Home » News » ಎರಡು ಸಲ ಟಾರ್ಗೆಟ್ ಮಿಸ್..! 3ನೇ ಸಲ ಕ್ಲಿಯರ್..! ಎದುರು ಮನೆಯಾಕೆ ಜೊತೆ ಅನೈತಿಕ ಸಂಪರ್ಕಕ್ಕೆ ಬಲಿಯಾದನಾ ಯುವಕ..!? ನಾಲ್ವರು ವಶಕ್ಕೆ..!

ಎರಡು ಸಲ ಟಾರ್ಗೆಟ್ ಮಿಸ್..! 3ನೇ ಸಲ ಕ್ಲಿಯರ್..! ಎದುರು ಮನೆಯಾಕೆ ಜೊತೆ ಅನೈತಿಕ ಸಂಪರ್ಕಕ್ಕೆ ಬಲಿಯಾದನಾ ಯುವಕ..!? ನಾಲ್ವರು ವಶಕ್ಕೆ..!

by CityXPress
0 comments

ಲಕ್ಷ್ಮೇಶ್ವರ:
ಎದುರು ಮನೆಯಾಕೆಯ ಜೊತೆಗಿನ ಅನೈತಿಕ ಸಂಬಂಧದ ಆರೋಪ..! ಎರಡು ವರ್ಷಗಳಿಂದ ಮುಂದುವರಿದಿದ್ದ ವೈಮನಸ್ಸು..! ಎರಡು ಬಾರಿ ನಡೆದಿದ್ದ ಗಲಾಟೆ..! ಕೊನೆಗೆ ಮೂರನೇ ಬಾರಿ ನಡೆದ ದಾಳಿಯಲ್ಲಿ ಕುರಿಗಾಹಿಯೊಬ್ಬನ ಜೀವವೇ ಹೋಗಿದೆ..!

ವರದಿ: ಮಹಲಿಂಗೇಶ ಹಿರೇಮಠ.ಗದಗ

ಹೌದು, ಇಂತಹದೊಂದು ಬೆಚ್ಚಿಬೀಳಿಸುವ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಪುಟಗಾವ್ ಬಡ್ನಿ ಗ್ರಾಮದಲ್ಲಿ ನಡೆದಿದೆ.

ಕುರಿ ಕಾಯುವ ಹಾಗೂ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಈರಣ್ಣ ಅಗಸಿಬಾಗಿಲ (34) ಹತ್ಯೆಯಾದ ಯುವಕ. ನಿನ್ನೆ ತಡರಾತ್ರಿ ಈರಣ್ಣ ತನ್ನ ಕುರಿ ಕಾಯುವ ಕೆಲಸ ಮುಗಿಸಿಕೊಂಡು ಮನೆಗೆ ಬಂದು ಮನೆಯಲ್ಲಿದ್ದ ವೇಳೆ, ಕುಟುಂಬವೊಂದು ಏಕಾಏಕಿ ದಾಳಿ ನಡೆಸಿ ಹತ್ಯೆ ಮಾಡಿದೆ ಎನ್ನಲಾಗಿದೆ.

banner

ಎರಡು ವರ್ಷಗಳಿಂದ ಕಾಡುತ್ತಿದ್ದ ವಿವಾದ..!

ಈರಣ್ಣ ಹಾಗೂ ಅದೇ ಗ್ರಾಮದ ರೇಣುಕಾ ಎಂಬ ಮಹಿಳೆಯ ನಡುವೆ ಅನೈತಿಕ ಸಂಬಂಧವಿತ್ತು ಎನ್ನುವ ಆರೋಪ ಕೇಳಿಬಂದಿತ್ತು. ಈ ವಿಚಾರವಾಗಿ ರೇಣುಕಾ ಕುಟುಂಬ ಹಾಗೂ ಈರಣ್ಣ ನಡುವೆ ಕಳೆದ ಎರಡು ವರ್ಷಗಳಿಂದ ಗಲಾಟೆ ಮತ್ತು ವೈಮನಸ್ಸು ನಡೆಯುತ್ತಿತ್ತು ಎನ್ನಲಾಗಿದೆ.

ಈ ವಿಚಾರವಾಗಿ ಈ ಹಿಂದೆಯೂ ಜಗಳ ನಡೆದಿದ್ದು, ಈರಣ್ಣನ ಮೇಲೆ ದಾಳಿ ಮಾಡಲು ಪ್ರಯತ್ನ ನಡೆದಿತ್ತು ಎನ್ನುವ ಮಾಹಿತಿ ಲಭ್ಯವಾಗಿದೆ. ಆದರೆ ಎರಡು ಬಾರಿ ನಡೆದಿದ್ದ ಪ್ರಯತ್ನಗಳು ವಿಫಲವಾಗಿದ್ದವು ಎನ್ನಲಾಗಿದ್ದು, ಮೂರನೇ ಬಾರಿ ನಡೆದ ದಾಳಿ ಮಾತ್ರ ಈರಣ್ಣನ ಜೀವವನ್ನೇ ಬಲಿ ಪಡೆದಿದೆ.

ಮನೆಯಲ್ಲಿದ್ದಾಗಲೇ ದಾಳಿ..!

ನಿನ್ನೆ ರಾತ್ರಿ ಕುರಿ ಕಾಯುವ ಕೆಲಸ ಮುಗಿಸಿಕೊಂಡು ಈರಣ್ಣ ಮನೆಗೆ ಬಂದಿದ್ದ. ಇದೇ ವೇಳೆ ರೇಣುಕಾ ಕುಟುಂಬಸ್ಥರು ಮನೆಗೆ ಬಂದು ಈತನ ಜೊತೆಗೆ ಜಗಳ ಆರಂಭಿಸಿದ್ದಾರೆ. ಹೀಗೆ ಜಗಳ ತಾರಕಕ್ಕೇ ಏರಿ, ಬಡಿಗೆ ಹಾಗೂ ದೊಣ್ಣೆಗಳಿಂದ ಈರಣ್ಣನ ತಲೆಗೆ ಹೊಡೆದಿದ್ದಾರೆ ಎನ್ನಲಾಗಿದೆ.

ದಾಳಿಯಿಂದ ಈರಣ್ಣನ ತಲೆಗೆ ಗಂಭೀರ ಗಾಯವಾಗಿದ್ದು, ತೀವ್ರ ರಕ್ತಸ್ರಾವವಾಗಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಈರಣ್ಣ, ಸ್ಥಳದಲ್ಲೇ ಉಸಿರು ಚೆಲ್ಲಿದ್ದಾನೆ ಎನ್ನಲಾಗಿದೆ.

ಘಟನೆ ಬಳಿಕ ಗ್ರಾಮದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ನಾಲ್ವರು ವಶಕ್ಕೆ..!

ಘಟನೆಗೆ ಸಂಬಂಧಿಸಿದಂತೆ ಲಕ್ಷ್ಮೇಶ್ವರ ಪೊಲೀಸ್ ಠಾಣೆ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ವಶಕ್ಕೆ ಪಡೆದವರನ್ನು ಹನಮವ್ವ (40), ಧರ್ಮರಾಜ್ (24), ರೇಣುಕಾ (22) ಹಾಗೂ ಅಂಜನೇಯ (32) ಎಂದು ಗುರುತಿಸಲಾಗಿದೆ.

ರೇಣುಕಾ, ಆಕೆಯ ಪತಿ, ತಾಯಿ ಹಾಗೂ ಸಹೋದರ ಸೇರಿಕೊಂಡು ಈರಣ್ಣನ ಮೇಲೆ ದಾಳಿ ನಡೆಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ಎದುರು ಮನೆಯಾಕೆಯ ಸಂಪರ್ಕವೇ ಮುಳುವಾಯ್ತಾ..?

ಎದುರು ಮನೆಯಲ್ಲಿದ್ದ ರೇಣುಕಾ ಜೊತೆ ಈರಣ್ಣನಿಗೆ ಅನೈತಿಕ ಸಂಬಂಧವಿತ್ತು ಎನ್ನುವ ಆರೋಪವೇ ಈ ಇಡೀ ವಿವಾದಕ್ಕೆ ಕಾರಣ ಎನ್ನಲಾಗಿದೆ.

ಈ ಸಂಬಂಧದ ವಿಚಾರವಾಗಿ ಕಳೆದ ಎರಡು ವರ್ಷಗಳಿಂದ ಎರಡು ಕುಟುಂಬಗಳ ನಡುವೆ ವೈಮನಸ್ಸು ಇತ್ತು ಎನ್ನಲಾಗಿದ್ದು, ಇದೇ ದ್ವೇಷ ಕೊಲೆಗೆ ಕಾರಣವಾಗಿರಬಹುದೇ ಎಂಬ ಅನುಮಾನ ಪೊಲೀಸರನ್ನು ಕಾಡುತ್ತಿದೆ.

ಎದುರು ಮನೆಯಾಕೆಯ ಜೊತೆಗಿನ ಸಂಪರ್ಕದ ಆರೋಪದಿಂದ ಆರಂಭವಾದ ವಿವಾದ, ಎರಡು ವರ್ಷಗಳ ಕಾಲ ಮುಂದುವರಿದು, ಕೊನೆಗೆ ಯುವಕನ ಜೀವವನ್ನೇ ಬಲಿ ಪಡೆದಿದೆ.

ಆದರೆ ಈರಣ್ಣ ಮತ್ತು ರೇಣುಕಾ ನಡುವೆ ನಿಜವಾಗಿಯೂ ಅನೈತಿಕ ಸಂಬಂಧ ಇತ್ತೇ? ಹತ್ಯೆ ಪೂರ್ವಯೋಜಿತವಾಗಿತ್ತೇ? ದಾಳಿಯಲ್ಲಿ ನಾಲ್ವರು ಆರೋಪಿಗಳ ಪಾತ್ರವೇನು? ಈರಣ್ಣನ ಮೇಲೆ ಈ ಹಿಂದೆಯೂ ದಾಳಿ ನಡೆಸಲು ಪ್ರಯತ್ನ ನಡೆದಿತ್ತೇ? ಎಂಬ ಹಲವು ಪ್ರಶ್ನೆಗಳಿಗೆ ಪೊಲೀಸ್ ತನಿಖೆಯಿಂದಲೇ ಉತ್ತರ ಸಿಗಬೇಕಿದೆ.

ತನಿಖೆ ಮುಂದುವರಿಸಿದ ಪೊಲೀಸರು

ಘಟನೆ ಕುರಿತು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಈರಣ್ಣನ ಸಾವಿಗೆ ನಿಖರ ಕಾರಣ, ಹತ್ಯೆ ನಡೆದ ಸಂದರ್ಭ, ದಾಳಿಯ ಹಿಂದಿರುವ ಉದ್ದೇಶ ಹಾಗೂ ವಶಕ್ಕೆ ಪಡೆದಿರುವ ನಾಲ್ವರ ಪಾತ್ರದ ಕುರಿತು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಸದ್ಯ ನಾಲ್ವರು ಪೊಲೀಸ್ ವಶದಲ್ಲಿದ್ದು, ತನಿಖೆ ಮುಂದುವರಿದಿದೆ.

ಎದುರು ಮನೆಯಾಕೆಯ ಜೊತೆಗಿನ ಅನೈತಿಕ ಸಂಬಂಧದ ಆರೋಪದಿಂದ ಶುರುವಾದ ಎರಡು ವರ್ಷಗಳ ವೈಮನಸ್ಸು..! ಎರಡು ಬಾರಿ ತಪ್ಪಿದ ದಾಳಿ..! ಮೂರನೇ ಬಾರಿ ನಡೆದ ದಾಳಿಯಲ್ಲಿ ಕುರಿಗಾಹಿಯೊಬ್ಬನ ಬದುಕೇ ಅಂತ್ಯವಾಗಿದೆ..!

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb