Home » News » ೧೨ ದಿನಕ್ಕೆ ಕಾಲಿಟ್ಟ ರೈತರ ಧರಣಿ ಸತ್ಯಾಗ್ರಹ….!

೧೨ ದಿನಕ್ಕೆ ಕಾಲಿಟ್ಟ ರೈತರ ಧರಣಿ ಸತ್ಯಾಗ್ರಹ….!

by CityXPress
0 comments

ಉತಾರ ಚಳುವಳಿಗೆ ಮುಂದಾದ ರೈತರು, ಖರೀದಿ ಕೇಂದ್ರ ತೆರೆಯಲು ಆಗ್ರಹ….!

ಲಕ್ಷ್ಮೇಶ್ವರ: ಸರ್ಕಾರ ಗೋವಿನ ಜೋಳವನ್ನು ಬೆಂಬಲ ಬೆಲೆಗೆ ಖರೀದಿಸಬೇಕು ಮತ್ತು ಆದಷ್ಟು ಬೇಗ ಖರೀದಿ ಕೇಂದ್ರಗಳು ಕಾರ್ಯಾರಂಭಗೊಳ್ಳಬೇಕು ಎಂದು ಲಕ್ಷ್ಮೇಶ್ವರದಲ್ಲಿ ಸಮಗ್ರ ರೈತ ಸಂಘಟನೆಗಳ ಒಕ್ಕೂಟ ಹಲವಾರು ಸಂಘಟನೆಗಳು, ಮಠಾಧೀಶರ ನೇತೃತ್ವದಲ್ಲಿ ನಡೆಸುತ್ತಿರುವ ಹೋರಾಟ ೧೨ನೇ ದಿನ ಪೊರೈಸಿದೆ. 

ವರದಿ : ಪರಮೇಶ ಎಸ್ ಲಮಾಣಿ

ರೈತರ ಉಪವಾಸ ಸತ್ಯಾಗ್ರಹಕ್ಕೆ ಮಠಾಧೀಶರು, ರಾಜಕಾರಣಿಗಳು ಸೇರಿ ಎಲ್ಲರಿಂದ ಬೆಂಬಲ ವ್ಯಕ್ತವಾದ ಹಿನ್ನಲೆಯಲ್ಲಿ ಎಚ್ಚತ್ತ ಸರ್ಕಾರ ನ.೨೧ ರಂದು ಗೋವಿನ ಜೋಳವನ್ನು ಪ್ರತಿ.ಕ್ವಿಂಟಲ್‌ಗೆ ೨೪೦೦ ರೂ ಬೆಂಬಲ ಬೆಲೆಗೆ ಖರೀದಿಸುವ ನಿರ್ಧಾರ ಪ್ರಕಟಿಸಿದೆ. ಆದರೆ ಖರೀದಿ ಕೇಂದ್ರಗಳು ಕಾರ್ಯಾರಂಭಗೊಳ್ಳುವವರೆಗೂ ಹೋರಾಟ ಮುಂದುವರಸಲಿದೆ.

banner

೧೨ ದಿನವಾದ ಬುಧವಾರ ಧರಣಿ ನಿರತ ರೈತರು ಉತಾರ ಚಳುವಳಿ ಮಾಡುವ ಮೂಲಕ ಖರೀದಿ ಕೇಂದ್ರ ತೆರೆಯಲು ವಿಳಂಬ ಮಾಡುತ್ತಿರುವ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಧರಣಿ ಸತ್ಯಾಗ್ರಹ ಪ್ರಾರಂಭವಾದ ದಿನದಿಂದ ದಿನಾಲು ವಿನೂತನ ಪ್ರತಿಭಟನೆ ಮಾಡುತ್ತಾ ಬರುತ್ತಿರುವ ರೈತರು , ಬುಧವಾರ ಉತಾರ ಚಳುವಳಿ ಮೂಲಕ ನಾವು ರೈತರು ನಮ್ಮ ಹೊಲದಲ್ಲಿ ಮೆಕ್ಕೆಜೋಳ ಬೆಳೆದಿದ್ದೆವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ರೈತ ಮುಖಂಡ ರವಿಕಾಂತ ಅಂಗಡಿ ಅವರು ಲಕ್ಷ್ಮೇಶ್ವರ ರೈತರ ನ್ಯಾಯಯುತ ಹೋರಾಟ, ಬೇಡಿಕೆಯನ್ನು ಸರ್ಕಾರಕ್ಕೆ ತಲುಪಿಸುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಫಲವಾಗಿ ಸರ್ಕಾರ ಬೆಂಬಲ ಬೆಲೆಯಡಿ ಗೋವಿನ ಜೋಳ ಖರೀದಿಗೆ ನಿರ್ಧರಿಸಿದೆ. ಆದರೆ ಈಗಾಗಲೇ ತಿಂಗಳಿಂದ ಮಾರಾಟಕ್ಕೆ ರೈತರು ಕಾಯುತ್ತಿದ್ದಾರೆ. ಖರೀದಿ ಕೇಂದ್ರಗಳ ಕಾರ್ಯಾರಂಭವನ್ನು ವಿಳಂಭ ಮಾಡಿದರೆ ರೈತರು ನಷ್ಟಕ್ಕೊಳಗಾಗುತ್ತಾರೆ.

ಬೆಳೆಗಳು ಮೊಳಕೆ ಒಡೆಯುತಗತಿವೆ ಆದ್ದರಿಂದ ಖರೀದಿ ಕೇಂದ್ರ ಆರಂಭಿಸಬೇಕು ಪ್ರಾರಂಭವಾಗುವವರೆಗೂ ಸುಮ್ಮನಿರುವದಿಲ್ಲ, ನಾಳೆ ಒಂದು ದಿನ ನೋಡುತ್ತೆವೆ ಅಸದಷ್ಟು ಬೇಗ ಕೇಂದ್ರ ಪ್ರಾರಂಭವಾಗದಿದ್ದರೆ ಉಗ್ರ ಹೋರಾಟಕ್ಕೆ ಇಳಿಯುತ್ತೆವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೋರಾಟದ ನೇತೃತ್ವವಹಿಸಿರುವ ಮಂಜುನಾಥ ಮಾಗಡಿ, ಎಂ.ಎಸ್ ದೊಡ್ಡಗೌಡರ ಶರಣು ಗೋಡಿ, ನಾಗರಾಜ ಚಿಂಚಲಿ, ಪರಮೇಶ ನಾಯಕ, ನೀಲಪ್ಪ ಶರಸೂರಿ ಮಾತನಾಡಿ, ನಮ್ಮ ಬೆಳೆಗಳು ಹಾಳಾಗುತ್ತಿವೆ. ಮೊಳಕೆ ಒಡೆಯುತ್ತಿವೆ, ಆದರೆ ಸರ್ಕಾರ ಖರೀದಿ ಮಾಡಿಕೊಳ್ಳುತ್ತೆವೆ ಎಂದು ಘೋಷಣೆ ಮಾಡಿದ್ದು ಬರೆ ಬಾಯಿ ಮಾತಿಗೆ ಸಿಮಿತವಾಗಿದೆ ಈಗ ರೈತರ ಬೇಡಿಕೆ ಈಡೇರಿಕೆಗಾಗಿ ಈ ಎಲ್ಲ ಸೇವೆಗಳನ್ನು ಮಾಡುತ್ತಿದ್ದೇವೆ.  ಆದಷ್ಟು ಬೇಗ ಸರ್ಕಾರದ ಮನಮುಟ್ಟಿ ಬೇಡಿಕೆ ಈಡೇರಲಿ. ರೈತರಿಗೆ ಯಾವುದೇ ಜಾತಿ, ಧರ್ಮ, ಪಕ್ಷದ ಹಂಗಿಲ್ಲ.. ನ್ಯಾಯಯುತ ಬೇಡಿಕೆಗಾಗಿ ೧೨ ದಿನಗಳಿಂದ ರೈತರು ಶಾಂತಿ, ಸಮಾಧಾನದಿಂದ ವಿನೂತನ ಹೋರಾಟ ಮಾಡಿದ್ದೇವೆ. ರೈತರ ಒಕ್ಕೊರಲಿನ ಕೂಗು, ಹೋರಾಟಕ್ಕೆ ೨/೩ ದಿನಗಳಲ್ಲಿ ಸ್ಫಂಧಿಸದಿದ್ದರೆ ಹೋರಾಟದ ಸ್ವರೂಪ ಮತ್ತೇ ತೀವೃತೆ ಪಡೆದುಕೊಳ್ಳಲಿದೆ ಎಂದರು.   ಸುತ್ತಲಿನ ಗ್ರಾಮದಗಳ ರೈತರು ಹೋರಾಟಕ್ಕೆ ತಮ್ಮದೇ ಆದ ಸೇವೆಯ ಮೂಲಕ ಸಾಥ್ ನೀಡುತ್ತಿದ್ದಾರೆ. ಹೋರಾಟದಲ್ಲಿ ಆದೇಶ ಹುಲಗೂರ, ಬಸಪ್ಪ ಶರಸೂರಿ, ಪ್ರಕಾಶ ಮೇವುಂಡಿ, ಚನ್ನಬಸಗೌಡ್ರ ಉದ್ದನಗೌಡ್ರ, ಮುದಕಣ್ಣ ಗದ್ದಿ, ಸುರೇಶ ಹಟ್ಟಿ, ಗಂಗಯ್ಯ ಕಲಕೇರಿಮಠ, ಅಶೋಕ ಅದರಗುಂಚಿ, ಮುತ್ತಣ್ಣ ಟೋಕಾಳಿ, ಈರಣ್ಣ ಹುಲಕೋಟಿ, ಇಸ್ಮಾಯಿಲ್ ಆಡೂರ, ಅತ್ತಾರ ಆಡೂರ, ಸೇರಿದಂತೆ ಮತ್ತಿತರಿದ್ದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb