Home » News » ಮಧ್ಯ ಪ್ರಾಚ್ಯದ ಯುದ್ಧ ಸಂಘರ್ಷ ; ಹೋಟೆಲ್ ಗಳಿಗೆ ತಾಗಿದ ಬಿಸಿ: ಲಕ್ಷ್ಮೇಶ್ವರದಲ್ಲಿ ಮುಚ್ಚುತ್ತಿವೆ ಹೋಟೆಲ್ ಗಳು …!

ಮಧ್ಯ ಪ್ರಾಚ್ಯದ ಯುದ್ಧ ಸಂಘರ್ಷ ; ಹೋಟೆಲ್ ಗಳಿಗೆ ತಾಗಿದ ಬಿಸಿ: ಲಕ್ಷ್ಮೇಶ್ವರದಲ್ಲಿ ಮುಚ್ಚುತ್ತಿವೆ ಹೋಟೆಲ್ ಗಳು …!

by CityXPress
0 comments

ಲಕ್ಷ್ಮೇಶ್ವರ : ಮಧ್ಯ ಪ್ರಾಚ್ಯದಲ್ಲಿ ನಡೆದಿರುವ ಯುದ್ಧ ಸಂಘರ್ಷದ ಬಿಸಿ ಲಕ್ಷ್ಮೇಶ್ವರಕ್ಕೂ ತಾಗಿದ್ದು ಕಳೆದ ಮೂರು ದಿನಗಳಿಂದ ಕಮರ್ಷಿಯಲ್ ಸಿಲಿಂಡರ್ ಅಭಾವದ ಹಿನ್ನೆಲೆಯಲ್ಲಿ ಹೊಸ ಬಸ್ ನಿಲ್ದಾಣದ ಎದುರಿಗಿರುವ ದುರ್ಗಾ ರೆಸ್ಟೋರೆಂಟ್ ಮುಚ್ಚಿದೆ.

ವರದಿ : ಪರಮೇಶ ಎಸ್ ಲಮಾಣಿ.

ಈ ಕುರಿತು ಹೋಟೆಲ್ ವ್ಯವಸ್ಥಾಪಕರು ಕಳೆದ ಮೂರು ದಿನಗಳಿಂದ ಕಮರ್ಷಿಯಲ್ ಸಿಲಿಂಡರು ಲಭ್ಯವಾಗದಿರುವುದರಿಂದ ಬಂದ ಮಾಡಲಾಗಿದೆ ಎಂದು ಹೇಳಿದರು.

ಪ್ರತಿನಿತ್ಯ ಮೂರು ಕಮರ್ಷಿಯಲ್ ಸಿಲಿಂಡರ್ ಬೇಕಾಗುತ್ತದೆ ತಿಂಗಳಿಗೆ ಕನಿಷ್ಠ 90 ಸಿಲಿಂಡರ್ಗಳ ಅವಶ್ಯಕತೆ ಇದ್ದು ಆದರೆ ಕಳೆದ ಮೂರು ದಿನಗಳಿಂದ ಕಮರ್ಷಿಯಲ್ ಸಿಲಿಂಡರ್ ಪೂರೈಕ ಸ್ಥಗಿತ ಗೊಂಡಿರುವುದರಿಂದ ಅನಿವಾರ್ಯವಾಗಿ ರೆಸ್ಟೋರೆಂಟ್ ಬಂದ್ ಮಾಡಲಾಗಿದೆ ಎಂದು ಹೇಳಿದರು.

banner

ಹೋಟೆಲ್ ಗಳು ಮುಚ್ಚಿದ್ದರಿಂದ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕಗೆ ಕೆಲಸ ಇಲ್ಲದೇ ಪರದಾಡುವ ಪರಸ್ಥಿತಿ ಎದುರಾಗಿದೆ. ಹೋಟೆಲ್ ಮಾಲೀಕರಿಗೆ ಬಾಡಿಗೆ ತುಂಬುದರ ಬಗ್ಗೆ ಚಿಂತೆ ಆಗಿದ್ದು, ಸಿಲಿಂಡರ್ ಗಾಗಿ ಅಲೆದಾಡುತ್ತಿದ್ದಾರೆ.

ಲಕ್ಷ್ಮೇಶ್ವರ ಪಟ್ಟಣಲ್ಲಿ ದುರ್ಗಾ ರೆಸ್ಟೋರೆಂಟ್ ಮುಚ್ಚಿದ್ದು, ಮಾಲೀಕರು ತಮ್ಮ ಸಮಸ್ಯೆ ಯಾರ ಮುಂದೆ ಹೇಳುವುದು ಎಂದು ಚಿಂತೆಗಿಡಾಗಿದ್ದಾರೆ.


ನಾವು ಹೋಟೆಲ್ ಕೆಲಸ ಮಾಡುತ್ತಿದ್ದು 4 – 5 ವರ್ಷಗಳಾಯಿತು ಬೇರೆ ಜಿಲ್ಲೆಯಿಂದ ಕೆಲಸಕ್ಕಾಗಿ ಬಂದಿದ್ದೆವೆ ಆದರೆ ಯುದ್ಧದ ಪರಿಣಾಮವಾಗಿ ಸಿಲಿಂಡರ್ ಅಭಾವದಿಂದ ಹೋಟೆಲ್ ಮುಚ್ಚುತ್ತಿವೆ. ಹಾಗಾಗಿ ನಮಗೆ ಕೆಲಸ ಇಲ್ಲದೇ ತೊಂದರೆ ಅನುಭವಿಸುತ್ತಿದ್ದೆವೆ.

ಹೆಸರು ಹೇಳ ಬಯಸದ ಕಾರ್ಮಿಕ…

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb