Home » News » ಮುಳ್ಳಿನ ಕಂಟಿಯಲ್ಲಿ ನವಜಾತ ಶಿಶು ಎಸೆದು ಹೋದ ದುರುಳರು: ಗ್ರಾಮಸ್ಥರಿಂದ ರಕ್ಷಣೆ..

ಮುಳ್ಳಿನ ಕಂಟಿಯಲ್ಲಿ ನವಜಾತ ಶಿಶು ಎಸೆದು ಹೋದ ದುರುಳರು: ಗ್ರಾಮಸ್ಥರಿಂದ ರಕ್ಷಣೆ..

by CityXPress
0 comments

ಗದಗ: ಕರುಳಬಳ್ಳಿ ಸಮೇತವಾಗಿದ್ದ ನವಜಾತ ಗಂಡು ಶಿಶುವನ್ನು ಮುಳ್ಳಿನ ಕಂಟಿಯಲ್ಲಿ ಎಸೆದು ಹೋಗಿರುವ ಅಮಾನವೀಯ ಘಟನೆ ಗದಗ ತಾಲೂಕಿನ ಚಿಕ್ಕೊಪ್ಪ ಗ್ರಾಮದಲ್ಲಿ ಇಂದು ಬೆಳಿಗ್ಗೆ (ಬುಧವಾರ) ನಡೆದಿದೆ.

ಗ್ರಾಮದ ಸರ್ಕಾರಿ ಶಾಲೆಯ ಸಮೀಪದ ಮುಳ್ಳಿನ ಬೇಲಿಯಲ್ಲಿ ಆಗತಾನೇ ಜನ್ಮತಾಳಿದ ಹಸುಗೂಸು ಪತ್ತೆಯಾಗಿದೆ. ಶಿಶುವಿನ ಅಳುವಿನ ಸದ್ದು ಕೇಳಿ ಅಥವಾ ಮುಳ್ಳಿನ ಕಂಟಿಯಲ್ಲಿ ಮಗುವಿರುವುದನ್ನು ಗಮನಿಸಿದ ಗ್ರಾಮಸ್ಥರು ತಕ್ಷಣ ಸ್ಥಳಕ್ಕೆ ತೆರಳಿ ಮಗುವನ್ನು ರಕ್ಷಿಸಿದ್ದಾರೆ.

ನವಜಾತ ಶಿಶುವನ್ನು ಕರುಳಬಳ್ಳಿ ಸಮೇತ ಮುಳ್ಳಿನ ಕಂಟಿಯಲ್ಲಿ ಕಂಡ ಗ್ರಾಮಸ್ಥರು ಮರುಕ ವ್ಯಕ್ತಪಡಿಸಿದ್ದು, ಕೂಡಲೇ ಪೊಲೀಸರಿಗೆ ಹಾಗೂ ಆರೋಗ್ಯ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಅಂಬ್ಯುಲೆನ್ಸ್ ಮೂಲಕ ಶಿಶುವನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಮಗುವಿಗೆ ಅಗತ್ಯ ಚಿಕಿತ್ಸೆ ಹಾಗೂ ಆರೈಕೆ ನೀಡುತ್ತಿದ್ದಾರೆ.

ಶಿಶುವನ್ನು ಮುಳ್ಳಿನ ಕಂಟಿಯಲ್ಲಿ ಎಸೆದು ಹೋಗಿರುವವರು ಯಾರು ಎಂಬುದು ಸದ್ಯ ತಿಳಿದುಬಂದಿಲ್ಲ. ಮಗುವನ್ನು ಈ ಸ್ಥಿತಿಯಲ್ಲಿ ಬಿಟ್ಟುಹೋದವರ ಪತ್ತೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಬೆಟಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.

banner

ನವಜಾತ ಶಿಶುವನ್ನು ಅಮಾನವೀಯವಾಗಿ ಮುಳ್ಳಿನ ಕಂಟಿಯಲ್ಲಿ ಬಿಟ್ಟುಹೋದ ಘಟನೆ ಸಾರ್ವಜನಿಕರಲ್ಲಿ ಆಕ್ರೋಶ ಹಾಗೂ ಬೇಸರಕ್ಕೆ ಕಾರಣವಾಗಿದೆ. ಪೊಲೀಸರು ಸ್ಥಳೀಯರಿಂದ ಮಾಹಿತಿ ಕಲೆಹಾಕುತ್ತಿದ್ದು, ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ಸೇರಿದಂತೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb