Home » News » ಭಾರತ ಜನಗಣತಿ 2027: ಸ್ವಯಂ ಎಣಿಕೆ ಪ್ರಾರಂಭ – ಸಾರ್ವಜನಿಕರಿಗೆ ಆನ್‌ಲೈನ್‌ನಲ್ಲಿ ಮಾಹಿತಿ ಸಲ್ಲಿಸಲು ಅವಕಾಶ.. ಗದಗ–ಬೆಟಗೇರಿ ನಾಗರಿಕರಿಗೆ ವಿಶೇಷ ಮನವಿ-ಏಪ್ರಿಲ್ 15ರವರೆಗೆ Self-Enumeration Window ತೆರೆಯಲ್ಪಟ್ಟಿದೆ |

ಭಾರತ ಜನಗಣತಿ 2027: ಸ್ವಯಂ ಎಣಿಕೆ ಪ್ರಾರಂಭ – ಸಾರ್ವಜನಿಕರಿಗೆ ಆನ್‌ಲೈನ್‌ನಲ್ಲಿ ಮಾಹಿತಿ ಸಲ್ಲಿಸಲು ಅವಕಾಶ.. ಗದಗ–ಬೆಟಗೇರಿ ನಾಗರಿಕರಿಗೆ ವಿಶೇಷ ಮನವಿ-ಏಪ್ರಿಲ್ 15ರವರೆಗೆ Self-Enumeration Window ತೆರೆಯಲ್ಪಟ್ಟಿದೆ |

by CityXPress
0 comments

ವಿಸ್ತಾರ ವಾಯ್ಸ್ ಸುದ್ದಿ:
ಗದಗ: ಭಾರತ ಜನಗಣತಿ 2027ರ ಭಾಗವಾಗಿ ದೇಶವ್ಯಾಪಿ ಗಣತಿ ಪ್ರಕ್ರಿಯೆ ಆರಂಭವಾಗಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ಸರ್ಕಾರವು ಸ್ವಯಂ ಎಣಿಕೆ (Self-Enumeration) ವ್ಯವಸ್ಥೆಯನ್ನು ಪರಿಚಯಿಸಿದೆ. ಇದರ ಮೂಲಕ ನಾಗರಿಕರು ತಮ್ಮ ಮನೆ ಮತ್ತು ಕುಟುಂಬದ ವಿವರಗಳನ್ನು ಆನ್‌ಲೈನ್ ಮೂಲಕ ಸ್ವತಃ ದಾಖಲಿಸಿಕೊಳ್ಳಬಹುದಾಗಿದೆ.

ಗದಗ–ಬೆಟಗೇರಿ ಅವಳಿ ನಗರದ ಸಾರ್ವಜನಿಕರಿಗೆ ಈ ಕುರಿತು ಮಾಹಿತಿ ನೀಡಲಾಗಿದ್ದು, ದಿನಾಂಕ ಏಪ್ರಿಲ್ 1, 2026 ರಿಂದ ಏಪ್ರಿಲ್ 15, 2026ರವರೆಗೆ Self-Enumeration Window ತೆರೆದಿರುತ್ತದೆ. ಈ ಅವಧಿಯಲ್ಲಿ ನಾಗರಿಕರು ಅಧಿಕೃತ ಪೋರ್ಟಲ್‌ಗಳು — https://karnataka.census.gov.in ಮತ್ತು https://se.census.gov.in ಮೂಲಕ ಲಾಗಿನ್ ಆಗಿ ತಮ್ಮ ಮಾಹಿತಿಯನ್ನು ಸಲ್ಲಿಸಬಹುದಾಗಿದೆ.

ಸ್ವಯಂ ಎಣಿಕೆಯ ವೇಳೆ ಮನೆಯ ವಿವರಗಳು, ಕುಟುಂಬದ ಸದಸ್ಯರ ಹೆಸರು, ವಯಸ್ಸು, ಲಿಂಗ, ವಿದ್ಯಾರ್ಹತೆ, ಉದ್ಯೋಗ ಸೇರಿದಂತೆ ವಿವಿಧ ಮಾಹಿತಿಗಳನ್ನು ನಿಖರವಾಗಿ ನಮೂದಿಸಬೇಕಾಗುತ್ತದೆ. ಈ ಮಾಹಿತಿಯನ್ನು ಸಲ್ಲಿಸಿದ ನಂತರ ಪ್ರತಿಯೊಬ್ಬರಿಗೆ ಸ್ವಯಂ ಗಣತಿ ಗುರುತಿನ ಸಂಖ್ಯೆ (Self-Enumeration ID) ನೀಡಲಾಗುತ್ತದೆ.

ಈ ID ಸಂಖ್ಯೆಯನ್ನು ಗಣತಿದಾರರು ಮನೆಗೆ ಭೇಟಿ ನೀಡಿದಾಗ ನೀಡಿದರೆ, ಗಣತಿ ಪ್ರಕ್ರಿಯೆ ವೇಗವಾಗಿ ಹಾಗೂ ಸುಗಮವಾಗಿ ಪೂರ್ಣಗೊಳ್ಳಲು ಸಹಾಯಕವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

banner

ಸರ್ಕಾರದ ಈ ಡಿಜಿಟಲ್ ವ್ಯವಸ್ಥೆ ಜನಸಾಮಾನ್ಯರಿಗೆ ಸಮಯ ಉಳಿಸುವುದರ ಜೊತೆಗೆ ಗಣತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಸುಗಮತೆಯನ್ನು ಹೆಚ್ಚಿಸುವ ಉದ್ದೇಶ ಹೊಂದಿದೆ. ಆದ್ದರಿಂದ ಗದಗ–ಬೆಟಗೇರಿ ನಗರದ ಎಲ್ಲಾ ನಾಗರಿಕರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಜನಗಣತಿ ದೇಶದ ಅಭಿವೃದ್ಧಿಗೆ ಆಧಾರಭೂತ ಮಾಹಿತಿಯನ್ನು ಒದಗಿಸುವ ಪ್ರಮುಖ ಪ್ರಕ್ರಿಯೆಯಾಗಿರುವುದರಿಂದ ಪ್ರತಿಯೊಬ್ಬರೂ ನಿಖರ ಮಾಹಿತಿಯನ್ನು ಸಲ್ಲಿಸುವ ಮೂಲಕ ತಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕೆಂದು ಕೋರಲಾಗಿದೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb