Home » News » ನರೇಗಾ ಕಾಮಗಾರಿ ಸ್ಥಳಕ್ಕೆ ಇಓ ಭೇಟಿಎರಡು ಬಾರಿ ಇ ಕೆ ವೈ ಸಿ ಕಡ್ಡಾಯಕಾಮಗಾರಿ ಸ್ಥಳದಲ್ಲಿ ರೋಜಗಾರ್ ದಿನಾಚರಣೆ …‌.!

ನರೇಗಾ ಕಾಮಗಾರಿ ಸ್ಥಳಕ್ಕೆ ಇಓ ಭೇಟಿಎರಡು ಬಾರಿ ಇ ಕೆ ವೈ ಸಿ ಕಡ್ಡಾಯಕಾಮಗಾರಿ ಸ್ಥಳದಲ್ಲಿ ರೋಜಗಾರ್ ದಿನಾಚರಣೆ …‌.!

by CityXPress
0 comments

ಗದಗ(ಲಕ್ಷ್ಮೇಶ್ವರ): ನರೇಗಾ ಯೋಜನೆ ಅಡಿ ಸಾಮೂಹಿಕ ಬದು ನಿರ್ಮಾಣ ಕಾಮಗಾರಿ ಪ್ರಾರಂಭವಾಗಿದ್ದು ನರೇಗಾ ಕೂಲಿಕಾರರು ಕಡ್ಡಾಯವಾಗಿ ಎರಡು ಬಾರಿ ಹಾಜರಾತಿ ನೀಡಬೇಕೆಂದು ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಮಂಜುಳಾ ಹಕಾರಿ ಸಲಹೆ ನೀಡಿದರು.

ವರದಿ : ಪರಮೇಶ ಎಸ್ ಲಮಾಣಿ.

ತಾಲೂಕಿನ ಸೂರಣಗಿ ಗ್ರಾಮ ಪಂಚಾಯಿತಿಯಲ್ಲಿ ಮೊದಲನೇ ದಿನದ ಸಾಮೂಹಿಕ ಬದು ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಗುರುವಾರ ಭೇಟಿ ನೀಡಿ ಕೂಲಿಕಾರರ ಕೆಲಸವನ್ನು ಪರಿಶೀಲಿಸಿ ಅಳತೆಗೆ ತಕ್ಕ ಕೆಲಸವನ್ನು ನೀಡಿ,ಕೂಲಿಕಾರ್ಮಿಕರು ಎರಡು ಬಾರಿ ಹಾಜರಾತಿ ಹಾಕಿಸದಿದ್ದರೆ ಕೂಲಿ ಪಾವತಿ ಆಗುವುದಿಲ್ಲ ಎಲ್ಲರೂ ಸರಿಯಾಗಿ ಕೆಲಸವನ್ನು ನಿರ್ವಹಿಸಿ 370₹ ಕೂಲಿಯನ್ನ ಪಡೆದುಕೊಳ್ಳಬಹುದು ಎಂದು ತಿಳಿಸಿದರು.

ತಾಲೂಕು ಪಂಚಾಯಿತಿಯ ಗ್ರಾಮೀಣ ಉದ್ಯೋಗ ಖಾತ್ರಿಯ ಸಹಾಯಕ ನಿರ್ದೇಶಕರಾದ ಶ್ರೀ ಧರ್ಮರ ಕೃಷ್ಣಪ್ಪ ಮಾತನಾಡಿ ಕೂಲಿಕಾರರು ಆರೋಗ್ಯವನ್ನು ಸರಿಯಾಗಿ ಇಟ್ಟುಕೊಳ್ಳಬೇಕು, ಮುಂಜಾನೆ ಬೇಗ ಬಂದು ಅಳತೆಗೆ ತಕ್ಕ ಕೆಲಸ ನೀಡಿ ಬೇಗ ಮುಗಿಸಿಕೊಂಡು ಹಾಜರಾತಿ ನೀಡಿ ಮನೆಗೆ ಹೋಗಬೇಕು, ಎರಡು ಬಾರಿ ಹಾಜರಾತಿ ನೀಡಿದವರಿಗೆ 370₹ ಕೂಲಿ ತಮ್ಮ ಖಾತೆಗೆ ನೇರವಾಗಿ ವರ್ಗಾವಣೆಯಾಗುತ್ತದೆ ಎಂದು ತಿಳಿಸಿದರು. ಅಲ್ಲದೆ ಸಾಮಾಜಿಕ ಭದ್ರತೆ ಯೋಜನೆ, ವಿಮಾ ಯೋಜನೆ, ನರೇಗಾ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಕಾಯಕ ಬಂಧುಗಳು ಕೂಲಿಕಾರರಿಗೆ ನೆರಳಿನ, ಕುಡಿಯುವ ನೀರಿನ, ವ್ಯವಸ್ಥೆಯನ್ನು ಮಾಡಬೇಕು ಅವರ ಹಾಜರಾತಿ ಕಡ್ಡಾಯವಾಗಿ ನಿರ್ವಹಿಸಬೇಕು ಎಂದು ಮಾರ್ಗದರ್ಶನಗಳನ್ನ ನೀಡಿದರು.

banner

ಈ ವೇಳೆ ಸುರಣಗಿ ಪಿಡಿಓ ಶ್ರೀಮತಿ ಜಿಎಂ ರೋಣದ, ಟಿ ಐ ಇ ಸಿ ಮಂಜುನಾಥ್ ಸ್ವಾಮಿ ಹೆಚ್ ಎಂ, ಟಿ ಎಂ ಐ ಎಸ್ ಚಂದ್ರಶೇಖರ್ ಹಳ್ಳಿ, ತಾಂತ್ರಿಕ ಸಹಾಯಕ ಫಕೀರೇಶ ನಿಟ್ಟಾಲಿ, ಬಿ ಎಫ್ ಟಿ ಕಾಸಿಂ ಸಾಬ್ ನದಾಫ್, ಡಿ ಇ ಓ ಗುಡ್ಡದಪ್ಪ ಕಮತ, ಕಾಯಕ ಬಂಧುಗಳು, 450 ನರೇಗಾ ಕೂಲಿ ಕಾರ್ಮಿಕರು ಉಪಸ್ಥಿತರಿದ್ದರು.

ಕೋಟ್ :1
ನರೇಗಾ ಕೂಲಿ ಕಾರ್ಮಿಕರು ಕೆಲಸದಿಂದ ಬಂದ ಕೂಲಿ ಹಣವನ್ನು ಕೃಷಿ ಚಟುವಟಿಕೆಗಳಿಗೆ ಬಳಸಿಕೊಳ್ಳಿ, ಮಕ್ಕಳ ಶಿಕ್ಷಣದ ಅಗತ್ಯತೆಗಳಿಗೆ, ಬಳಸಿಕೊಳ್ಳಬೇಕು.

ಮಂಜುಳಾ ಹಕಾರಿ
ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೇಶ್ವರ.

ಕೋಟ್:2
2026-27 ನೇ ಸಾಲಿನ ಕ್ರಿಯಾಯೋಜನೆ ಅನುಮೋದನೆಯ ನಂತರ ಹಾಗೂ ಮುಂಗಾರು ಮಳೆ ಬಿದ್ದು ಕೃಷಿ ಚಟುವಟಿಕೆ ಪ್ರಾರಂಭವಾಗುವವರೆಗೂ ಕೆಲಸ ನೀಡಲಾಗುವುದು.
* ಧರ್ಮರ ಕೃಷ್ಣಪ್ಪ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ತಾಪಂ ಲಕ್ಷ್ಮೇಶ್ವರ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb