Home » News » ಬುದ್ಧಿವಾದ ಹೇಳಿದ್ದಕ್ಕೆ ಇಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ: ಗದಗನ ಭೀಷ್ಮ ಕೆರೆಗೆ ಹಾರಿ ಪ್ರಾಣ ಬಿಟ್ಟ ಯುವತಿ..!

ಬುದ್ಧಿವಾದ ಹೇಳಿದ್ದಕ್ಕೆ ಇಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ: ಗದಗನ ಭೀಷ್ಮ ಕೆರೆಗೆ ಹಾರಿ ಪ್ರಾಣ ಬಿಟ್ಟ ಯುವತಿ..!

by CityXPress
0 comments

ಗದಗ:
ತಾಲೂಕಿನ ಹೃದಯ ಭಾಗದಲ್ಲಿರುವ ಭೀಷ್ಮ ಕೆರೆಯಲ್ಲಿ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬಾಗಲಕೋಟೆ ಜಿಲ್ಲೆಯ ಶಿರೂರು ಮೂಲದ ಚಂದ್ರಿಕಾ ನಡುವಿನಮನಿ (21) ಎಂಬ ಇಂಜಿನಿಯರಿಂಗ್ ಅಂತಿಮ ವರ್ಷದ ವಿದ್ಯಾರ್ಥಿನಿ ತಡರಾತ್ರಿ ಕೆರೆಗೆ ಹಾರಿ ಪ್ರಾಣ ಬಿಟ್ಟಿದ್ದಾಳೆ.

ಮೃತ ಯುವತಿ ಗದಗ ನಗರದಲ್ಲಿರುವ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಂತಿಮ ವರ್ಷದ ವ್ಯಾಸಂಗ ಮಾಡುತ್ತಿದ್ದು, ಕಳೆದ ಕೆಲವು ವರ್ಷಗಳಿಂದ ಉತ್ತಮ ಶೈಕ್ಷಣಿಕ ಸಾಧನೆಗಾಗಿ ಪರಿಚಿತೆಯಾಗಿದ್ದಳು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಮೊದಲ ರ್ಯಾಂಕ್ ಪಡೆದಿದ್ದ ಚಂದ್ರಿಕಾ, ಸರ್ಕಾರಿ ಕೂಟಾದಲ್ಲಿ ಇಂಜಿನಿಯರಿಂಗ್ ಸೀಟ್ ಪಡೆದಿದ್ದರು. ಇನ್ನೇನು ಆರು ತಿಂಗಳು ಕಳೆದಿದ್ದರೆ, ಪದವಿ ಸಂಪೂರ್ಣಗೊಳ್ಳಬೇಕಿತ್ತು.

ಪರೀಕ್ಷೆಗಳು ಸಮೀಪಿಸುತ್ತಿದ್ದ ಹಿನ್ನೆಲೆಯಲ್ಲಿ ಚನ್ನಾಗಿ ಓದಬೇಕೆಂದು ಸಹೋದರ ಬುದ್ದಿವಾದ ಹೇಳಿದ್ದನ್ನು ಮನಸ್ಸಿಗೆ ಹಚ್ಚಿಕೊಂಡು, ತಡ ರಾತ್ರಿ ತಾನು ವಾಸ ಮಾಡುತ್ತಿದ್ದ ಮನೆಯಿಂದಲೇ ಹೊರಟಿದ್ದಾಳೆ. ಸುಮಾರು ರಾತ್ರಿ 1:30ರ ಹೊತ್ತಿಗೆ ಭೀಷ್ಮ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬುದು ಪ್ರಾಥಮಿಕ ಮಾಹಿತಿ.

ಬೆಳಿಗ್ಗೆ ಕೆರೆಯಲ್ಲಿನ ಶವವನ್ನು ಸ್ಥಳೀಯರು ಕಂಡು ಗದಗ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ನಂತರ ಸ್ಥಳಕ್ಕೆ ಬಂದ ಪೊಲೀಸರು ಶವವನ್ನು ಪರೀಕ್ಷಿಸಿ, ವಿದ್ಯಾರ್ಥಿನಿಯ ಗುರುತುಗಾರಿಕೆ ನಡೆಸಿದರು. ಚಂದ್ರಿಕಾ ವಾಸವಾಗಿದ್ದ ಮನೆಯಲ್ಲಿ ಅವಳೊಂದಿಗೆ ಇದ್ದ ನಾಲ್ವರು ಸ್ನೇಹಿತೆಯರು, “ಅವಳು ಕಾಣಿಸುತ್ತಿಲ್ಲ” ಎಂದು ಸಹೋದರನಿಗೆ ಕರೆ ಮಾಡಿದ್ದಾಗಲೇ ಆತ ಗದಗಕ್ಕೆ ಆಗಮಿಸಿದ್ದ. ಕೆರೆಯ ಬಳಿ ಪತ್ತೆಯಾದ ಶವವನ್ನು ನೋಡಿದ ಸಹೋದರ ತಂಗಿಯೇ ಎಂದು ಗುರುತಿಸಿದ್ದಾರೆ.

banner

ಸಹೋದರನ ಪ್ರಕಾರ—ಒಂದು ದಿನ ಮುನ್ನವೇ, “ಪರೀಕ್ಷೆಗಳು ಹತ್ತಿರ ಬರುತ್ತಿವೆ, ಅಭ್ಯಾಸಕ್ಕೆ ಹೆಚ್ಚಿನ ಗಮನಕೊಡು” ಎಂದು ತಾನೇ ಬುದ್ದಿವಾದ ಹೇಳಿದ್ದಾಗಿ ಹೇಳಿರುವುದು ತಿಳಿದುಬಂದಿದೆ. ಈ ಮಾತನ್ನೇ ಮನನೊಂದು ತಂಗಿ ಇಂತಹ ಅತೀವ ಕ್ರಮ ಕೈಗೊಂಡಿದ್ದಾಳೆ ಎನ್ನಲಾಗುತ್ತಿದೆ.

ಚಂದ್ರಿಕಾ ಇತ್ತೀಚೆಗೆ ಸ್ನೇಹಿತರೊಂದಿಗೆ ಪ್ರವಾಸಕ್ಕೆ ಹೋಗಿದ್ದ ಕಾರಣ, ಇನ್ನಷ್ಟು ಗಂಭೀರವಾಗಿ ಓದಲು ಕುಟುಂಬದವರು ಉತ್ತೇಜನ ನೀಡಿದ್ದಾರಂತೆ. ಹಾಸ್ಟೆಲ್ ಬಿಟ್ಟು, ನಾಲ್ವರು ಸ್ನೇಹಿತಿಯರೊಂದಿಗೆ ಪ್ರತ್ಯೇಕವಾಗಿ ಮನೆ ಬಾಡಿಗೆಗೆ ತೆಗೆದುಕೊಂಡು ಅಭ್ಯಾಸ ಮಾಡುತ್ತಿದ್ದಳು.

ಘಟನೆಯು ನಡೆದ ಭೀಷ್ಮಕೆರೆಯಲ್ಲಿ ಯಾವುದೇ ಗೇಟ್ ಅಥವಾ ತಡೆಗೋಡೆಗಳಿಲ್ಲದ ಕಾರಣದಿಂದ, ಆತ್ಮಹತ್ಯೆಗೆ ಇದು ಸುಲಭ ಸ್ಥಳವಾಗುತ್ತಿದೆ ಎಂಬ ಸ್ಥಳೀಯರ ಆಕ್ಷೇಪವೂ ಕೇಳಿಬಂದಿದೆ. ಕೆಲವೇ ತಿಂಗಳಲ್ಲಿ ಇಲ್ಲಿ ಹಲವು ಆತ್ಮಹತ್ಯೆ ಪ್ರಕರಣಗಳು ಸಂಭವಿಸಿರುವುದಾಗಿ ಮೂಲಗಳು ತಿಳಿಸಿವೆ.

ಈ ಬಗ್ಗೆ ಗದಗ ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಶೈಕ್ಷಣಿಕವಾಗಿ, ಭವಿಷ್ಯದಲ್ಲಿ ಒಳ್ಳೆಯ ಇಂಜಿನಿಯರ್ ಆಗಬೇಕಿದ್ದ ಪ್ರತಿಭೆಯೊಂದು ಅಲ್ಪ ಕಾರಣಕ್ಕಾಗಿ ಅಕಾಲಿಕವಾಗಿ ಜೀವನ ಬಿಟ್ಟಿರುವುದು ಆತಂಕಕಾರಿ ಸಂಗತಿ ಎಂದು ಶಿಕ್ಷಣ ವಲಯದಿಂದ ಕಳವಳ ವ್ಯಕ್ತವಾಗಿದೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb