Home » News » ವೀರಮಹೇಶ್ವರ ಜಂಗಮಾಭಿವೃದ್ಧಿ ಸಮಾಜದಿಂದ ಡಾ. ಕುಮಾರಸ್ವಾಮಿ ಹಿರೇಮಠರಿಗೆ ಸನ್ಮಾನ..

ವೀರಮಹೇಶ್ವರ ಜಂಗಮಾಭಿವೃದ್ಧಿ ಸಮಾಜದಿಂದ ಡಾ. ಕುಮಾರಸ್ವಾಮಿ ಹಿರೇಮಠರಿಗೆ ಸನ್ಮಾನ..

by CityXPress
0 comments

ಮುಂಡರಗಿ: ಶ್ರೀ ವೀರಮಾಹೇಶ್ವರ ಜಂಗಮಾಭಿವೃದ್ಧಿ ಸಂಘದ ವತಿಯಿಂದ ಶಿರಹಟ್ಟಿ ಮತಕ್ಷೇತ್ರದ ಬಿಜೆಪಿ ಪಕ್ಷದ ಮುಂಡರಗಿ ಮಂಡಲದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಡಾ. ಕುಮಾರಸ್ವಾಮಿ ಹಿರೇಮಠ ಅವರನ್ನು ಪಟ್ಟಣದ ಶ್ರೀ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನ ಮಠದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಕೆ.ಆರ್. ಬೆಲ್ಲದ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಿ.ಸಿ. ಮಠ ಅವರು, ಡಾ. ಕುಮಾರಸ್ವಾಮಿ ಹಿರೇಮಠ ಅವರು ಮುಂಡರಗಿ ಮಂಡಲದ ಅಧ್ಯಕ್ಷರಾಗಿರುವುದು ಸಮಾಜಕ್ಕೆ ಹೆಮ್ಮೆಯ ಸಂಗತಿ. ಅವರು ತಮ್ಮ ನಾಯಕತ್ವದ ಮೂಲಕ ಸಮಾಜದ ಏಕತೆ, ಸಂಘಟಿತ ಶಕ್ತಿ ಮತ್ತು ಅಭಿವೃದ್ಧಿಗೆ ಹೊಸ ದಿಕ್ಕು ತೋರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಅವರು ಇನ್ನೂ ಹೆಚ್ಚಿನ ಜವಾಬ್ದಾರಿಯುತ ಹುದ್ದೆಗಳನ್ನು ಅಲಂಕರಿಸಿ, ಸಮಾಜ ಸೇವೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಲಿ ಎಂದು ಹಾರೈಸಿದರು.

ಅಮರೇಶ ಹಿರೇಮಠ ಸೇರಿದಂತೆ ಹಲವರು ಮಾತನಾಡಿ, ವೀರಮಹೇಶ್ವರ ಜಂಗಮಾಭಿವೃದ್ಧಿ ಸಮಾಜದ ಸಂಘಟಿತ ಶಕ್ತಿಯೇ ಸಮಾಜದ ಪ್ರಗತಿಯ ಮೂಲವೆಂದು ತಿಳಿಸಿದರು. ಯುವಜನರನ್ನು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದರು. ಶಿಕ್ಷಣ, ನೈತಿಕ ಮೌಲ್ಯಗಳು ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಸಂಘದ ಪಾತ್ರ ಮಹತ್ತರವಾಗಿದೆ ಎಂದು ಅಭಿಪ್ರಾಯಪಟ್ಟರು.

ಗೌರವ ಸ್ವೀಕರಿಸಿ ಮಾತನಾಡಿದ ಡಾ. ಕುಮಾರಸ್ವಾಮಿ ಹಿರೇಮಠ ಅವರು, ಸಮಾಜದ ಏಕತೆ ಮತ್ತು ಪ್ರಗತಿಗಾಗಿ ಪ್ರತಿಯೊಬ್ಬರೂ ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಸಮಾಜದ ಎಲ್ಲಾ ವರ್ಗದ ಜನರನ್ನು ಒಳಗೊಂಡ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ವಿಶೇಷವಾಗಿ ಯುವಕರಿಗೆ ಮಾರ್ಗದರ್ಶನ, ಶಿಕ್ಷಣಕ್ಕೆ ಪ್ರೋತ್ಸಾಹ ಹಾಗೂ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು. ಸಮಾಜದ ಒಳಗಿನ ಸಮಸ್ಯೆಗಳನ್ನು ಪರಸ್ಪರ ಸಹಕಾರದಿಂದ ಪರಿಹರಿಸಿಕೊಳ್ಳುವ ಮನೋಭಾವ ಬೆಳೆಸಬೇಕು ಎಂದು ಕರೆ ನೀಡಿದರು.

banner

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಸಯ್ಯ ಗಿಂಡಿಮಠ ವಹಿಸಿದ್ದರು. ವಿ.ಜೆ. ಹಿರೇಮಠ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

ಈ ವೇಳೆ ಆರ್.ಬಿ. ಡಂಬಳಮಠ, ಚೆನ್ನವೀರಯ್ಯ ಹಿರೇಮಠ, ಯು.ಸಿ. ಹಂಪಿಮಠ, ವಿ.ಆರ್. ಹಿರೇಮಠ, ಎಫ್.ಆರ್. ಹಿರೇಮಠ, ಬಸಯ್ಯ ಅಮರಗೋಳಹಿರೇಮಠ, ವೀರೇಶ ಶಾಸ್ತ್ರಿಮಠ, ಮಲ್ಲಯ್ಯ ವಿರುಪಾಪುರಮಠ, ಹಾಲಯ್ಯ ಹಿರೇಮಠ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

ಯುವ ಘಟಕದ ಅಧ್ಯಕ್ಷ ವಿನಯಕುಮಾರ ಗಂಧದ, ಪ್ರಶಾಂತ ಹಿರೇಮಠ, ಕೊಟ್ರೇಶ ನವಲಿಹಿರೇಮಠ, ಚಂದ್ರು ತಂಬ್ರಳ್ಳಿಮಠ, ಶಿವು ಹಿರೇಮಠ, ಶಿವು ಕುಲಕರ್ಣಿ, ಕೈಲಾಸ್, ಗುರು ಶಿರಹಟ್ಟಿಮಠ, ಪಾಲಾಕ್ಷಗೌಡ ಪಾಟೀಲ, ದೊಡ್ಡನಗೌಡ ಪಾಟೀಲ, ಚನ್ನಬಸಯ್ಯ, ಮಹೇಶ ಹೊಸಮಠ ಸೇರಿದಂತೆ ಯುವಕರು ಭಾಗವಹಿಸಿದ್ದರು.

ಮಹಿಳಾ ಘಟಕದ ಅಧ್ಯಕ್ಷೆ ಶಕುಂತಲಾ ಹಂಪಿಮಠ, ಲಕ್ಷ್ಮೀದೇವಿ ಬೆಳವಟಿಗಿಮಠ, ಅರುಣಾ ಪಾಟೀಲ, ವಿಮಲಾ ಅಳವಂಡಿಮಠ, ಸರಸ್ವತಿ ಹಿರೇಮಠ, ಲತಾ ಅಮರಗೋಳಹಿರೇಮಠ, ಪಾರಮ್ಮ ಹೊಸಳ್ಳಿಹಿರೇಮಠ ಸೇರಿದಂತೆ ಮಹಿಳಾ ಸದಸ್ಯೆಯರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ಮೆರಗು ತಂದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb