Home » News » ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ಕಾರ್ತಿಕೋತ್ಸವ…!ಬದುಕಿನ ಮಹಾಯಾತ್ರೆಗೆ ಧರ್ಮ ದಿಕ್ಸೂಚಿಯಾಗಿದೆ….

ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ಕಾರ್ತಿಕೋತ್ಸವ…!ಬದುಕಿನ ಮಹಾಯಾತ್ರೆಗೆ ಧರ್ಮ ದಿಕ್ಸೂಚಿಯಾಗಿದೆ….

by CityXPress
0 comments

ಲಕ್ಷ್ಮೇಶ್ವರ : ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಸುಖ ಬಯಸುವುದು ಮನುಷ್ಯನ ಸಹಜ ಗುಣ ಮಾರ್ನಡತೆಯಿಂದಾಗಿ ಮನುಷ್ಯನ ಬದುಕು ಛಿದ್ರಗೊಂಡಿದೆ ಬಾಳಿನ ಉನ್ನತಿ ಅವನತಿಗಳಿಗೆ ಮನುಷ್ಯನ ಮನಸ್ಸೆ ಕಾರಣ ಎಂದು ಸಂಕದಾಳದ ಹಾಲಸ್ವಾಮಿ ಮಠ ಶ್ರೀ ಸದ್ಗುರು ಶಿವಯೋಗಿ ವಾಗೀಶ ಪಂಡಿತಾರಾಧ್ಯ ಹಾಲ ಶಿವಯೋಗಿಗಳು ಅಭಿಪ್ರಾಯಪಟ್ಟರು.

ಅವರು ದುರ್ಗಾ ಪರಮೇಶ್ವರಿ ದೇವಸ್ಥಾನದ ದೀಪೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಜೀವನ ಜೋಕಾಲಿ ಸುಖದಿಂದ ಮಖದತ್ತ ಮಖದಿಂದ ಸುಖದಕ್ಕೆ ಸದಾ ತೂಗುತ್ತಿರುತ್ತದೆ. ಪ್ರಪಂಚದಲ್ಲಿ ಭಯ ಭೀತಿ ಉದ್ವೇಗ ಚಿಂತೆ ಒತ್ತಡ ಎಲ್ಲರಿಗೂ ಇರುತ್ತದೆ ಮನುಷ್ಯ ತನ್ನ ಬಾಳಿನಲ್ಲಿ ನೀತಿ ಸಂಹಿತೆ ಸದಾಚಾರ ಸಂಪನ್ನತೆ ಧ್ಯಾನ ಸ್ಥಾನ ಇವುಗಳನ್ನು ಅಳವಡಿಸಿಕೊಂಡು ಬಾಳಿದರೆ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ಪ್ರಾಪ್ತವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ, ಮನುಷ್ಯ ಆಸೆ ಕಳೆದುಕೊಂಡು ಬದುಕಬಹುದು ಆದರೆ ಆಸಕ್ತಿ ಕಳೆದುಕೊಂಡು ಬಾಳಲಾಗದು‌ ಎಂದು‌ ಹೇಳಿದರು.

ಕಷ್ಟ ಕಾಲದಲ್ಲಿ ಸಹಾಯ ಮಾಡಿದವರನ್ನು ಕಷ್ಟ ಕಾಲದಲ್ಲಿ ಕೈ ಬಿಡದೇ ಕಾಪಾಡುವವರನ್ನು ಕಷ್ಟಕ್ಕೆ ದೂಡಿದವರನ್ನು ಎಂದಿಗೂ ಮರೆಯಬಾರದು. ಪ್ರತಿಯೊಂದು ಚಿಕ್ಕ ಪಯಣಕ್ಕೂ ಒಂದು ಮಾರ್ಗಸೂಚಿ ಇರುವಂತೆ ಬದುಕಿನ ಮಹಾಯಾತ್ರೆಗೆ ಧರ್ಮ ದಿಕ್ಸೂಚಿಯಾಗಿದೆ
ದೀಪ ಬೆಳಕಿನ ಸಂಕೇತ ಕತ್ತಲು ಅಜ್ಞಾನದ ಸಂಕೇತ, ಕತ್ತಲೆ ಬೆಳಕು ಮೂಡಿಸುವುದೇ ನಿಜವಾದ ಗುರುವಿನ ಧರ್ಮವಾಗಿದೆ‌ ಎಂದರು.

banner

ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಫಕ್ಕೀರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹಿರೇಮಠ ಕಳಸಾಪುರ ಮಲ್ಲ ಸಮುದ್ರ ಗದಗ ಸೊರಟೂರು..
ಅಶೋಕ್ ಶಿರಹಟ್ಟಿ,ಎಸ್ ಪಿ ಬಳೆಗಾರ, ಶಿವಪ್ಪ ಕೆಸರಳ್ಳಿ, ಎನ್ಎನ್ ನೆಗಳೂರ, ನಿಂಗಪ್ಪ ಹುನುಗುಂದ, ಸೋಮಣ್ಣ ಡಾನಗಲ್‌, ಎಚ್ ಎಫ್ ತಳವಾರ, ಎಂ ಸಿ ರಾಗಿ,
ವೀರಣ್ಣಾ ಪವಾಡದ, ರಾಜು ಮುಳುಗುಂದ, ಜ್ಯೋತಿಬಾ ಮುಳಗುಂದ, ಪಿ ಎಫ್ ಕಾಳಪ್ಪನವರ, ಶ್ರೀಧರ್ ಜನಿವಾರ, ಹಾಲಪ್ಪ ಅಣ್ಣಿಗೇರಿ, ಯಲ್ಲಪ್ಪ ಅಗಸರ, ಗಿರಿಜಮ್ಮ ಕೆಸರಳ್ಳಿ, ಈರಮ್ಮ ಕೆಸರಳ್ಳಿ, ಪಾರಮ್ಮ ಕರ್ಜಿಗಿ, ಸವಿತಮ್ಮ ನೆಗಳೂರ, ಪಾರಮ್ಮ ಬಡಿಗೇರ, ಕಲ್ಲಮ್ಮ ಮೂಲಿಮನಿ, ಬಸವಣ್ಣಮ್ಮ ಹುಲಗೂರ, ನಿಂಗಮ್ಮ ಹುಲಗೂರ, ಶಾಂತಮ್ಮ ತೋಟದ, ಲಕ್ಷ್ಮಮ್ಮ ಕೆಸರಳ್ಳಿ, ಆಶಾ ಬೊಮ್ಮನಕಟ್ಟೆ, ಮುಂತಾದವರು ಇದ್ದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb