Home » News » ಸಾರ್ವಜನಿಕರು ಜೀವನ ಶೈಲಿ ಬದಲಾಯಿಸಿಕೊಳ್ಳಿ, ಒತ್ತಡ ಕಡಿಮೆ ಮಾಡಿಕೊಳ್ಳಿ : ಡಾ.ನಾಯ್ಕ

ಸಾರ್ವಜನಿಕರು ಜೀವನ ಶೈಲಿ ಬದಲಾಯಿಸಿಕೊಳ್ಳಿ, ಒತ್ತಡ ಕಡಿಮೆ ಮಾಡಿಕೊಳ್ಳಿ : ಡಾ.ನಾಯ್ಕ

by CityXPress
0 comments

ಲಕ್ಷ್ಮೇಶ್ವರ : ಜೀವನ ಶೈಲಿ, ಒತ್ತಡ, ಆಹಾರ ಪದ್ಧತಿ, ದುರಾಸೆ, ಮಾಲಿನ್ಯಯುತ ಪರಿಸರ ಮತ್ತು ತಿನ್ನುವ ಆಹಾರದಲ್ಲಿರುವ ವಿಷದ ಅಂಶಗಳು, ದುಶ್ಚಟಗಳು, ಹೃದಯ ಸಮಸ್ಯೆಗೆ ಕಾರಣವಾಗಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಎಸ್‌ಡಿಎಮ್ ನಾರಾಯಣ ಹಾರ್ಟ್ ಸೆಂಟರ್‌ನ ಹೃದಯ ರೋಗ ತಜ್ಞ ಡಾ. ಮುರಳೀಧರ ನಾಯ್ಕ್ ತಿಳಿಸಿದರು.

ವರದಿ : ಪರಮೇಶ ಎಸ್ ಲಮಾಣಿ

ಅವರು ಪಟ್ಟಣದ ಬಾಲಾಜಿ ಆಸ್ಪತ್ರೆಯಲ್ಲಿ ಮಂಗಳವಾರ ಎಸ್‌ಡಿಎಮ್ ನಾರಾಯಣ ಹಾರ್ಟ್ ಸೆಂಟರ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಬಿವೃದ್ಧಿ ಯೋಜನೆ ಬಿಸಿ ಟ್ರಸ್ಟ್, ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕ, ಕರ್ನಾಟಕ ರಾಜ್ಯ ಹಿರಿಯ ನಾಗರಿಕರ ಹಾಗೂ ನಿವೃತ್ತ ನೌಕರರ ಸಂಘ, ಕರ್ನಾಟಕ ಗ್ರಾಮಣಾಭಿವೃದ್ಧಿ ಹಾಗೂ ವಿವಿದೋದ್ದೇಶಗಳ ಸೇವಾ ಸಂಸ್ಥೆ ಇವುಗಳ ಸಂಯುಕ್ತ ಆಶ್ರಯದಲ್ಲಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ ೭೮ನೇ ಜನ್ಮದಿನ ಹಾಗೂ ಹಿರಿಯ ನಾಗರಿಕರ ಹುಟ್ಟುಹಬ್ಬದ ಪ್ರಯುಕ್ತ, ಉಚಿತ ಹೃದಯ ತಪಾಸಣಾ ಮತ್ತು ನೇತ್ರ ತಪಾಸಣಾ ಶಿಬಿರದಲ್ಲಿ ಮಾತನಾಡುತ್ತಿದ್ದರು.

ಸಾರ್ವಜನಿಕರು ಜೀವನ ಶೈಲಿ ಬದಲಾಯಿಸಿಕೊಳ್ಳಿ, ಒತ್ತಡ ಕಡಿಮೆ ಮಾಡಿಕೊಳ್ಳಿ, ಪೋಷಕಾಂಶವಿರುವ ಆಹಾರ ಸೇವೆಸಿ, ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಹೇಳಿದರು.

banner

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ರಾಜ್ಯ ಹಿರಿಯ ನಾಗರಿಕರ ಹಾಗೂ ನಿವೃತ್ತ ನೌಕರರ ಸಂಘ ಅಧ್ಯಕ್ಷ ಸಿ ಆರ್ ಲಕ್ಕುಂಡಿಮಠ ಅವರು ಇಂದಿನ ಆಧುನಿಕ ಜೀವನ ಶೈಲಿಯು ಹೃದಯ ರೋಗಕ್ಕೆ ಪ್ರಮುಖ ಕಾರಣವಾಗಿದೆ. ಹೃದಯ ಕಣ್ಣು ಮಾನವನ ಪ್ರಮುಖ ಅಂಗಗಳಾಗಿವೆ. ಹಿರಿಯ ನಾಗರಿಕರು ಈ ಶಿಬಿರದ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.

ಪ್ರಾಸ್ಥಾವಿಕವಾಗಿ ಫಕ್ಕೀರೇಶ ರಟ್ಟೀಹಳ್ಳಿ, ಹಾಗು ಮಾಲಾ ದೇವಿ ದಂದರಗಿ ಮಾತನಾಡಿದರು
ಮಂಗಳವಾರ ಮುಮದ್ಯಾಹ್ನದವರೆಗೂ ನಡೆದ ಶಿಬಿರದಲ್ಲಿ ಸುಮಾರು ೨೫೮ ಕ್ಕೂ ಅಧಿಕ ಜನರು ಹೃದಯ ತಪಾಸಣೆ ಹಾಗೂ ೨೨೮ ಕ್ಕೂ ಹೆಚ್ಚು ಜನ ನೇತ್ರ ತಪಾಸಣೆಗೊಳಗಾಗಿದ್ದರು.

ಈ ಸಂದರ್ಭದಲ್ಲಿ ಚಂಬಣ್ಣ ಬಾಳಿಕಾಯಿ, ಪ್ರಕಾಶ ಉಪನಾಳ, ಚನ್ನಪ್ಪ ಕೋಲಕಾರ, ಎಂ.ಕೆ.ಕಳ್ಳಿಮಠ, ನೀಲಪ್ಪ ಕರ್ಜಕ್ಕಣ್ಣವರ, ಎಸ್‌ಡಿಎಮ್ ದ ವೀರೇಶ, ಶಿರಹಟ್ಟಿ /ಲಕ್ಷ್ಮೇಶ್ವರ ತಾಲೂಕಿನ ಧರ್ಮಸ್ಥಳ ಸಂಘ ಯೋಜನಾಧಿಕಾರಿ ಪುನೀತ್ ಓಲೆಕಾರ , ಕೊಪ್ಪಳ ಪ್ರಾದೇಶಿಕ ಕಚೇರಿಯ ಬಿಸಿ ಯೋಜನಾಧಿಕಾರಿಗಳು ಚಂದ್ರಶೇಖರ, ಆಂತರಿಕ ಲೆಕ್ಕಪರಿಶೋಧಕರು ಚಂದ್ರಹಾಸ, ಲಕ್ಷ್ಮೇಶ್ವರ ವಲಯದ ಮೇಲ್ವಿಚಾರಕ ನಿಂಗಪ್ಪ ಪಾಟೀಲ್ ಸೋಮೇಶ್ವರ ವಲಯದ ಮೇಲ್ವಿಚಾರಕಿ ಶ್ರುತಿ ಸೇವಾ ಪ್ರತಿನಿಧಿಗಳು ಗಿರಿಜಾ, ಶೋಭಾ, ನಿರ್ಮಲಾ, ಲತಾ, ವಾಹಿದಾ, ಮಂಗಳ, ಈರಮ್ಮಾ, ವಾಣಿ, ಲಕ್ಷ್ಮಿ, ಸಹನಾ, ಈರಮ್ಮ, ನಿರ್ಮಲಾ, ಗಂಗಮ್ಮ, ಮಂಜುಳಾ, ಹಾಗೂ ಜಯಪ್ರೀಯ ಕಣ್ಣಿನ, ನಾರಾಯಣ ಹೃದಯಾಲಯದ ಆಸ್ಪತ್ರೆಯ ವೈದ್ಯರು ಸಿಬ್ಬಂದಿಗಳು ಹಾಜರಿದ್ದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb