ಲಕ್ಷ್ಮೇಶ್ವರ: ತಾಲೂಕಿನ ಪು.ಬಡ್ನಿ ಗ್ರಾಮದಲ್ಲಿ ಸುಮಾರು ೧೨.೬೦ ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಗ್ರಂಥಾಲಯ ಕಟ್ಟಡ ಕಾಮಗಾರಿಗೆ ಶಾಸಕ ಡಾ. ಚಂದ್ರು ಲಮಾಣಿ ಅವರು ಭೂಮಿ ಪೂಜೆ ನೆರವೇರಿಸಿದರು.
ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಗ್ರಂಥಾಲಯಗಳು ಅತ್ಯಗತ್ಯ. ಜ್ಞಾನಾರ್ಜನೆಗೆ ಗ್ರಂಥಾಲಯಗಳು ಉತ್ತಮ ವೇದಿಕೆಯಾಗಿದ್ದು, ವಿದ್ಯಾರ್ಥಿಗಳು ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು, ಶಿಕ್ಷಣ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರಲ್ಲದೇ,
ವರದಿ : ಪರಮೇಶ ಎಸ್ ಲಮಾಣಿ.
ಗ್ರಾಮದಲ್ಲಿ ಗ್ರಂಥಾಲಯಗಳು ಇದ್ದರೆ ದೇವಸ್ಥಾನ ನಿರ್ಮಾಣವಾದಂತೆ, ವಿದ್ಯಾರ್ಥಿಗಳು, ವೃದ್ಧರು, ಗೃಹಣಿಯರು ಗ್ರಂಥಾಲಯಗಳಲ್ಲಿ ಕುಳಿತು ಪುಸ್ತಕಗಳನ್ನು ಓದುವ ಮೂಲಕ ಸಮಯ ಕಳೆಯಬೇಕು.
ಸ್ಪರ್ಧಾತ್ಮಕ ಯುಗದಲ್ಲಿ ಯುವಕರು, ವಿದ್ಯಾರ್ಥಿಗಳಿಗೆ ಗ್ರಂಥಾಲಯಗಳು ತುಂಬಾ ಅವ್ಯಕತೆಯಿದೆ. ಉತ್ತಮವಾದ ಕಟ್ಟಡ ಜೊತೆ ಶಿಕ್ಷಣಕ್ಕೆ ಒತ್ತು ನೀಡಬೇಕು, ಪುಸ್ತಕವನ್ನು ನೀವು ಶ್ರದ್ಧೆಯಿಂದ ತಲೆ ಬಾಗಿಸಿ ಓದಿದರೆ ನಿಮಗೆ ಜೀವನದಲ್ಲಿ ತಲೆ ಎತ್ತಿ ನಡೆಯುವಂತೆ ಮಾಡುತ್ತದೆ ಎಂದರು.
ಸಂದರ್ಭದಲ್ಲಿ ಪ್ರೇಮಕ್ಕ ಮಾದರ, ಶಾಂತವ್ವ ಬಟಗುರ್ಕಿ, ಅಶೋಕ ಬಟಗುರ್ಕಿ, ಸುಭಾಸ ಬಟಗುರ್ಕಿ, ಮುತ್ತಣ್ಣ ಚೋಟಗಲ್, ಶಿವಪುತ್ರಪ್ಪ ಚೋಟಗಲ, ರಾಜು ಚೋಟಗಲ್, ಶ್ರೀಕಾಂತ ಚೋಟಗಲ್, ವಾಗೀಶ ಬಟಗುರ್ಕಿ, ಅಶೋಕ ಯಲವಿಗಿ, ಪರಶುರಾಮ ಯಲವಿಗಿ, ಪ್ರಶಾಂತಗೌಡ ಪಾಟೀಲ್, ಶಿವಾನಂದ ಮಾದರ, ಕುಮಾರ ಬೂದಿಹಾಳ, ಶೇಖಣ್ಣ ಕರಣ್ಣವರ್, ಹೊಳಲಪ್ಪ ಕರಣ್ಣವರ್, ಶಿವಶರಣಪ್ಪ ಚೋಟಗಲ್, ಶಂಭು ಕರಣ್ಣಬರ್, ಶಿವಪ್ಪ ಕೊರಕನವರ್ ಹಾಗೂ ಮತ್ತಿತರಿದ್ದರು.
