Home » News » ಅಂಗಡಿ ಮುಂದೆ ಮಗು ಓಡಾಡಿದ್ದಕ್ಕೆ ಗಲಾಟೆ;ಮಾರಾಮಾರಿ: ಜಗಳ ಬಿಡಿಸಲು ಬಂದವರಿಗೆ ಚಾಕು ಇರಿತದ ಆರೋಪ..!

ಅಂಗಡಿ ಮುಂದೆ ಮಗು ಓಡಾಡಿದ್ದಕ್ಕೆ ಗಲಾಟೆ;ಮಾರಾಮಾರಿ: ಜಗಳ ಬಿಡಿಸಲು ಬಂದವರಿಗೆ ಚಾಕು ಇರಿತದ ಆರೋಪ..!

by CityXPress
0 comments

ಲಕ್ಷ್ಮೇಶ್ವರ: ಅಂಗಡಿಯೊಂದರ ಮುಂದೆ ಮಗು ಓಡಾಡಿದ್ದನ್ನು ಪ್ರಶ್ನಿಸಿ ಅಂಗಡಿ ಮಾಲೀಕ ಮಗುವಿಗೆ ಹೊಡೆದಿದ್ದಾನೆ ಎನ್ನಲಾದ ಘಟನೆಗೆ ಸಂಬಂಧಿಸಿದಂತೆ ಮಾತಿಗೆ ಮಾತು ಬೆಳೆದು ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ಪಟ್ಟಣದ ದರ್ಗಾ ಬಳಿ ಗುರುವಾರ ನಡೆದಿದೆ.

ಬಟ್ಟೆ ಹಾಗೂ ಹಾಸಿಗೆ ವ್ಯಾಪಾರ ನಡೆಸುತ್ತಿದ್ದ ಸೂರಣಗಿ ಕುಟುಂಬಸ್ಥರ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಆರಂಭವಾಗಿದ್ದು, ಬಳಿಕ ಅದು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ ಎನ್ನಲಾಗಿದೆ. ಘಟನೆಯಲ್ಲಿ ಸಿರಾಜ್ ಹಮ್ಮದ್ ಸೂರಣಗಿ, ವಸೀಮಸಾಬ್ ಸೂರಣಗಿ, ನಾಜಿಲ್ ಸೂರಣಗಿ ಹಾಗೂ ದಾದಾಪೀರ್ ಕೊತ್ತುಲಾ ಸೇರಿದಂತೆ ಹಲವರು ಗಾಯಗೊಂಡಿದ್ದಾರೆ.

ಮಗುವಿಗೆ ಹೊಡೆದ ವಿಚಾರಕ್ಕೆ ಗಲಾಟೆ

ಅಂಗಡಿಯೊಂದರ ಮುಂದೆ ಮಗು ಓಡಾಡುತ್ತಿದ್ದ ಸಂದರ್ಭದಲ್ಲಿ ಅಂಗಡಿ ಮಾಲೀಕ ಮಗುವಿಗೆ ಹೊಡೆದಿದ್ದಾನೆ ಎನ್ನಲಾಗಿದೆ. ಈ ವಿಚಾರವನ್ನು ಕೇಳಲು ಮಗುವಿನ ತಂದೆ ತೆರಳಿದ್ದು, ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ಮಾತಿಗೆ ಮಾತು ಬೆಳೆದು ಗಲಾಟೆ ಆರಂಭವಾಗಿದ್ದು, ಅದು ಮಾರಾಮಾರಿಗೆ ತಿರುಗಿದೆ ಎಂದು ತಿಳಿದುಬಂದಿದೆ.

banner

ಗಲಾಟೆ ನಡೆಯುತ್ತಿದ್ದ ವೇಳೆ ಜಗಳ ಬಿಡಿಸಲು ಮುಂದಾದ ಪಕ್ಕದ ಅಂಗಡಿ ವ್ಯಾಪಾರಿಗಳಾದ ಸಿರಾಜ್ ಹಮ್ಮದ್ ಹಾಗೂ ಇಸ್ಮಾಯಿಲ್ ಅವರ ಮೇಲೂ ಹಲ್ಲೆ ನಡೆದಿದೆ ಎನ್ನಲಾಗಿದ್ದು, ಅವರಿಗೂ ಗಾಯಗಳಾಗಿವೆ.

ನಾಲ್ವರಿಗೆ ಗಂಭೀರ ಗಾಯ

ಮಾರಾಮಾರಿಯಲ್ಲಿ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಜಗಳ ಬಿಡಿಸಲು ಹೋದವರಿಗೂ ಗಾಯಗಳಾಗಿವೆ. ಗಾಯಗೊಂಡ ಎಲ್ಲರನ್ನೂ ಲಕ್ಷ್ಮೇಶ್ವರ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗಲಾಟೆಗೆ ಕಾರಣ ಹಾಗೂ ಘಟನೆಯ ಸಂಪೂರ್ಣ ವಿವರಗಳ ಕುರಿತು ಮಾಹಿತಿ ಕಲೆಹಾಕಿದ್ದಾರೆ.

ಪದೇಪದೇ ಗಲಾಟೆ ಮಾಡುತ್ತಾರೆ ಎಂಬ ಆರೋಪ

ಇನ್ನು ಸೂರಣಗಿ ಕುಟುಂಬಸ್ಥರ ವಿರುದ್ಧ ಸ್ಥಳೀಯ ಯುವಕರು ಗಂಭೀರ ಆರೋಪ ಮಾಡಿದ್ದಾರೆ. ಸಾರ್ವಜನಿಕರೊಂದಿಗೆ ಪದೇಪದೇ ಜಗಳಕ್ಕೆ ಇಳಿಯುತ್ತಾರೆ ಎಂದು ಆರೋಪಿಸಿರುವ ಅವರು, ದರ್ಗಾಕ್ಕೆ ಬರುವ ಭಕ್ತರು ಹಾಗೂ ವ್ಯಾಪಾರಕ್ಕೆ ಆಗಮಿಸುವವರೊಂದಿಗೂ ಸಣ್ಣಪುಟ್ಟ ವಿಚಾರಗಳಿಗೆ ವ್ಯಾಜ್ಯ ಮಾಡುತ್ತಾರೆ ಎಂದು ದೂರಿದ್ದಾರೆ.

ಜಗಳ ಬಿಡಿಸಲು ಮುಂದಾದವರ ಮೇಲೂ ಹಲ್ಲೆ ನಡೆಸಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದು, ಇದರಿಂದ ದರ್ಗಾ ಸುತ್ತಮುತ್ತಲಿನ ವ್ಯಾಪಾರಿಗಳು ಹಾಗೂ ಸಾರ್ವಜನಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಘಟನೆ ಬಳಿಕ ದರ್ಗಾ ಸುತ್ತಮುತ್ತ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುನ್ನೆಚ್ಚರಿಕೆ ವಹಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಘಟನೆಯಲ್ಲಿ ಭಾಗಿಯಾಗಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮವಹಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಘಟನೆ ಕುರಿತು ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದು, ದೂರು ಹಾಗೂ ತನಿಖೆಯ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb