Home » News » ಮಿಲಿಟರಿ ಬಾಲಕಿಯರ ವಸತಿ ನಿಲಯಕ್ಕೆ ಪ್ರವೇಶ ಅರ್ಜಿ ಆಹ್ವಾನ : ಯೋಧರ ಹಾಗೂ ಮಾಜಿ ಸೈನಿಕರ ಪುತ್ರಿಯರಿಗೆ ಉಚಿತ ವಸತಿ-ಊಟ ಸೌಲಭ್ಯ

ಮಿಲಿಟರಿ ಬಾಲಕಿಯರ ವಸತಿ ನಿಲಯಕ್ಕೆ ಪ್ರವೇಶ ಅರ್ಜಿ ಆಹ್ವಾನ : ಯೋಧರ ಹಾಗೂ ಮಾಜಿ ಸೈನಿಕರ ಪುತ್ರಿಯರಿಗೆ ಉಚಿತ ವಸತಿ-ಊಟ ಸೌಲಭ್ಯ

by CityXPress
0 comments

ಸುದ್ದಿ:
ಗದಗ: ಧಾರವಾಡ ನಗರದ ಸಪ್ತಾಪೂರ ರಸ್ತೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಿಲಿಟರಿ ಬಾಲಕಿಯರ ವಸತಿ ನಿಲಯದಲ್ಲಿ 2026-27ನೇ ಶೈಕ್ಷಣಿಕ ಸಾಲಿಗೆ ಪ್ರವೇಶಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಧಾರವಾಡ, ಗದಗ, ಹಾವೇರಿ ಹಾಗೂ ಬಳ್ಳಾರಿ ಜಿಲ್ಲೆಗಳ ಗ್ರಾಮಾಂತರ ಪ್ರದೇಶಗಳಲ್ಲಿರುವ ವಿದ್ಯಾರ್ಥಿನಿಯರ ಜೊತೆಗೆ, ರಾಜ್ಯದ ಇತರ ಜಿಲ್ಲೆಗಳ ಯುದ್ಧದಲ್ಲಿ ಮಡಿದ ಯೋಧರ ಹಾಗೂ ಮಾಜಿ ಸೈನಿಕರ ಪುತ್ರಿಯರು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.

ಈ ವಸತಿ ನಿಲಯದಲ್ಲಿ 5ನೇ ತರಗತಿಯಿಂದ ಪಿಯುಸಿ-2ರವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಪ್ರವೇಶ ನೀಡಲಾಗುತ್ತದೆ. ವಿದ್ಯಾರ್ಥಿನಿಯರಿಗೆ ವಸತಿ ಹಾಗೂ ಊಟೋಪಚಾರ ಸಂಪೂರ್ಣ ಉಚಿತವಾಗಿದ್ದು, ವಿಶೇಷವಾಗಿ ಮಾಜಿ ಸೈನಿಕರ ಪುತ್ರಿಯರಿಗೆ ಈ ಸೌಲಭ್ಯ ಪ್ರಯೋಜನಕಾರಿಯಾಗಿದೆ.

ಆದರೆ, ಧಾರವಾಡ ನಗರದಲ್ಲಿರುವ ಶಾಲೆ ಅಥವಾ ಕಾಲೇಜುಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿನಿಯರಿಗೆ ಮಾತ್ರ ವಸತಿ ನಿಲಯದಲ್ಲಿ ಅವಕಾಶ ನೀಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

banner

ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಂಟಿ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಉದಯ ಹಾಸ್ಟೇಲ್ ಸರ್ಕಲ್, ಸೈನಿಕ ವಿಶ್ರಾಂತಿ ಗೃಹ ಆವರಣ, ಧಾರವಾಡ ಇವರನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ: 0836-2440176.

ಭರ್ತಿ ಮಾಡಿದ ಅರ್ಜಿಗಳನ್ನು ಮೇ 5ರೊಳಗಾಗಿ ಸಲ್ಲಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb