ಲಕ್ಷ್ಮೇಶ್ವರ: ಪಟ್ಟಣದಲ್ಲಿ ಕಳೆದ ಎಂಟು ದಿನಗಳಿಂದ ಶಿಗ್ಲಿ ನಾಕಾದ ಸಂಗೊಳ್ಳಿ ರಾಯಣ್ಣ ವೃತ್ತದ ಸಮೀಪ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಲು ಒತ್ತಾಯಿಸಿ ಸಮಗ್ರ ರೈತ ಹೋರಾಟ ವೇದಿಕೆ ಹಾಗೂ ಇತರ ಸಂಘಟನೆಗಳ ಧರಣಿ ಸತ್ಯಾಗ್ರಹ ನಡೆಸುತ್ತಿವೆ.
ಕಳೆದ ಏಳು ದಿನಗಳಿಂದ ಪ್ರತಿನಿತ್ಯ ರೈತರಿಗೆ ಸಂಘಟಕರು ಮದ್ಯಾಹ್ನದ ವೇಳೆಗೆ ಫಲಾವಿನ ವ್ಯವಸ್ಥೆ ಮಾಡುತ್ತಿದ್ದರು. ದಿನಾಲು ಧಾನಿಗಳು, ವ್ಯಾಪಾರಸ್ಥರು ಮತ್ತು ಬೇರೆಬೇರೆ ಸಂಘಟನೆಯವರು ಊಟದ ವ್ಯವಸ್ಥೆ ಮಾಡುತ್ತಿದ್ದರು.
ವರದಿ: ಪರಮೇಶ ಎಸ್ ಲಮಾಣಿ
ಇಂದು ಎಂಟನೇ ದಿನವಾದ ಶನಿವಾರ ಪಟ್ಟಣದ ಹಳ್ಳದಕೇರಿ ಓಣಿಯ ರೈತರು, ರೈತರಿಗಾಗಿ ಮೊಸರಣ್ಣ, ರೊಟ್ಟಿ, ಶೇಂಗಾ ಚಟ್ನಿ, ಬದನೆಕಾಯಿ ಪಲ್ಲೆ ಮತ್ತು ಪುಂಡಿ ಪಲ್ಲೆ ವ್ಯವಸ್ಥೆ ಮಾಡಿದ್ದರು, ರೈತರು ಪಾಲಾ-ಬಾದಾಮಿ ರಾಜ್ಯ ಹೆದ್ದಾರಿಯಲ್ಲಿ ಕುಳಿತು ಊಟ ಮಾಡುತ್ತಿರುವ ದೃಶ್ಯ ರೈತರು ತಮ್ಮ ಜಮಿನುಗಳಲ್ಲಿ ರೊಟ್ಟಿ ಗಂಟು ಕಟ್ಟಿಕೊಟ್ಟು ಊಟ ಮಾಡಿದ ಅನುಭವ ಎಲ್ಲರ ದೃಷ್ಠಿ ನೆಟ್ಟುವಂತಿದ್ದು.
