ಲಕ್ಷ್ಮೇಶ್ವರ : ಲಕ್ಷ್ಮೇಶ್ವರ ತಾಲೂಕನ್ನು ತಕ್ಷಣ ಬರಪೀಡಿತ ತಾಲೂಕು ಎಂದು ಘೋಷಿಸಿ ರೈತರಿಗೆ ವಿಶೇಷ ಪರಿಹಾರ, ಬೆಳೆ ವಿಮೆ, ಸಾಲ ಮನ್ನಾ ಹಾಗೂ ತುರ್ತು ನೆರವು ಒದಗಿಸುವಂತೆ ಕರವೇ ಸ್ವಾಭಿಮಾನಿ ಸೇನೆ ತಹಶಿಲ್ದಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ವರದಿ : ಪರಮೇಶ ಎಸ್ ಲಮಾಣಿ.
ಉದ್ದೇಶಿಸಿ ಮಾತನಾಡಿದ ಜಿಲ್ಲಾ ಅಧ್ಯಕ್ಷ ಶರಣು ಗೋಡಿ ಹಾಗೂ ತಾಲೂಕ ಅಧ್ಯಕ್ಷ ಮಾಂತೇಶ ಮಣಕವಾಡ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನಲ್ಲಿ 2025-26 ನೇ ಸಾಲಿನ ಹಿಂಗಾರು ಬೆಳೆ ವಿಮೆ ಜಾರಿ ಮಾಡಬೇಕು ಹಾಗೂ 2026-27ನೇ ಸಾಲಿನ ಮುಂಗಾರು ಮಳೆ ತೀವ್ರವಾಗಿ ಕೊರತೆಯಾಗಿರುವ ವರಿಣಾಮ ರೈತರು ಬಿತ್ತನೆ ಮಾಡಿದ ಹೆಸರು .ಜೋಳ, ಮೆಣಸಿನಕಾಯಿ, ಬಳ್ಕೊಳ್ಳಿ, ಮೆಕ್ಕೆಜೋಳ, ಹತ್ತಿ, ತೊಗರಿ, ಶೇಂಗಾ ಸೇರಿದಂತೆ ಬಹುತೇಕ ಎಲ್ಲಾ ಬೆಳೆಗಳು ನೀರಿನ ಕೊರತೆಯಿಂದ ಬಾಡಿ ಒಣಗುತ್ತಿವೆ ಅನೇಕ ಗ್ರಾಮಗಳಲ್ಲಿ ಬೆಳೆಗಳು ಸಂಪೂರ್ಣ ಹಾನಿಗೊಳಗಾಗಿದ್ದು, ರೈತರು ತಮ್ಮ ಜೀವನದ ಸಂಪೂರ್ಣ ಬಂಡವಾಳವನ್ನು ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮಳೆಯ ಕೊರತೆಯಿಂದ ಕೃಷಿ ಮಾತ್ರವಲ್ಲದೆ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಹಾಗೂ ನೀರಿನ ಸಮಸ್ಯೆಯೂ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ. ರೈತರು ಆರ್ಥಿಕ ಸಂಕಷ್ಟದಿಂದ ತೀವು ಆತಂಕದಲ್ಲಿದ್ದು ಸರ್ಕಾರವು ತಕ್ಷಣ ಮಧ್ಯಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳುವುದು ಅತ್ಯಗತ್ಯವಾಗಿದೆ.
ಕರ್ನಾಟಕ ಸರ್ಕಾರವು ಯಾವುದೇ ವಿಳಂಬ ಮಾಡದೆ ಸೂಕ್ತ ಕ್ರಮಗಳನ್ನು ತುರ್ತಾಗಿ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಈ ವರ್ಷ ರೈತರು ಕಂಗಾಲಾಗಿದ್ದು ವಿಶೇಷ ತಂಡಗಳನ್ನು ರಚಿಸಿ ತುರ್ತು ಬೆಳೆಹಾನಿ ಸಮೀಕ್ಷೆ ನಡೆಸಿ, ನೈಜ ವರದಿ ಆಧರಿಸಿ ಪರಿಹಾರವನ್ನು ಶೀಪು ಬಿಡುಗಡೆ ಮಾಡಬೇಕು.
ಬೆಳೆ ಹಾನಿಗೊಳಗಾದ ಎಲ್ಲಾ ರೈತರಿಗೆ ಪ್ರತಿ ಎಕರೆಗೆ ಸೂಕ್ತ ಪರಿಹಾರಧನವನ್ನು ವಿಳಂಬವಿಲ್ಲದೆ ನೀಡಬೇಕು
ರಾಷ್ಟ್ರೀಯ ಹಾಗೂ ರಾಜ್ಯ ಬೆಳೆ ವಿಮೆ ಯೋಜನೆಯಡಿ ಅರ್ಹ ರೈತರಿಗೆ ಬೆಳೆ ವಿಮೆ ಪರಿಹಾರವನ್ನು ತಕ್ಷಣ ಬಿಡುಗಡೆ ಮಾಡಬೇಕು.
ರೈತರಿಂದ ಬೆಳೆ ವಿಮೆ ಪರಿಹಾರ ಕೊಡಿಸುವ ಹೆಸರಿನಲ್ಲಿ ಹಣ ವಸೂಲಿ ಮಾಡುವ ಮಧ್ಯವರ್ತಿಗಳು ಹಾಗೂ ಏಜೆಂಟರ ಹಸ್ತಕ್ಷೇಪವನ್ನು ಸಂಪೂರ್ಣವಾಗಿ ತಡೆಗಟ್ಟಬೇಕು. ಬೆಳೆ ವಿಮೆ ಪರಿಹಾರದ ಸಂಪೂರ್ಣ ಮೊತ್ತವನ್ನು ಯಾವುದೇ ಕಡಿತ ಅಥವಾ ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು. 2025-26 ನೇ ಸಾಲಿನ ಬಹು ವಾರ್ಷಿಕ ಬೆಳೆ ವಿಮೆ ಏಜೆಂಟರು 50-50 ಅನುಪಾತದಲ್ಲಿ ಬೆಳೆ ವಿಮೆ ಜಮಾ ಆಗಿರುತ್ತವೆ ನೇರವಾಗಿ ಬೆಳ ವಿಮೆ ಮಾಡಿಸಿದ ರೈತರಿಗೆ ಬೆಳೆ ವಿಮೆ ಜಮಾ ಆಗಿರುವುದಿಲ್ಲ ಕೂಡಲೇ ಅಂತಹ ರೈತರಿಗೆ ಬೆಳೆ ವಿಮೆ ಜಮಾ ಹಣ ರೈತ ಖಾತೆಗೆ ಜಮಾ ಮಾಡಬೇಕು ಎಂದು ಸರ್ಕಾರಕ್ಕೆ ಬೇಡಿಕೆ ಇಟ್ಟರಲ್ಲದೇ,
ಬೆಳೆ ವಿಮೆ ಪರಿಹಾರ ಕೊಡಿಸುವ ನೆಪದಲ್ಲಿ ಹಣ ವಸೂಲಿ ಮಾಡುತ್ತಿರುವ ಕುರಿತು ಬಂದಿರುವ ದೂರುಗಳ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಬೇಕು ರೈತರಿಂದ ಕೃಷಿ ಮತ್ತು ಸಹಕಾರಿ ಬ್ಯಾಂಕ್ಗಳ ಸಾಲ ವಸೂಲಾತಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಬಡ್ಡಿ ಮನ್ನಾ ಹಾಗೂ ಮರುಪಾವತಿಗೆ ವಿಶೇಷ ಸೌಲಭ್ಯ ನೀಡಬೇಕು.
ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವು ಮತ್ತು ನೀರಿನ ವ್ಯವಸ್ಥೆಗೆ ವಿಶೇಷ ಅನುದಾನ ಬಿಡುಗಡೆ ಮಾಡಬೇಕು ಸಂಕಷ್ಟದಲ್ಲಿರುವ ರೈತರ ನೆರವಿಗಾಗಿ ರಾಜ್ಯ ಸರ್ಕಾರ ವಿಶೇಷ ಬರ ಪರಿಹಾರ ವ್ಯಾಕೇಜ್ ಘೋಷಿಸಬೇಕು.
ತಾಲೂಕಿನ ರೈತರು ಇಂದು ಬದುಕು-ಬವಣೆಯ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಆದ್ದರಿಂದ ರೈತರ ಹಿತದೃಷ್ಟಿಯಿಂದ ಈ ಮನವಿಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ತಕ್ಷಣ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸಿ. ಅಗತ್ಯ ಪರಿಹಾರ ಹಾಗೂ ನೆರವು ಒದಗಿಸಬೇಕೆಂದು ಆಗ್ರಹಿಸಿ,
ಸರ್ಕಾರವು ಶೀವು ಕ್ರಮ ಕೈಗೊಳ್ಳದಿದ್ದಲ್ಲಿ, ರೈತರೊಂದಿಗೆ ಸೇರಿ ಪ್ರಜಾಸತ್ತಾತ್ಮಕ ಹಾಗೂ ಕಾನೂನುಬದ ರೀತಿಯಲ್ಲಿ ಉಗ್ರ ಹೋರಾಟ ನಡೆಸಬೇಕಾಗುವ ಅನಿವಾರ್ಯತೆ ಉಂಟಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಸಿದರು.
ಸಂದರ್ಭದಲ್ಲಿ ವಿನಯ ಪಾಟೀಲ್, ಲುಮಾನ ಬೆಟಗೇರಿ, ಆನಂದ ಅಮರಶೇಟ್ಟಿ, ಪ್ರವೀಣ ಆಚಾರ್ಯ, ಕೈಸರ್ ಮಹಮ್ಮದ್ ಅಲಿ, ಮಾಹಾಂತೇಶ ಕಟಗಿ, ನಾಗರಾಜ ಸಾಲಿವಾಲಿಮಠ, ಕೀರಣ ಬಡಿಗೇರ,ಧರ್ಮಸಿಂಗ ಕಿಲ್ಲೆದಾರ, ಕುಮಾರ ಹೊಂಬಳ, ಆಸ್ಪಾಕ ಬಾಗೊಡಿ, ಮಲ್ಲೇಶ ಬನ್ನಿ, ದುದ್ದು ಅಕ್ಕಿ, ಆಕಾಶ ಬಜಂತ್ರಿ, ಶಂಕ್ರಪ್ಪ ಹೊಣ್ಣನ್ನವರ್, ಬಸವರಾಜ ಬೂದಿಹಾಳ, ರಾಜು ಬೆಲ್ಲದ, ಮಲ್ಲಿಕಾರ್ಜುನ ಗದ್ದಬಾಲ, ನವಾಜ ಅತ್ತಾರ, ಬಸವರಾಜ ಮಗದಿ ಮತ್ತಿತರಿದ್ದರು.
