Home » News » ಪೊಲೀಸ್ ಠಾಣೆ ಸಮೀಪದಲ್ಲೇ ರೌಡಿ ಶೀಟರ್ ಬರ್ಬರ ಹತ್ಯೆ..! ಹಳೇ ವೈಷಮ್ಯದ ಹಿನ್ನೆಲೆ ಮೂವರಿಂದ ಕೊಲೆ ಮಾಡಿರುವ ಶಂಕೆ..!

ಪೊಲೀಸ್ ಠಾಣೆ ಸಮೀಪದಲ್ಲೇ ರೌಡಿ ಶೀಟರ್ ಬರ್ಬರ ಹತ್ಯೆ..! ಹಳೇ ವೈಷಮ್ಯದ ಹಿನ್ನೆಲೆ ಮೂವರಿಂದ ಕೊಲೆ ಮಾಡಿರುವ ಶಂಕೆ..!

by CityXPress
0 comments

ಲಕ್ಷ್ಮೇಶ್ವರ: ಪೊಲೀಸ್ ಠಾಣೆಯಿಂದ ಕೂಗಳತೆಯ ದೂರದಲ್ಲೇ ರೌಡಿ ಶೀಟರ್‌ನನ್ನು ಮೂವರು ದುಷ್ಕರ್ಮಿಗಳು ಅಟ್ಟಾಡಿಸಿಕೊಂಡು ಹೋಗಿ, ಕೈಗಳನ್ನು ಕಟ್ಟಿ ಮನಬಂದಂತೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬುಧವಾರ ಹಾಡಹಗಲೇ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ತಟ್ಟಿ ಲೇಔಟ್‌ನಲ್ಲಿ ನಡೆದಿದೆ.

ವರದಿ: ಮಹಲಿಂಗೇಶ ಹಿರೇಮಠ. ಗದಗ

ಹತ್ಯೆಯಾದ ವ್ಯಕ್ತಿಯನ್ನು ಇರ್ಫಾನ್ ತಹಶೀಲ್ದಾರ್ (32) ಎಂದು ಗುರುತಿಸಲಾಗಿದ್ದು, ಮೃತ ಇರ್ಫಾನ್ ಈ ಹಿಂದೆ ರೌಡಿ ಶೀಟರ್ ಆಗಿದ್ದ ಎನ್ನಲಾಗಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಈ ಹತ್ಯೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಮಹ್ಮದ್ ಶಫಿನ್, ಆಯಾಜ್ ಮುಲ್ಲಾ ಹಾಗೂ ಮಹ್ಮದ್ ವಾಸಿಮ್ ಮುಲ್ಲಾ ಎಂಬ ಮೂವರು ಇರ್ಫಾನ್‌ನನ್ನು ಅಟ್ಟಾಡಿಸಿಕೊಂಡು ಹೋಗಿ ದಾಳಿ ನಡೆಸಿದ್ದಾರೆ ಎನ್ನುವ ಆರೋಪ‌ ಕೇಳಿ ಬಂದಿದೆ.ಈಗಾಗಲೇ ಈ ಮೂವರನ್ನ ವಶಕ್ಕೆ ಪಡೆಯಲಾಗಿದೆ.

banner

ಇರ್ಫಾನ್ ಅವರ ಕೈಗಳನ್ನು ಕಟ್ಟಿ, ಮಾರಕಾಸ್ತ್ರಗಳಿಂದ ಮನಬಂದಂತೆ ಹಲ್ಲೆ ನಡೆಸಲಾಗಿದೆ ಎನ್ನಲಾಗಿದ್ದು, ಚಾಕುವಿನಿಂದ ಮುಖ ಹಾಗೂ ಕುತ್ತಿಗೆ ಭಾಗಕ್ಕೆ ಗಂಭೀರವಾಗಿ ಇರಿದು/ಕೊಯ್ದು ಹತ್ಯೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ತೀವ್ರವಾಗಿ ಗಾಯಗೊಂಡ ಇರ್ಫಾನ್ ರಕ್ತದ ಮಡುವಿನಲ್ಲಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಹಾಡಹಗಲೇ ನಡೆದ ಈ ಬರ್ಬರ ಹತ್ಯೆಯಿಂದ ತಟ್ಟಿ ಲೇಔಟ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅದರಲ್ಲೂ ಪೊಲೀಸ್ ಠಾಣೆ ಸಮೀಪದಲ್ಲೇ ಘಟನೆ ನಡೆದಿರುವುದು ಸಾರ್ವಜನಿಕರಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಲಕ್ಷ್ಮೇಶ್ವರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗದಗ ಎಸ್ಪಿ ಮಿಥುನ್ H.N ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹತ್ಯೆಗೆ ಬಳಸಲಾಗಿದೆ ಎನ್ನಲಾದ ಮಾರಕಾಸ್ತ್ರಗಳು ಘಟನೆಯ ಹಿನ್ನೆಲೆ ಸೇರಿದಂತೆ ಹಲವು ಆಯಾಮಗಳಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಹಳೆಯ ವೈಷಮ್ಯವೇ ಕೊಲೆಗೆ ಕಾರಣವೇ? ಹತ್ಯೆಗೂ ಮುನ್ನ ಇರ್ಫಾನ್ ಮತ್ತು ಆರೋಪಿಗಳ ನಡುವೆ ಏನಾದರೂ ಗಲಾಟೆ ನಡೆದಿತ್ತೇ? ಹತ್ಯೆಯಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿದ್ದಾರೆಯೇ? ಎಂಬುದರ ಬಗ್ಗೆಯೂ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.

ಈ ಸಂಬಂಧ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆ ಹಾಗೂ ಬಂಧನಕ್ಕೆ ಪೊಲೀಸರು ಮುಂದಾಗಿದ್ದಾರೆ. ಘಟನೆಯ ನಿಖರ ಕಾರಣ ಮತ್ತು ಹತ್ಯೆಯ ಸಂಪೂರ್ಣ ಹಿನ್ನೆಲೆ ಪೊಲೀಸ್ ತನಿಖೆಯಿಂದಷ್ಟೇ ತಿಳಿದುಬರಬೇಕಿದೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb