Home » News » ಪುರಸಭೆ ವ್ಯಾಪ್ತಿಯಲ್ಲಿನ ಅವಧಿ ಮುಗಿದ ವಾಣಿಜ್ಯ ಮಗಳಿಗಳಿಗೆ ಪುನ: ಟೆಂಡರ್ ಮಾಡಲು ಸಂಘಟನೆಗಳ ಆಗ್ರಹ….!

ಪುರಸಭೆ ವ್ಯಾಪ್ತಿಯಲ್ಲಿನ ಅವಧಿ ಮುಗಿದ ವಾಣಿಜ್ಯ ಮಗಳಿಗಳಿಗೆ ಪುನ: ಟೆಂಡರ್ ಮಾಡಲು ಸಂಘಟನೆಗಳ ಆಗ್ರಹ….!

by CityXPress
0 comments

ಲಕ್ಷ್ಮೇಶ್ವರ: ಪುರಸಭೆ ಹದ್ದಿಗೆ ಒಳಪಡುವ ವಾಣಿಜ್ಯ ಮಳಿಗೆಗಳಾದ
ಭಾನುಮಾರ್ಕೆಟ್, ಹೊಸ್‌ಬಸ್ ಸ್ಟ್ಯಾಂಡ್ ಎದುರಿಗೆ ಇರುವ ವಾಣಿಜ್ಯ ಮಳಿಗೆಗಳ ಟೆಂಡರ್ ಅವಧಿ ಮುಗಿದಿದ್ದು ಅವುಗಳನ್ನು ತಮ್ಮ ಕಬ್ಜಾಕೆ ತೆಗೆದುಕೊಳ್ಳಲು ಜಯ ಕರ್ನಾಟಕ ಸಂಘಟನೆ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿಗಳ ಸಂಘ ವತಿಯಿಂದ ಪುರಸಭೆ ಮುಖ್ಯಾಧಿಕಾರಿ ಮಾಂತೇಶ ಬಿಳಗಿ ಅವರಿಗೆ ಮನವಿ ನೀಡಿದರು.

ವರದಿ : ಪರಮೇಶ ಎಸ್ ಲಮಾಣಿ.

ಉದ್ದೇಶಿಸಿ ಮಾತನಾಡಿದ ಜಯ ಕರ್ನಾಟಕ ತಾಲೂಕ ಅಧ್ಯಕ್ಷ ಇಸ್ಮಾಯಿಲ್ ಆಡೂರ ಮತ್ತು ಸಂಗೊಳ್ಳಿ ರಾಯಣ್ಣ ಅಭಿಮಾನಿಗಳ ಸಂಘದ ಜಿಲ್ಲಾ ಅಧ್ಯಕ್ಷ ಬಸವರಾಜ ಹಿರೇಮನಿ ಪುರಸಭೆ ಹದ್ದಿಗೆ ಒಳಪಡುವ ಭಾನುಮಾರ್ಕೆಟ್ ಹಾಗೂ ಹೊಸಬಸ್ಟ್ಯಾಂಡ್ ಎದುರಿಗೆ ಇರುವ ವಾಣಿಜ್ಯ ಮಳಿಗೆಗಳ ಅವಧಿಯು ಮುಗಿದಿದ್ದು, ಅವಧಿ ಮುಗಿದ ಮಳಿಗೆಗಳ ಬಾಡಿಗೆಯನ್ನು ಪಡೆದುಕೊಂಡು ಮಳಿಗೆಗಳನ್ನು ಬಂದ್ ಮಾಡಿಸಿ ತಮ್ಮ ಕಬ್ಬಾಕ್ಕೆ ತೆಗೆದುಕೊಳ್ಳಬೇಕು ಹಾಗೂ ಶಿಗ್ಲಿ ನಾಕಾ ಹತ್ತಿರವಿರುವ ಮಳಿಗೆಗಳಿಗೂ ಪುನಃ ಟೆಂಡರ್ ಕರೆಯಬೇಕು ಹಾಗೂ ಸದರಿ ಮಳಿಗೆಗಳ ದುರಸ್ತಿ, ಸುಣ್ಣ ಬಣ್ಣ ಮಾಡಿಸಿ ಟೆಂಡರ್ ಪ್ರಕಾರ ಬಾಡಿಗೆ ಕೊಡಬೇಕು. ಈ ಎಲ್ಲ ಪ್ರಕ್ರಿಯೆಯು 15 ದಿವಸದ ಒಳಗಾಗಿ ಮುಗಿಯತಕ್ಕದ್ದು, ಒಂದು ಇದಕ್ಕೆ ವಿಳಂಬ ಮಾಡಿದಲ್ಲಿ ಮಳಿಗೆಗಳನ್ನು ಬಂದ್ ಮಾಡಿ, “, ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಂದರ್ಭದಲ್ಲಿ ಇಸಾಕಬಾಶಾ ಹರಪನಹಳ್ಳಿ, ರಮೇಶ ಹಂಗನಕಟ್ಟಿ, ಸುರೇಶ ಹಟ್ಟಿ, ಬರಮಣ್ಣ ಸರಸೂರಿ, ಮಂಜುನಾಥ ಮುಳಗುಂದ, ಮಲ್ಲೇಶ ಸೂರಣಗಿ, ಬಸಣ್ಣ ಮೇಲ್ಮೂರಿ, ಮೈನು ಮೊಮಿನ, ಹಾಲಪ್ಪ ಬಂಡಾರಿ, ನಜೀರ ಬಾಗಲಕೋಟ, ಗೌಸ ಜಮಖಂಡಿ, ಬರಕತ್ ಅಲಿ ಮುಳಗುಂದ ದುದ್ದು ದುದ್ದುಸಾಬ, ಯಲ್ಲಪ್ಪ ಹಂಜಗಿ, ರಾಜು ಕೆರೆಕೊಪ್ಪ, ನಿಂಗಪ್ಪ ಕುರ್ತಕೋಟಿ ಮತ್ತಿತರಿದ್ದರು.

banner

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb