Home » News » ಬಡವರ ಆರ್ಥಿಕಾಭಿವೃದ್ಧಿಗೆ ‘ಗ್ಯಾರಂಟಿ’ಸಹಕಾರಿ: ಅಶೋಕ ಮಂದಾಲಿ

ಬಡವರ ಆರ್ಥಿಕಾಭಿವೃದ್ಧಿಗೆ ‘ಗ್ಯಾರಂಟಿ’ಸಹಕಾರಿ: ಅಶೋಕ ಮಂದಾಲಿ

by CityXPress
0 comments

ಬಾಗಲಕೋಟ: ಬಡವರ ಆರ್ಥಿಕಾಭಿವೃದ್ಧಿಗೆ ಮತ್ತು ಮಹಿಳೆಯರ ಸಬಲೀಕರಣಕ್ಕಾಗಿ ‘ಗ್ಯಾರಂಟಿ’ ಯೋಜನೆಗಳು ಸಹಕಾರಿಯಾಗುತ್ತಿವೆ. ಹೀಗಾಗಿ ಪ್ರತಿಯೊಬ್ಬರೂ ಕಾಂಗ್ರೆಸ್ ಅಭ್ಯರ್ಥಿಗೆ ಗೆಲ್ಲಿಸುವ ಮೂಲಕ ಕಾಂಗ್ರೆಸ್‌ಗೆ ಮತ್ತಷ್ಟು ಬಲ ತುಂಬಿಸುವAತೆ ಎಂದು ಗದಗ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಹಾಗೂ ಗದಗ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ ಅವರು ಮನವಿ ಮಾಡಿದರು.

ಅವರು ಬಾಗಲಕೋಟೆ ಜಿಲ್ಲೆಯ ಶಿರೂರು ಪಟ್ಟಣದಲ್ಲಿ ವಿಧಾನಸಭಾ ಉಪಚುನಾವಣೆಯ ಅಂಗವಾಗಿ ಪಕ್ಷದ ಹಿರಿಯರು ಹಾಗೂ ನಿಷ್ಠಾವಂತ ಕಾರ್ಯಕರ್ತರೊಂದಿಗೆ ಮನೆ ಮನೆಗೆ ತೆರಳಿ ನಮ್ಮ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಉಮೇಶ ಮೇಟಿ ಅವರ ಪರವಾಗಿ ಮತಯಾಚಿಸಿ, ಅವರು ಮಾತನಾಡಿದರು.

ಬಾಗಲಕೋಟೆ ಜಿಲ್ಲೆಯ ಅನ್ನಭಾಗ್ಯ ಯೋಜನೆಯಡಿ 2,10,539 ಪಲಾನುಭವಿಗಳಿಗೆ ಪ್ರತಿ ತಿಂಗಳು 10 ಕೆ.ಜಿ. ಅಕ್ಕಿ ನೀಡಲಾಗುತ್ತಿದೆ. ಗೃಹಲಕ್ಷ್ಮಿ ಯೋಜನೆ – 60,551 ಪಲಾನುಭವಿಗಳಿಗೆ ಪ್ರತಿ ತಿಂಗಳು 2,000 ನೀಡುತ್ತಿದ್ದು 285.87 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಗೃಹ ಜ್ಯೋತಿ ಯೋಜನೆ – 81,506 ಪಲಾನುಭವಿಗಳಿಗೆ ಪ್ರತಿ ತಿಂಗಳು 200 Uಟಿiಣ ಉಚಿತ ವಿದ್ಯುತ್ ನೀಡುತ್ತಿದ್ದು 104.29 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.

ಶಕ್ತಿ ಯೋಜನೆಯಡಿ 3,11,15,660 (3.1 ಕೋಟಿ) ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು 114.72 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಯುವ ನಿಧಿ ಯೋಜನೆ – 2,180 ಪಲಾನುಭವಿಗಳಿಗೆ ಪ್ರತಿ ತಿಂಗಳು 3,000 ರೂ. ನೀಡುತ್ತಿದ್ದು 6.16 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.

banner

ಬಾಗಲಕೋಟೆ ಜಿಲ್ಲೆಯು ಒಣಭೂಮಿ ಪ್ರದೇಶವಾಗಿದ್ದರೂ, 2013-2018ರ ಕಾಂಗ್ರೆಸ್ ಸರ್ಕಾರವು ನೀರಾವರಿ ಮತ್ತು ಮೂಲಸೌಕರ್ಯಕ್ಕೆ ಐತಿಹಾಸಿಕ ಅನುದಾನ ನೀಡಿದೆ. ಅಪ್ಪರ್ ಕೃಷ್ಣಾ ಪ್ರಾಜೆಕ್ಟ್ಗೆ 2013-18ರ ಅವಧಿಯಲ್ಲಿ ₹8,000 ಕೋಟಿ ರಿಂದ ₹12,000 ಕೋಟಿ ವರೆಗೆ ಹಂತ-ಹAತವಾಗಿ ಅನುದಾನ ನೀಡಲಾಗಿದೆ.

ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ರಡಿ ಆಲಮಟ್ಟಿ ಜಲಾಶಯದ ಎತ್ತರವನ್ನು 524.256 ಮೀಟರ್‌ಗೆ ಏರಿಸಲಾಗಿದೆ. ಫ್ಲೋರೈಡ್ ಸಮಸ್ಯೆ ಪರಿಹಾರಕ್ಕಾಗಿ ಕುಡಿಯುವ ನೀರಿನ ಯೋಜನೆಗಳಿಗೆ ₹500-₹800 ಕೋಟಿ ಹೂಡಿಕೆ ಮಾಡಲಾಗಿದೆ. ಒಣಭೂಮಿ ಪ್ರದೇಶಗಳಿಗೆ ಹನಿ ನೀರಾವರಿ ಮತ್ತು ಏತ ನೀರಾವರಿ ಯೋಜನೆಗಳಿಗೆ ವಿಶೇಷ ಅನುದಾನ.

ನವನಗರ ಪುನರ್ವಸತಿ ಯೋಜನೆಗೆ 750 ಕೋಟಿ ರೂ. ಅನುದಾನ (ರಸ್ತೆ, ಕುಡಿಯುವ ನೀರು, ಒಳಚರಂಡಿ). ಬಿಮ್ಸ್ ಆಸ್ಪತ್ರೆ ಮೇಲ್ದರ್ಜೆಗೇರಿಸಲು 120 ಕೋಟಿ ರೂ. ವೆಚ್ಚ ಮಾಡಲಾಗಿದೆ. SಅSP/ಖಿSP ಅಡಿಯಲ್ಲಿ ದಲಿತ ಮತ್ತು ಹಿಂದುಳಿದ ವರ್ಗಗಳ ಕಾಲೋನಿ ಅಭಿವೃದ್ಧಿಗೆ 110 ಕೋಟಿ ರೂ. ನೀಡಲಾಗಿದೆ. ನಗರದ ಚತುಷ್ಪಥ ರಸ್ತೆಗಳು ಮತ್ತು ಸೇತುವೆಗಳಿಗೆ 100 ಕೋಟಿ ಮೀಸಲಿಡಲಾಗಿದೆ.

ಯುಜಿಡಿ ಪೈಪ್‌ಲೈನ್ ಮತ್ತು ಶುದ್ದೀಕರಣ ಘಟಕಗಳಿಗೆ 45 ಕೋಟಿ ರೂ., ರೈತರಿಗೆ ಪರಿಹಾರ ಮೊತ್ತವನ್ನು ಪ್ರತಿ ಎಕರೆಗೆ 8 ಲಕ್ಷದಿಂದ 10 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. 1.5 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಅನ್ನಭಾಗ್ಯ ಮತ್ತು ಸಬ್ಸಿಡಿ ಯೋಜನೆಗಳಡಿ ಕೋಟ್ಯಂತರ ರೂಪಾಯಿ ವರ್ಗಾವಣೆ ಮಾಡಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪಕ್ಷದ ವಿವಿಧ ಮುಖಂಡರು, ಕಾರ್ಯಕರ್ತರು ಇದ್ದರು.

===

ಬಾಕ್ಸ್ ಐಟಂ

ನಮ್ಮ ಸರ್ಕಾರದ ಜನಪರ ಯೋಜನೆಗಳು, ಅಭಿವೃದ್ಧಿ ಕಾರ್ಯಗಳು ಹಾಗೂ ಮುಂದಿನ ಗುರಿಗಳ ಬಗ್ಗೆ ಪಟ್ಟಣದ ಪ್ರತಿಯೊಬ್ಬ ನಾಗರಿಕರಿಗೂ ಮನವರಿಕೆ ಮಾಡಿಕೊಡಲಾಗಿದೆ. ಪ್ರಚಾರದ ವೇಳೆ ಸಾರ್ವಜನಿಕರಿಂದ ವ್ಯಕ್ತವಾದ ಅಭೂತಪೂರ್ವ ಬೆಂಬಲ ಮತ್ತು ಪ್ರೀತಿ ನಮ್ಮ ವಿಶ್ವಾಸವನ್ನು ಇಮ್ಮಡಿಗೊಳಿಸಿದೆ. ಜನರ ಆಶೀರ್ವಾದವೇ ನಮ್ಮ ಶಕ್ತಿ.

-ಅಶೋಕ ಮಂದಾಲಿ, ಅಧ್ಯಕ್ಷರು

ಗದಗ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb