ಗದಗ : ಸನಾತನ ಭಾರತದ ಸಂಸ್ಕೃತಿಯನ್ನ ವಿಶ್ವಕ್ಕೆ ಸಾರಿ ಹೇಳಿದ ಆಚಾರ್ಯತ್ರಯರಲ್ಲಿ ಮೊದಲಿಗರಾದ ಶ್ರೀ ಶಂಕರಾಚಾರ್ಯರು ಅದ್ವೈತ ವೇದಾಂತದ ಪ್ರತಿಪಾದಕ, ದಾರ್ಶನಿಕರೂ ಆಗಿದ್ದರು ಎಂದು ಸ್ಟುಡೆಂಟ್ಸ್ ಎಜ್ಯುಕೇಶನ್ ಸೊಸೈಟಿಯ ಚೇರ್ಮನ್ರಾದ ಪ್ರೊ. ರಾಜೇಶ ಕುಲಕರ್ಣಿ ಅಭಿಪ್ರಾಯಪಟ್ಟರು.
ಸನ್ಮಾರ್ಗಕಾಲೇಜಿನಲ್ಲಿಆಚರಿಸಲಾದ ಶಂಕರಾಚಾರ್ಯರ ೧೨೩೮ ನೇ ಜನ್ಮ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಪ್ರೊ. ರಾಜೇಶ ಕುಲಕರ್ಣಿ ಕೇವಲ ತಮ್ಮ ೩೨ ವರ್ಷಗಳ ಅಲ್ಪಾಯುಷ್ಯದಲ್ಲಿಅದ್ವೆತ ತತ್ವವನ್ನುಅಂದರೆ ಜೀವಾತ್ಮ ಮತ್ತು ಪರಮಾತ್ಮಒಂದೇ ಎಂಬ ತತ್ವವನ್ನು ಜಗತ್ತಿಗೆ ಸಾರಿದ ಮಹಾನ್ ಸಂತರು ಶ್ರೀ ಶಂಕರ ಭಗವತ್ಪಾದರು ಎಂದು ತಿಳಿಸಿದರು.

ಸಾಂದರ್ಭಿಕವಾಗಿ ಮಾತನಾಡಿದ ಪ್ರಾಚಾರ್ಯರಾದ ಪ್ರೊ.ಪುನೀತ್ ದೇಶಪಾಂಡೆಯವರು ಸನಾತನ ಸಂಸ್ಕೃತಿ ಮತ್ತುಅದ್ವೆತ ತತ್ವದ ಪ್ರಸರಣಕ್ಕಾಗಿ ಭಾರತದ ನಾಲ್ಕು ದಿಕ್ಕುಗಳಲ್ಲಿ – ಶೃಂಗೇರಿ, ಪುರಿ, ದ್ವಾರಕಾ ಹಾಗೂ ಬದರಿ ಮಠಗಳನ್ನು ಸ್ಥಾಪಿಸಿ ಭಾರತೀಯ ಸಂಸ್ಕೃತಿಯನ್ನು ಸಂರಕ್ಷಿಸಿದರು ಎಂದು ಹೇಳುವುದರ ಜೊತೆಗೆ ಶಂಕರರ ಪ್ರಕಾರಜಗತ್ತುಒಂದು ಭ್ರಮೆಯಲ್ಲಅದು ತುಲನಾತ್ಮಕವಾಗಿ ನೈಜವಾಗಿದೆ ಎಂದರು.
ಸ್ಟುಡೆಂಟ್ಸ್ ಎಜ್ಯುಕೇಶನ್ ಸೊಸೈಟಿಯ ಕಾರ್ಯಕ್ರಮದ ಆಡಳಿತಾಧಿಕಾರಿ ಶ್ರೀ ಎಮ್ ಸಿ ಹಿರೇಮಠರ ನೇತೃತ್ವದಲ್ಲಿ ಭಾವಚಿತ್ರ ಪೂಜೆಯ ಶ್ರದ್ಧಾ ಭಕ್ತಿಯಿಂದ ಜರುಗಿತು.ಉಪನ್ಯಾಸಕರು ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಜಯಂತೋತ್ಸವದಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಂಸ್ಥೆಯ ಚೇರಮನ್ ಪ್ರೊ.ರಾಜೇಶಕುಲಕರ್ಣಿ, ನಿರ್ದೇಶಕರುಗಳಾದ ಪ್ರೊ. ರೋಹಿತ್ ಒಡೆಯರ್, ಪ್ರೊ, ಸೈಯದ್ ಮತೀನ ಮುಲ್ಲಾ, ಪ್ರೊ. ರಾಹುಲ್ಒಡೆಯರ್, ಹಾಗೂ ಬೋಧಕ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
