ಲಕ್ಷ್ಮೇಶ್ವರ: ನೂತನ ಸಚಿವ ಸಂಪುಟದಲ್ಲಿ ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರಿಗೆ ಸಚಿವ ಸ್ಥಾನ ನೀಡುವಂತೆ ಅಹಿಂದ ಕಾರ್ಯಕರ್ತರು ಲಕ್ಷ್ಮೇಶ್ವರ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದ ಹೈಕಮಾಂಡ್‌ಗೆ ಆಗ್ರಹಿಸಿದರು.
ವರದಿ : ಪರಮೇಶ ಎಸ್ ಲಮಾಣಿ.
ಲಕ್ಷ್ಮೇಶ್ವರ ಪಟ್ಟಣದ ಪತ್ರಿಕಾ ಕಾರ್ಯಲಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಆಗ್ರಹಿಸಿದರು.
ಅಹಿಂದ ಮುಖಂಡ ಸೋಮಣ್ಣ ಬೆಟಗೇರಿ ಮಾತನಾಡಿ, ಕಾಂಗ್ರೆಸ್ ನಿರ್ದೇಶನದ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಯಂಪ್ರೇರಿತವಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಎಲ್ಲಾ ಸಮಾಜಕ್ಕೆ ಅಧಿಕಾರ ಸಿಗಲಿ ಎನ್ನುವ ಸದುದ್ದೇಶದಿಂದ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದೀಗ ಸಿಎಂ ಸ್ಥಾನವನ್ನು ಡಿ.ಕೆ. ಶಿವಕುಮಾರಗೆ ನೀಡಲು ಹೈಕಮಾಂಡ್ ತೀರ್ಮಾನಿಸಿದೆ. ಶಿವಣ್ಣನವರಿಗೆ ನೂತನ ಸಚಿವ ಸಂಪುಟದಲ್ಲಿ ಮಂತ್ರಿ ಸ್ಥಾನ ನೀಡಬೇಕು. ಇದಕ್ಕೆ ಅಹಿಂದ ಸಂಘಟನೆ ಹಾಗೂ ಎಲ್ಲಾ ಸಂಘಟನೆಗಳ ಒತ್ತಾಸೆಯಾಗಿದೆ.
ಹಾವೇರಿ ಜಿಲ್ಲೆಯನ್ನು ಬಿಜೆಪಿ ಮುಕ್ತವಾಗಿಸುವಲ್ಲಿ ಬಸವರಾಜ ಶಿವಣ್ಣನವರ ಶ್ರಮವಿದೆ. ಅವರು ಎಲ್ಲಾ ಸಮಾಜದ ಪ್ರೀತಿ ಪಾತ್ರರಾಗಿದ್ದು ಸರಳ, ಸಜ್ಜನಿಕೆ ವ್ಯಕ್ತಿತ್ವ ಹೊಂದಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಿದ್ದಕ್ಕೆ ಜಿಲ್ಲೆಗೆ ಮಂತ್ರಿ ಸ್ಥಾನ ಕೇಳಲಿಲ್ಲ. ಈಗ ಸಿದ್ದರಾಮಯ್ಯನವರು ರಾಜೀನಾಮೆ ನೀಡಿದ್ದರಿಂದ ಬಸವರಾಜ ಶಿವಣ್ಣನವರಿಗೆ ಸಚಿವ ಸ್ಥಾನ ನೀಡಬೇಕು. ಹೀಗಾದಲ್ಲಿ 2028ರ ಚುನಾವಣೆಯಲ್ಲಿ ರಾಜ್ಯದಲ್ಲಿ ಅಹಿಂದ ವರ್ಗದಿಂದ ಹಾಗೂ ಕಾರ್ಯಕರ್ತರಿಂದ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸುವಲ್ಲಿ ಶ್ರಮಿಸಲಾಗುವುದು. ಇಲ್ಲವಾದಲ್ಲಿ ಅಹಿಂದ ಬೆಂಬಲ ಕಡಿಮೆಯಾಗುತ್ತದೆ ಎಂದರು.
, ಅಹಿಂದ ನಾಯಕ ಸಿದ್ದರಾಮಯ್ಯ ಅವರಿಗೆ ಇನ್ನೂ ಎರಡು ವರ್ಷ ಅವಕಾಶ ಮಾಡಿಕೊಡಬೇಕಾಗಿತ್ತು. ಆದರೂ ಪಕ್ಷದ ಹೈಕಮಾಂಡ್‌ನ ಆದೇಶಕ್ಕೆ ತಲೆಬಾಗಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ನಮ್ಮ ಸಮಾಜದ ಅಹಿಂದ ನಾಯಕರಾಗಿರುವ ಬಸವರಾಜ ಶಿವಣ್ಣನವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿದರು.
ಸಂದರ್ಭದಲ್ಲಿ ರಾಹುಲ್ ಹೊಳಲಾಪುರ,,ಸೋಮಣ್ಣ ಬೆಟಗೇರಿ, ಮುದಕಣ್ಣ ಗದ್ದಿ,ಛಾಯಪ್ಪ ಬಸಾಪುರ, ಮುತ್ತಣ್ಣ ಟೋಕಾಳಿ,ಮಂಜುನಾಥ ಶೇರಸೂರಿ, ಸುರೇಶ ಹೊಳಲಾಪುರ, ಮಲ್ಲೇಶಪ್ಪ ಬಸಾಪುರ, ಪುಟ್ಟಪ್ಪ ಬಳಗಾನೂರ ಮತ್ತಿತರಿದ್ದರು.
