ದಲಿತ ಸಮಾಜದ ಮಕ್ಕಳ ಶಿಕ್ಷಣವನ್ನು ಪ್ರೋತ್ಸಾಹಿಸುವ ಕಾರ್ಯ ನನ್ನದಾಗಿರುತ್ತದೆ : ಸದಾನಂದ….!
ಲಕ್ಷ್ಮೇಶ್ವರ : ನೂತನವಾಗಿ ಪ್ರೊ ಬಿ ಕೃಷ್ಣಪ್ಪ ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕು ಸಂಚಾಲಕರಾಗಿ ಸದಾನಂದ ಅಶೋಕ ನಂದೇಣ್ಣವರ ಇವರನ್ನ ನೇಮಿಸಲಾಯಿತು.
ವರದಿ : ಪರಮೇಶ ಎಸ್ ಲಮಾಣಿ.
ರಾಜ್ಯ ಸಂಚಾಲಕರಾದ ಎಮ್ ಗುರುಮೂರ್ತಿ ಹಾಗೂ ರಾಜ್ಯ ಸಂಘಟನಾ ಸಂಚಾಲಕರಾದ ಎಸ್ ಏನ್ ಬಳ್ಳಾರಿ ಮತ್ತು ರಾಜ್ಯ ಸಂಘಟನಾ ಸಂಚಾಲಕರಾದ ಹಣಮಂತಪ್ಪ ಕಾಕರಗಲ್ ಇವರ ಸಮ್ಮುಖದಲ್ಲಿ ಗದಗ ಜಿಲ್ಲಾ ಸಂಚಾಲಕರಾದ ದುರಗಪ್ಪ ಎಲ್ ಎಚ್ ಇವರು ನೇಮಕಾತಿ ಮಾಡಿ ಆದೇಶ ಹೊರಡಿಸಿದರು.
ಉದ್ದೇಶಿಸಿ ಮಾತನಾಡಿದ ಸದಾನಂದ ನಂದೇಣ್ಣವರ್ ದಲಿತರ ಒಳಿತಿಗಾಗಿ ಈ ಸಂಘಟನೆ ಮಾಡಲಾಗಿದೆ. ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಹಿಂಸೆಯನ್ನು ಖಂಡಿಸುವ ಸಂಘಟನೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯಾಗಿದೆ. ದಲಿತ ಸಮಾಜದ ಮಕ್ಕಳ ಶಿಕ್ಷಣವನ್ನು ಪ್ರೋತ್ಸಾಹಿಸುವ ಕಾರ್ಯ ನಮ್ಮದಾಗಿರುತ್ತದೆ. ನಾನು ಸಂಚಾಲಕನಾಗಿ ಆಯ್ಕೆಯಾಗಿರುವುದು ನನ್ನ ಮೇಲೆ ದಲಿತ ಸಮಾಜ ದೊಡ್ಡ ಜವಾಬ್ದಾರಿ ಹೊರಿಸಿದ್ದು ನಿಭಾಯಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೆನೆ ಮತ್ತು ದಲಿತರ ಪರ ಕೆಲಸ ಮಾಡುವ ಉತ್ಸಾಹದಲ್ಲಿ ಇದ್ದೆನೆ ಎಂದರು.
