ಲಕ್ಷ್ಮೇಶ್ವರ: ಕೆರೆಗಳ ಪುನರುಜ್ಜಿವನ ಗೊಳಿಸುವ ಉದ್ದೇಶದಿಂದ ಕ್ಷೇತ್ರದಲ್ಲಿ ಹಲವಾರು ಕೆರೆಗಳ ಅಭಿವೃದ್ದಿಗೆ ಅನುಧಾನವನ್ನು ಬಿಡುಗಡೆಗೊಳಿಸಲಾಗಿದೆ, ಸಣ್ಣ ನೀರಾವರಿ ಇಲಾಖೆಯಿಂದ ಸುಮಾರು ೧೮ ಲಕ್ಷ ರೂಗಳಲ್ಲಿ ಸೂರಣಗಿ ಗ್ರಾಮದಲ್ಲಿನ ಕೆರೆ ಅಭಿವೃದ್ದಿಯನ್ನು ಕೈಗೊಳ್ಳಲಾಗುತ್ತಿದ್ದು, ಗುತ್ತಿಗೆದಾರರು ಸರಿಯಾದ ರೀತಿಯಲ್ಲಿ ಕಾಮಗಾರಿಯನ್ನು ನಿರ್ವಹಿಸುವ ಮೂಲಕ ಜನರಿಗೆ ಅನೂಕೂಲ ಕಲ್ಪಿಸಬೇಕೆಂದು ಶಾಸಕ ಡಾ.ಚಂದ್ರು ಲಮಾಣಿ ತಿಳಿಸಿದರು.
ವರದಿ : ಪರಮೇಶ ಎಸ್ ಲಮಾಣಿ
ಅವರು ತಾಲೂಕಿನ ಸೂರಣಗಿ ಗ್ರಾಮದಲ್ಲಿ ಗುರುವಾರ ಸಣ್ಣ ನೀರಾವರಿ ಇಲಾಖೆಯಿಂದ ಸುಮಾರು ೧೮ ಲಕ್ಷ ರೂಗಳ ವೆಚ್ಚದಲ್ಲಿ ಕೆರೆ ಅಭಿವೃದ್ದಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಜನರಿಗೆ ಕೆರೆ, ಹಳ್ಳಗಳು ನೀರಿಗೆ ಆಧಾರವಾಗಿರುತ್ತವೆ, ಅದಕ್ಕಾಗಿ ಗ್ರಾಮೀಣ ಭಾಗದಲ್ಲಿ ಇರುವ ಅನೇಕ ಕೆರೆಗಳ ಅಭಿವೃದ್ದಿಗೆ ಕ್ರಮ ಕೈಗೊಂಡಿದ್ದೇವೆ, ಗ್ರಾಮಸ್ಥರು ಕೆರೆಯ ಸುತ್ತಮುತ್ತ ಗಲೀಜು ಮಾಡುವದು, ತಿಪ್ಪೆಗಳನ್ನು ಹಾಕುವದು ಮಾಡಬಾರದು ಇದರಿಂದ ಕೆರೆಗೆ ಗಲೀಜು ಬೆರೆತು ನೀರು ಸಹ ಕಲ್ಮಶವಾಗುತ್ತದೆ ಇದನ್ನು ಸರಿಯಾಗಿ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಗ್ರಾಮಸ್ಥರು ಆಧ್ಯತೆ ನೀಡಿ, ದನಕರುಗಳಿಗೆ, ಪಶುಪಕ್ಷಿಗಳಿಗೆ ಹಾಗೂ ಜನರಿಗೆ ಕೆರೆಗಳ ನೀರು ಸರಿಯಾಗಿ ದೊರಕುವಂತೆ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಶಂಕ್ರಣ್ಣ ಶೀರನಹಳ್ಳಿ, ಸೋಮಣ್ಣ ದೊಡ್ಡಗಣ್ಣವರ, ವಿರೇಶ ಕಳ್ಳಿಹಾಳ, ಬಸವರಾಜ ಇಟಗಿ, ಪೀರಸಾಬ, ಕೃಷ್ಣ ಲಮಾಣಿ, ಲೋಕಪ್ಪ ಪೂಜಾರ, ಸಚಿನ್ ಮೇಲ್ಮುರಿ, ವೀರಭದ್ರಯ್ಯ ಮಠಪತಿ, ಪಿಡಿಓ ಗೌರಮ್ಮ ರೋಣದ, ನಿಂಗಪ್ಪ ಬನ್ನಿ, ನಾಗರಾಜ ಹಾವಳಕೇರಿ, ಸಂತೋಷ, ಗಂಗಾಧರ ಮೆಣಸಿನಕಾಯಿ, ಜಾನು ಲಮಾಣಿ, ನಾಗರಾಜ, ಕಾರ್ಯದರ್ಶಿ ಎಸ್.ಎಫ್.ಹಳ್ಯಾಳ, ಎಂಐಡಿಯ ಪ್ರವೀಣ ಪಾಟೀಲ ಸೇರಿದಂತೆ ಅನೇಕರಿದ್ದರು.
