್ಮೇಶ್ವರ ಬಂದ್ ಮಾಡಿ ಆಕ್ರೋಶಗೊಂಡರು.

ಸಾವಿರಾರು ಸಂಖ್ಯೆಯಲ್ಲಿ ಸೇರಿದ ರೈತರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಸರಕಾರದ ವಿರುದ್ದ ಗೋಷಣೆ ಕೂಗಿ ತಮ್ಮ ಆಕ್ರೋಶ ಹೋರಹಾಕಿದರು ಎತ್ತು ಚಕ್ಕಡಿಗಳೊಂದಿಗೆ ಆಗಮಿಸಿದ ರೈತರು ಬೆಂಬಲ‌ ಬೆಲೆ ಖರೀದಿ ಕೇಂದ್ರ ಆರಂಭಿಸ ಹೋರಾಟವನ್ನು ಇನ್ನಷ್ಟು ತ್ರೀವ್ರಗೊಳಿಸುವ ಎಚ್ಚರಿಕೆಯನ್ನು ನೀಡಿದರು ನಂತರ ಪ್ರತಿಭಟನಾಕಾರರು ಸಭಾವೇದಿಕೆಯಲ್ಲಿ‌‌ ಬಾಗವಹಿಸಿದರು.

ವರದಿ: ಪರಮೇಶ ಎಸ್ ಲಮಾಣಿ

ಮಾತನಾಡಿದ ಎಲ್ಲಾ ಮುಖಂಡರು ಉತ್ತರ ಕರ್ನಾಟದ್ಯಾಂತ ಮೆಕ್ಕೆಜೋಳ ಬೆಳೆದಿರುವ ರೈತರು ಬೆಲೆ ಕುಸಿದದಿಂದಾಗಿ ಸಂಕಷ್ಟದಲ್ಲಿದ್ದು ರಾಜ್ಯ ಸರಕಾರವೇ ಆಗಲಿ ಕೇಂದ್ರ ಸರಕಾರವೇ ಆಗಲಿ‌ ಒಬ್ಬರ ಮೇಲೊಬ್ಬರು ಬಟ್ಟು ಮಾಡಿ ಕುಳಿತರೆ ರೈತರು ತಾಳ್ಮೆಯನ್ನು ಕಳೆದುಕೊಂಡು ಬಿದಿಗೆ ಬಿದ್ದರೆ ಮುಂದಾಗುವ ಯಾವುದೇ ಅನಾಹುತಕ್ಕೆ ನೇರವಾಗಿ ಸರಕಾರವೇ‌ ಹೂಣೆಯಾಗುತ್ತದೆ ರೈತರ ತಾಳ್ಮೆಯನ್ನು ಕೆನಕಬೇಡಿ ಎಂದು ಎಚ್ಚರಿಸಿದರು

banner

ಮೆರವಣಿಗೆಯಲ್ಲಿ ವಿವಿಧ ರೈತಪರ‌ ಸಂಘಟನೆಗಳ ಪದಾಧಿಕಾರಿಗಳು ಕನ್ನಡಪರ ಸಂಘಟನೆಗಳು ವಾಪ್ಯಾರಸ್ಥರ ಸಂಘ ವರ್ತಕರ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದರು ಬಂದ ಕಾರಣ ಬಸ್ಸ್ ಸಂಚಾರ ಸಂಪೂರ್ಣ ಸ್ಥಿಗಿತಗೊಂಡಿತ್ತು ವ್ಯಾಪಾರ ವೈವಾಟು ಸೇರಿದಂತೆ ಶಾಲಾ ಕಾಲೇಜುಗಳು ಚಿತ್ರಮಂದಿರಗಳು ಬಂದವಾಗಿದ್ದವು ಒಟ್ಟಾರೆ ಲಕ್ಷ್ಮೇಶ್ವರ ಪಟ್ಟಣ ಸಂಪೂರ್ಣ ಬಂದ್‌ ಯಶಸ್ವಿಯಾಗಿ ಮಾರ್ಪಟ್ಟಿತ್ತು.

ಪ್ರತಿಭಟನೆಯಲ್ಲಿ ಮಂಜುನಾಥ ಮಾಗಡಿ,ಎಂ.ಎಸ್.ದೊಡ್ಡಗೌಡರ,ಸೋಮಣ್ಣ ಡಾನಗಲ್, ಸೋಮನಗೌಡ್ರು ಅಡರಕಟ್ಟಿ, ನಾಗರಾಜ ಚಿಂಚಲಿ, ಚಂದ್ರು ಮಾಗಡಿ,ಮಹೇಶ ಹೊಗೆಸೊಪ್ಪಿನ, ಬಸವರಾಜ ಜಾಲಗಾರ,ನಾಗಪ್ಪ ಓಂಕಾರಿ, ಶಿವಾನಂದ ನಿಂಗಶೆಟ್ಟಿ, ಹೊನ್ನಪ್ಪ ವಡ್ಡರ,ಸೋಮಪ್ಪ ಮುಳಗುಂದ,ಯಲ್ಲಪ್ಪ ಕರಮುಡಿ ದೇವಪ್ಪ ಮಾಳಗಿಮನಿ‌ ಸೋಮಶೇಖರ‌‌ ಹಿರೇಮಠ ಚನ್ನಪ್ಪ‌‌ ಷಣ್ಮುಖ ರವಿಕಾಂತ ಅಂಗಡಿ, ಚಂಬಣ್ಣ ಬಾಳಿಕಾಯಿ,ನೀಲಪ್ಪ ಕರ್ಜಕಣ್ಣವರ ಟಾಕಪ್ಪ‌ ಸಾತಪೊತೆ ಮಹಾದೇವಗೌಡ ನರಸಮ್ಮನವರ,ಮಲ್ಲೇಶ ಅಂಕಲಿ,ಗುರಪ್ಪ‌ ಮುಳಗುಂದ, ಶರಣು ಗೋಡಿ,ಇಸ್ಮಾಯಿಲ್ ಆಡೂರ್,ನಿಂಬಣ್ಣ ಮಡಿವಾಳರ,ನೀಲಪ್ಪ‌ ಶೆರಶೂರಿ,ಪರಮೇಶಗೌಡ ಪಾಟೀಲ್,ಟೋಪ್ಪಣ್ಣ ಲಮಾಣಿ‌ ಥಾವರಪ್ಪ‌ ಲಮಾಣಿ, ಸೇರಿದಂತೆ ಅನೇಕರು ಭಾಗವಹಿಸಿದರು ಪೋಲಿಸ್ ಬಂದೋಬಸ್ತ್ ಮಾಡಲಾಗಿತ್ತು.

ಬಾಕ್ಸ್.

ಅಸ್ವಸ್ಥಗೊಂಡ ಡಾ.ಕುಮಾರ ಮಹಾರಾಜರು ಜಿಲ್ಲಾ ಆಸ್ಪತ್ರೆಗೆ ದಾಖಲು

ಪಟ್ಟಣದಲ್ಲಿ ಕಳೆದ ಆರು ದಿನಗಳಿಂದ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸುವಂತೆ ಒತ್ತಾಯಿಸಿ ವಿವಿಧ ರೈತಪರ ಸಂಘಟನೆಯ ಧರಣಿ ಸತ್ಯಾಗ್ರಹದಲ್ಲಿ ಆಮರಣ ಉಪವಾಸ ಕೈಗೊಂಡಿದ್ದ ಆದರಹಳ್ಳಿ ಗವಿಮಠದ ಡಾ.ಕುಮಾರ ಮಹಾರಾಜರು ತ್ರೀವ್ರ ಅಸ್ವಸ್ಥಗೊಂಡಿರುವ ಘಟನೆ ಜರುಗಿದೆ.

ಸತತ ವೈದ್ಯಕೀಯ ಪರಿಕ್ಷೇಗೆ ಒಳಗಾಗಿದ್ದ ಶ್ರೀಗಳ‌ ಆರೋಗ್ಯ ಸ್ಥಿತಿ‌ ಗಂಭೀರವಾಗಿದೆ ಎಂದು ವರದಿ ಬರುತ್ತಿದ್ದಂತೆ ಡೈವಾಯ್ ಎಸ್ ಖಾದ್ರಿ ಅವರು ಕೂಡಲೇ ಅವರನ್ನು ಚಿಕಿತ್ಸೆಗೆ ಆ್ಯಂಬುಲೇನ್ಸನ್ ಮೂಲಕ ಜಿಮ್ಸ್ ಆಸ್ಪತ್ರೆಗೆ ಸಾಗಿಸಿದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb