Home » News » ಇಂದಿನ ಯುವಕರು ಸ್ಕ್ರೀನ್ ಟೈಮ್ ನಿಂದ ಗ್ರೀನ್ ಟೈಮ್ ಗೆ ತರುವ ಅವಶ್ಯಕತೆ ಇದೆ : ಕುಳಗೇರಿ

ಇಂದಿನ ಯುವಕರು ಸ್ಕ್ರೀನ್ ಟೈಮ್ ನಿಂದ ಗ್ರೀನ್ ಟೈಮ್ ಗೆ ತರುವ ಅವಶ್ಯಕತೆ ಇದೆ : ಕುಳಗೇರಿ

by CityXPress
0 comments

ಲಕ್ಷ್ಮೇಶ್ವರ: ದೇಶ ವಿಭಜಕ ಶಕ್ತಿಗಳ ವಿರುದ್ಧ ವಿದ್ಯಾರ್ಥಿ ಸಮುದಾಯ ಜಾಗೃತವಾಗಬೇಕು, ಭಾರತದ ಏಕತೆ, ಪರಂಪರೆ,ಸಂಸ್ಕೃತಿ, ಸಮಗ್ರತೆ ಹಾಗೂ ಸಂವಿಧಾನದ ಬಗ್ಗೆ ತಿಳಿಕೊಳ್ಳುವ ಕಾರ್ಯ ಮಾಡಬೇಕು ಎಂದು ಎಬಿವಿಪಿಯ ರಾಜ್ಯ ಕಾರ್ಯದರ್ಶಿ ಸಚಿನ ಕುಳಗೇರಿ ಹೇಳಿದರು.

ವರದಿ : ಪರಮೇಶ ಎಸ್ ಲಮಾಣಿ.

ಪಟ್ಟಣದ ಬಿ.ಸಿ.ಎನ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಎಬಿವಿಪಿಯ ಧಾರವಾಡ ವಿಭಾಗ ಅಭ್ಯಾಸ ವರ್ಗವನ್ನು ಉದ್ಘಾಟಿಸಿ ಮಾತನಾಡಿದ ಅವರು ಭಾರತದಲ್ಲಿ ರಾಜಕೀಯ ಕಾರಣಕ್ಕಾಗಿ ನ್ಯಾಯಾಂಗ, ಚುನಾವಣೆ ಆಯೋಗ, ಸಂಸತ್ತು,ಹಾಗೂ ಸಾಂವಿಧಾನಿಕ ಸಂಸ್ಥೆಗಳ ಮೇಲೆ ಅನುಮಾನ ಮೂಡುವ ರೀತಿಯಲ್ಲಿ ಹೇಳಿಕೆಗಳು ನೀಡುತ್ತಿರುವುದು ಶೋಚನೀಯ ಸಂಗತಿ, ಇಂದಿನ ಯುವಕರು ಸ್ಕ್ರೀನ್ ಟೈಮ್ ನಿಂದ ಗ್ರೀನ್ ಟೈಮ್ ಗೆ ತರುವ ಅವಶ್ಯಕತೆ ಇದೆ , ಕ್ರೀಡೆ, ಶಿಕ್ಷಣ, ರಾಷ್ಟ್ರೀಯತೆ, ಕುರಿತು ಆಸಕ್ತಿಯನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಬೇಕು, ಕಾಲೇಜು ವಿದ್ಯಾರ್ಥಿಗಳು ಡ್ರಗ್ಸ್, ಗುಟ್ಕಾ, ಗಾಂಜಾಗಳಿಗೆ ಯುವಕರು ಬಲಿಯಾಗಬಾರದು ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಾಗೃತಿ ಅಭಿಯಾನವನ್ನು ಮಾಡಬೇಕು ಎಂದರು.

ರಾಜ್ಯ ಸರ್ಕಾರ ವಿದ್ಯಾರ್ಥಿಗಳನ್ನು ಸಂಪೂರ್ಣವಾಗಿ ಕಡೆಗಣಿಸಿದೆ ವಿಶ್ವವಿದ್ಯಾಲಯಗಳಿಗೆ ಸರಿಯಾಗಿ ಅನುದಾನ ನೀಡುತ್ತಿಲ್ಲ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ತಲುಪುತ್ತಿಲ್ಲ ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂದರು.

banner

ಎಬಿವಿಪಿಯ ಗದಗ ಜಿಲ್ಲಾ ಪ್ರಮುಖರಾದ ಪುನೀತ ಬೆನಕನವಾರಿ ಮಾತನಾಡಿ ಭಾರತದ ಕೆಲವು ವಿಶ್ವವಿದ್ಯಾಲಯಗಳಲ್ಲಿ ದೇಶದ ವಿರುದ್ಧ ವಿದ್ಯಾರ್ಥಿಗಳನ್ನು ಉಪಯೋಗಿಸಿಕೊಂಡು ದೇಶದ್ರೋಹಿ ಘೋಷಣೆಗಳನ್ನು ಕೂಗುವ ಷಡ್ಯಂತರ ಮಾಡುತ್ತಿರುವವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದರು, ರಾಷ್ಟ್ರ ಕಟ್ಟುವ ಶಕ್ತಿ ಅಂದರೆ ಅದು ವಿದ್ಯಾರ್ಥಿ ಶಕ್ತಿ ಅದನ್ನು ಎಬಿವಿಪಿ ಸಾರ್ಥಕವಾಗಿ ಕಾರ್ಯ ಮಾಡುತ್ತಿದೆ ಎಂದರು.

ಎಬಿವಿಪಿಯ ರಾಜ್ಯ ಸಹ ಕಾರ್ಯದರ್ಶಿ ಅಭಿಷೇಕ ದೊಡಮನಿ ಮಾತನಾಡಿ ಎಬಿವಿಪಿ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸುವ ಸಂಘಟನೆಯಾಗಿದೆ, ವಿಶ್ವದಲ್ಲಿಯೇ ಅತೀ ಹೆಚ್ಚು 75 ಲಕ್ಷಕ್ಕೂ ಅಧಿಕ ಸದಸ್ಯತ್ವವನ್ನು ಹೊಂದಿರುವ ಏಕೈಕ ವಿದ್ಯಾರ್ಥಿ ಸಂಘಟನೆ ಎಬಿಬಿಪಿಯಾಗಿದೆ ಎಂದರು

ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಪ್ರಮುಖರಾದ ವಿಜಯಲಕ್ಷ್ಮಿ ಮಾನೆ, ಶಂಕರ ಕುಂದಗೋಳ, ಪ್ರಕಾಶ ಕುಂಬಾರ, ಅಭಿಷೇಕ ಉಮಚಗಿ, ಸಂಜನಾ ಪಾಟೀಲ, ಹಾಗೂ ಧಾರವಾಡ,ಗದಗ,ಹಾವೇರಿ ಜಿಲ್ಲೆಗಳ ಪ್ರತಿನಿಧಿಗಳು ಉಪಸ್ತಿತರಿದ್ದರು

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb