ಖರೀದಿ ಕೇಂದ್ರ ಆಗದಿದ್ದರೆ ಮತ್ತೆ ಅಮರಣಾಂತ ಸತ್ಯಾಗ್ರಹಕ್ಕೆ ಮುಂದಾಗುತ್ತೆನೆ : ಡಾ|| ಕುಮಾರ ಮಹಾರಾಜ….!
ಲಕ್ಷ್ಮೇಶ್ವರ: ಪಟ್ಟಣದಲ್ಲಿ ಮೆಕ್ಕೆಜೋಳ ಖರೀದಿಸುವಂತೆ ಆಗ್ರಹಿಸಿ ಕಳೆದ ೧೨ ದಿನಗಳಿಂದ ಅಹೋ ರಾತ್ರಿ ಹೋರಾಟ ನಡೆಸುತ್ತಿರುವ ರೈತರು ೧೩ ನೇ ದಿನವಾದ ಗುರುವಾರ ಪೊರಕೆ ಚಳುವಳಿ ಮಾಡಿ ಸರಕಾರಕ್ಕೆ ಎಚ್ಚರಿಸುವ ಮೂಲಕ ಗಮನ ಸೆಳೆದರು.
ವರದಿ : ಪರಮೇಶ ಎಸ್ ಲಮಾಣಿ
ರೈತರ ಮೆಕ್ಕೆಜೋಳ ಖರೀದಿ ಕೇಂದ್ರವನ್ನು ಆದಷ್ಟು ಬೇಗ ಪ್ರಾರಂಭ ಮಾಡದಿದ್ದಲ್ಲಿ ಪೊರಕೆ ಗುಡಿಸುವ ಹಾಗೇ ನಿಮ್ಮ ಅಧಿಕಾರವನ್ನೂ ಮಟ್ಟ ಹಾಕಲಾಗುವುದು ಎಂದು ಈ ಸಂದರ್ಭದಲ್ಲಿ ಪೊರಕೆ ಗುಡಿಸಿ ಎಚ್ಚರಿಕೆ ನೀಡಿದರು.
ಪಟ್ಟಣದ ಶಿಗ್ಲಿ ನಾಕಾದ ಪಾಳಾ-ಬಾದಾಮಿ ರಾಜ್ಯ ಹೆದ್ದಾರಿ ತಡೆದು ಪೊರಕೆ ಹಿಡಿದು ರಸ್ತೆಯ ಮೇಲೆ ಕಸ ಗುಡಿಸಿ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ನಂತರ ತಮ್ಮ ಪ್ರತಿಭಟನಾ ವೇದಿಕೆಗೆ ಆಗಮಿಸಿದರು.
ಬಳಿಕ ವೇದಿಕೆಯಲ್ಲಿಯೇ ತುರ್ತು ಪತ್ರಿಕಾಗೋಷ್ಠಿ ಕರೆದು ಸಾನಿಧ್ಯ ವಹಿಸಿದ ಗವಿಮಠದ ಡಾ.ಕುಮಾರ ಮಹಾರಾಜರು ನಾನು ಅಮಾರಣಾಂತ ಉಪವಾಸ ಕೈಗೊಂಡು ಅಸ್ಥವ್ಯಸ್ಥವಾದ ಸಂದರ್ಭದಲ್ಲಿ ಜಿಲ್ಲಾಡಳಿತ ವೇದಿಕೆಗೆ ಬಂದು ಖರೀದಿ ಕೇಂದ್ರ ತೆರೆಯುವ ಭರವಸೆ ನೀಡಿದ್ದರು. ಆದರೆ ಇದುವರೆಗೂ ಸರಕಾರದಿಂದ ಯಾವುದೇ ಖರೀದಿ ಕೇಂದ್ರದ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ಹಾಗಾಗಿ ಶನಿವಾರ ೧೦ ಗಂಟೆಯ ಒಳಗಾಗಿ ಆದೇಶ ಮಾಡದಿದ್ದರೆ ಮತ್ತೆ ತಾವು ಅಮರಣ ಉಪವಾಸ ಕೈಗೊಳ್ಳುವದಾಗಿ ಪ್ರಕಟಿಸಿದರು.
ಈ ಸಂದರ್ಭದಲ್ಲಿ ರವಿಕಾಂತ ಅಂಗಡಿ,ಶರಣು ಗೋಡಿ, ಮಂಜುನಾಥ ಮಾಗಡಿ, ಮಹೇಶ ಹೊಗೆಸೊಪ್ಪಿನ, ಜೆಡಿಎಸ್ ವಕ್ತಾರ ನಂಜನಗೌಡ್ರು ಗೊಂವಿಂದಗೌಡ್ರು,ನಾಗರಾಜ ಚಿಂಚಲಿ, ಬಸವರಾಜ ಬೆಂಡಿಗೇರಿ, ಪೂರ್ಣಾಜಿ ಕರಾಟೆ ಸೇರಿದಂತೆ ತಿಪ್ಪಣ್ಣ ಸಂಶಿ,ಚಂಬಣ್ಣ ಬಾಳಿಕಾಯಿ ಪ್ರಕಾಶ ಕೊಚ್ಚಿಗೇರಿಮಠ, ನೀಲಪ್ಪ ಶೆರಸೂರಿ,ಟಾಕಪ್ಪ ಸಾತಪೂತೆ,ಚನ್ನಪ್ಪ ಷಣ್ಮುಖಿ, ಫಕ್ಕೀರೇಶ ಅಣ್ಣಿಗೇರಿ,ನಿಂಗಪ್ಪ ಗದ್ದಿ,ಮಲ್ಲೇಶ ವಡ್ಡರ,ಶಿವಾನಂದ ಲಿಂಗಶೆಟ್ಟಿ, ಸುರೇಶ ಹಟ್ಟಿ,ಶಿವನಗೌಡ್ರು ಅಗಶೆಟ್ಟಿ,ದಾದಾಪೀರ ಮುಚ್ಚಾಲೆ ರಾಜು ಗುಡಗೇರಿ, ರಾಜು ಬೆಲ್ಲದ,ಮುದಕಪ್ಪ ಗೊಂದ್ದಿ,ಎಂ.ಎಂ.ಗದಗ.ದೇವಪ್ಪ ಮಾಳಗಿಮನಿ ಸೇರಿದಂತೆ ಅನೇಕರು ಇದ್ದರು.
ವೇದಿಕೆಯ ಮೇಲೆ ಅಡವಿಸೋಮಾಪೂರದ ಈರಣ್ಣ ಅಂಗಡಿ ಹಾಗೂ ಸಂಗಡಿಗರು ಗಿಗಿ ಪದದ ಮೂಲಕ ರೈತ ಜಾಗೃತಿ ಹಾಡುಗಳನ್ನು ಹೇಳಿದರು.
