ಲಕ್ಷ್ಮೇಶ್ವರ: ಮುಂಗಾರು ಹಂಗಾಮಿಗೆ ರೈತರಿಗೆ ಅಗತ್ಯ ಇರುವಷ್ಟು ಬಿತ್ತನೆ ಬೀಜ ಮತ್ತು ಗೊಬ್ಬರವನ್ನು ವಿಳಂಬ ಮಾಡದೆ ರಿಯಾಯಿತಿ ದರದಲ್ಲಿ ಸರಬರಾಜು ಮಾಡಬೇಕು ಎಂದು ಜಯ ಕರ್ನಾಟಕ ಜನಪರ ವೇದಿಕೆಯಿಂದ ತಹಶಿಲ್ದಾರ ಧನಂಜಯ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ವರದಿ : ಪರಮೇಶ ಎಸ್ ಲಮಾಣಿ.
ಉದ್ದೇಶಿಸಿ ಮಾತನಾಡಿದ ರಾಜ್ಯ ಉಪಾಧ್ಯಕ್ಷ ಹಾಲಪ್ಪ ವರವಿ ‘ಈ ವರ್ಷ ಮುಂಗಾರು ಹಂಗಾಮು ಅವಧಿಗಿಂತ ಮೊದಲು ಆರಂಭವಾಗಿದ್ದು ಎಲ್ಲ ತರಹದ ಬಿತ್ತನೆ ಬೀಜ ಮತ್ತು ಗೊಬ್ಬರ ಕೊರತೆ ಆಗದಂತೆ ತಾಲ್ಲೂಕು ಕೃಷಿ ಅಧಿಕಾರಿಗಳಿಗೆ ತಾಕೀತು ಮಾಡಬೇಕು. ಅವುಗಳನ್ನು ರೈತರಿಗೆ ಪೂರೈಸಿ ಯಾವುದೇ ಅವ್ಯವಹಾರ ನಡೆಯದೆ, ರಿಯಾಯಿತಿ ದರದಲ್ಲಿ ರೈತರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಹೇಳಿದರು.
ಮಾರುಕಟ್ಟೆಯಲ್ಲಿ ಗೊಬ್ಬರ ಮತ್ತು ಬೀಜ ಮಾರಾಟ ಪರವಾಣಿಗೆದಾರರು ಹೆಚ್ಚಿನ ದರದಲ್ಲಿ ಮಾರಾಟ ಮಾಡದಂತೆ ಅವರಿಗೆ ಮಾಹಿತಿ ನೀಡಬೇಕೆಂದು ಆಗ್ರಹಿಸಿದರು.
ನಂತರ ಮಾತನಾಡಿದ ತಾಲೂಕ ಅಧ್ಯಕ್ಷ ಮೋಹನ ನಂದೇಣ್ಣವರ್ , ಜಿಲ್ಲಾಧ್ಯಕ್ಷ ಸಣ್ಣಯಲ್ಲಪ್ಪ ವಳಗೇರಿ‘ಯಾವುದೇ ಬೀಜಗಳು ಕಳಪೆ ಗುಣಮಟ್ಟದಿಂದ ಕೂಡಿರಬಾರದು. ಅಕ್ರಮವಾಗಿ ಬೇರೆ ರಾಜ್ಯದಿಂದ ಬರುವ ಕಳಪೆ ಬೀಜಗಳ ಬಗ್ಗೆ ನಿಗಾ ಇಡಬೇಕು. ಕೃತಕ ಅಭಾವ ಸೃಷ್ಟಿ ಮಾಡಿ ತೊಂದರೆ ಆಗದಂತೆ ಗೊಬ್ಬರ ಮತ್ತು ಬೀಜದ ಅಂಗಡಿಯ ಮಾಲೀಕರಿಗೆ ಮನದಟ್ಟು ಮಾಡಬೇಕು’ಎಂದಿದ್ದರಲ್ಲದೇ,
‘ಕೃತಕ ಅಭಾವ ಸೃಷ್ಟಿಸುವ ಯಾವುದೇ ಗೊಬ್ಬರ, ಬಿತ್ತನೆ ಬೀಜ, ಕೀಟನಾಶಕ ಮಾರಾಟಗಾರರ ಮೇಲೆ ಮುಲಾಜಿಲ್ಲದೆ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಬೇಕು. ಈ ಸಂಬಂಧ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಮತ್ತು ಉಪ ನಿರ್ದೇಶಕರಿಗೆ ಸೂಕ್ತ ನಿರ್ದೇಶನ ನೀಡಬೇಕು. ಜೊತೆಗೆ ಎಫ್‌ಐಡಿ ಮೇಲೆ ಗೊಬ್ಬರ ಕೊಡುವುದನ್ನು ಕೈಬಿಡಬೇಕು’ ಎಂದು ಹೇಳಿದರು.
ಸಂದರ್ಭದಲ್ಲಿ ಸಂತೋಷ ರಾಠೋಡ, ಮಂಜುನಾಥ ಮೂಲಿಮನಿ, ಕುಮಾರ ಬೇಟಗೇರಿ, ಶೇಖಪ್ಪ ತಳವಾರ, ಸುಭಾಷ ಲಮಾಣಿ, ಶಿವಾನಂದ ಕಡೆಮನಿ, ಚಂದ್ರು ಬಸಪ್ಪನ್ನವರ್, ಹನಮಂತ ತುಂಬಣ್ಣನವರ್, ಶಿವಾನಂದ ಶಿರನಹಳ್ಳಿ, ಶರಣಪ್ಪಗೌಡ ಪಾಟೀಲ್, ನಿಂಗಪ್ಪ ರಗಟಿ, ವೆಂಕಟೇಶ ಶಾಂತಗೇರಿ, ಶ್ರೀಕಾಂತ ಲಮಾಣಿ, ಸಂಜು ಲಮಾಣಿ, ಮಂಜುನಾಥ ಲಮಾಣಿ, ಅಜಯ್ ಲಮಾಣಿ,
