ಲಕ್ಷ್ಮೇಶ್ವರ : ನೂತನವಾಗಿ ಮುಂಡರಗಿ ತಾಲೂಕಿನ ಬಿಜೆಪಿ ಮಂಡಳದ ಅಧ್ಯಕ್ಷರಾಗಿ ಆಯ್ಕೆಯಾದ ಕುಮಾರಸ್ವಾಮಿ ಹಿರೇಮಠ ಹಾಗೂ ಲಕ್ಷ್ಮೇಶ್ವರ ನಗರ ಘಟಕದ ಅಧ್ಯಕ್ಷ ವಿಜಯಕುಮಾರ ಕುಂಬಾರ ಮತ್ತು ಪ್ರಧಾನ ಕಾರ್ಯದರ್ಶಿ ಪ್ರವೀಣ ಬೊಂಬಲೆಯವರಿಗೆ ಬಂಜಾರ ಸಮಾಜದ ಯುವಕರ ವತಿಯಿಂದ ಸನ್ಮಾನಿಸಲಾಯಿತು.
ವರದಿ : ಪರಮೇಶ ಎಸ್ ಲಮಾಣಿ
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಸಮ್ಮಾನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಮುಂಡರಗಿ ಮಂಡಳದ ಅಧ್ಯಕ್ಷ ಕುಮಾರಸ್ವಾಮಿ ಹಿರೇಮಠ ಈ ದೇಶದ ಪ್ರಮುಖ ಆಸ್ತಿ ಎಂದರೆ ಯುವಕರು , ಯುವಕರು ಮನಸ್ಸು ಮಾಡಿದರೆ ಎಲ್ಲವನ್ನು ಸಾಧಿಸಬಹುದು ನೀವು ಸಮಾಜವನ್ನು ಕಟ್ಟಿ ಬೇಳಿಸಬೇಕು, ಬಿಜೆಪಿ ಪಕ್ಷದಲ್ಲಿ ನನಗೆ ಪಕ್ಷ ಮತ್ತು ಕಾರ್ಯಕರ್ತರನ್ನು ಸಂಘಟಿಸಿ ಬೆಳಿಸುವ ಜವಾಬ್ದಾರಿ ನೀಡಿದ್ದು ನಿಮ್ಮ ಪ್ರೀತಿಯಿಂದ ಆಗಿದೆ. ಪಕ್ಷಕ್ಕಾಗಿ ಅಲ್ಲದೇ ಯುವಕರ ಸಮಸ್ಯೆಗಳನ್ನು ಸ್ಪಂದಿಸುವ ಕೆಲಸ ಮಾಡುತ್ತಾ ಬಂದಿದ್ದೆನೆ ಇನ್ನೂ ಮುಂದೆ ನಾವು ನೀವು ಜೊತೆಗಿದ್ದು ಸಮಾಜಕ್ಕಾಗಿ ಹಾಗೂ ದೇಶದ ಒಳಿತಿಗಾಗಿ ಕೆಲಸ ಮಾಡುತ್ತಿರಿವ ಬಿಜೆಪಿ ಪಕ್ಷಕ್ಕಾಗಿ ದೊಡಿಯೋಣ ದೇಶ ಕಟ್ಟೋಣ ಎಂದರಲ್ಲದೇ,
ಬಂಜಾರ ಸಮಾಜ ಎಂದರೆ ಎಲ್ಲಾ ಸಮಾಜದ ಜೊತೆಗೆ ಒಳ್ಳೆಯ ಸಂಬಂಧ ಇಟ್ಟುಕೊಂಡು ದುಡಿಯುವ ಸಮಾಜವಾಗಿದೆ ನಿಮ್ಮ ಈ ಒಟ್ಟಿನ ಫಲವೇ ಶಿರಹಟ್ಟಿ ಮತಕ್ಷೇತದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಾಯಿತು ಎಂದರು.
ನಂತರ ಮಾತನಾಡಿದ ಬಂಜಾರ ಯುವ ಮುಖಂಡರಾದ ತುಕ್ಕಪ್ಪ ಪೂಜಾರ ಹಾಗೂ ಸಂತೋಷ ರಾಠೋಡ ನಮ್ಮ ಸಮಾಜದಲ್ಲಿ ಯುವಕರು ಹಿರಿಯರು ಹಾಕಿದಂತ ಮಾರ್ಗದರ್ಶನದಲ್ಲಿ ನಡೆಯುತ್ತಾರೆ. ಯುವಕರಿಗೆ ಪ್ರೋತ್ಸಾಹಿಸುವ ಸಮಾಜವಾಗಿದೆ ಲಕ್ಷ್ಮೇಶ್ವರ ನಗರಕ್ಕೆ ಮತ್ತು ಮುಂಡರಗಿ ಮಂಡಳಕ್ಕೆ ಕ್ರಿಯಾಶೀಲ ಯುವಕರನ್ನು ಆಯ್ಕೆ ಮಾಡಿದ್ದು ಖುಷಿ ತಂದಿದೆ ಪಕ್ಷ ಹಾಗೂ ಸಮಾಜ ಕಟ್ಟುವ ನಿಮ್ಮ ಪ್ರಯತ್ನಕ್ಕೆ ಬಂಜಾರ ಸಮಾಜವು ಕೈಜೊಡಿಸಿ ಕೆಲಸ ಮಾಡುತ್ತೆವೆ ಎಂದರು.
ಸಂದರ್ಭದಲ್ಲಿ ಗಂಗಾಧರ ಮೆನಸಿನಕಾಯಿ, ತುಕ್ಕಪ್ಪ ಕಾರಭಾರಿ, ಸಂತೋಷ ರಾಠೋಡ, ರುದ್ರಪ್ಪ ಲಮಾಣಿ, ತಿಪ್ಪಣ್ಣ ಲಮಾಣಿ, ದುಂಡೇಶ ಲಮಾಣಿ, ಕೀರಣ ಲಮಾಣಿ, ಗಣೇಶ ಲಮಾಣಿ, ಆನಂದ ಲಮಾಣಿ, ಮಲ್ಲೇಶ ವಡ್ಡರ, ನೂರಪ್ಪ ಲಮಾಣಿ, ಬಸವರಾಜ ಲಮಾಣಿ, ವಿನೋದ ಪೂಜಾರ, ಮಹೇಶ ರಾಠೋಡ, ಸುಭಾಸ ಲಮಾಣಿ, ಸುರೇಶ ಮಾಳಗಿಮನಿ, ಯಂಕಪ್ಪ ಲಮಾಣಿ, ಚಂದ್ರು ಲಮಾಣಿ, ಕೀರಣ ಅಕ್ಕಿಗುಂದ, ಸಂತೋಷ ಜಾವೂರ, ವಿಶಾಲ ಮತ್ತಿತತಿದ್ದರು.
