ಗದಗ ೦೯: ಗದಗ-ಬೇಟಗೇರಿಯ ಶಿಕ್ಷಣ ಕ್ಷೇತ್ರದ ಪರಿಸರದಲ್ಲಿ ಸ್ಟುಡೆಂಟ್ಸ್ ಏಜ್ಯುಕೇಶನ್ ಸೊಸೈಟಿ ಪದವಿ ಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯವು ೨೦೨೫-೨೦೨೬ನೇ ಸಾಲಿನ ದ್ವಿತೀಯ ಪಿ.ಯು ವಾರ್ಷಿಕ ಪರೀಕ್ಷೆಯಲ್ಲಿ ಮತ್ತೊಮ್ಮೆ ಫಲಿತಾಂಶದಲ್ಲಿ ವಿಜಯ ದುಂದುಭಿಯನ್ನು ಮೊಳಗಿಸಿದೆ.
ತನ್ನ ಸಾಧನಾ ಪಥದತ್ತ ದಾಪುಗಾಲು ಹಾಕುತ್ತಿರುವುದಕ್ಕೆ ಸದ್ಯದ ಫಲಿತಾಂಶವು ವಿದ್ಯಾಲಯದ ಸಶಕ್ತ ಸಾಧನೆಗೆ ಪ್ರತ್ಯಕ್ಷ ಸಾಕ್ಷಿಯಾಗಿದೆ. ವಿಜ್ಞಾನ ವಿಭಾಗದ ಒಟ್ಟು ಫಲಿತಾಂಶ ಶೇ.೯೩% ರಷ್ಟಾಗಿದ್ದರೆ, ವಾಣಿಜ್ಯ ವಿಭಾಗದಲ್ಲಿ ಒಟ್ಟು ಫಲಿತಾಂಶ ಶೇ. ೮೭% ರಷ್ಟಾಗಿದೆ. ವಿಜ್ಞಾನ ವಿಭಾಗದಲ್ಲಿ ಶೇ. ೯೮.೩% ರಷ್ಟು ಅಂಕ ಪಡೆದ ಕುಮಾರ.ಕಿರಣ ಹಿರೇಮಠ ಕಾಲೇಜಿಗೆ ಪ್ರಥಮ ಸ್ಥಾನ ಹಾಗೂ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಶೇ ೯೭.೧೬% ರಷ್ಟು ಅಂಕಗಳನ್ನು ಪಡೆದ ಕುಮಾರ ಶಿವರಾಮ ಚೈತನ್ಯ ಕುಲಕರ್ಣಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಶೇ ೯೬.೧೭% ರಷ್ಟು ಅಂಕಗಳನ್ನು ತನ್ನದಾಗಿಸಿಕೊಂಡ ಕುಮಾರಿ ಸವಿತಾ ಹಳ್ಳಿ ಹಾಗೂ ಕುಮಾರಿ ಶೃತಿ ಅಂಗಡಿ ತೃತೀಯ ಸ್ಥಾನ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲೂ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ. ಶೇ ೯೬.೧೭% ರಷ್ಟು ಅಂಕಗಳನ್ನು ಪಡೆದ ಕುಮಾರಿ ಪ್ರಾಚಿ ಕಬಾಡಿ ಕಾಲೇಜಿಗೆ ಪ್ರಥಮ ಸ್ಥಾನವನ್ನು ತಮ್ಮದಾಗಿಸಿಕೊಂಡರೆ, ಶೇ ೯೫.೧೭% ರಷ್ಟು ಅಂಕಗಳನ್ನು ಪಡೆದ ಕುಮಾರಿ ದಿವ್ಯಾಶ್ರೀ ಬಂಡಿವಾಡಮಠ ದ್ವಿತೀಯ ಸ್ಥಾನ ಹಾಗೂ ಶೇ ೯೫% ರಷ್ಟು ಗಳಿಸಿದ ಕುಮಾರಿ ಸಾನ್ವಿ ಹಬೀಬ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಒಟ್ಟು ೫೦ ಜನ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿದ್ದರೆ, ೯೭ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಅದೇ ರೀತಿ ವಾಣಿಜ್ಯ ವಿಭಾಗದಲ್ಲಿ ೧೪ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿದ್ದರೆ, ೪೪ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದಾರೆ.
ಮಹಾವಿದ್ಯಾಲಯದ ಇಂತಹ ಗಮನಾರ್ಹ ಸಾಧನೆಗೆ ಕಾರಣರಾದ ವಿದ್ಯಾರ್ಥಿಗಳನ್ನು ಆ ಸಾಧನೆಗೆ ನೆರವಾದ ಸಮಸ್ತ ಬೋದಕ ಸಿಬ್ಬಂದಿಯನ್ನು ಸಂಸ್ಥೆಯ ಚೇರಮನ್ ಪ್ರೊ. ರಾಜೇಶ ಕುಲಕರ್ಣಿ, ಪ್ರಾಚಾರ್ಯ ಪ್ರೊ. ಪುನೀತ್ ದೇಶಪಾಂಡೆ, ಆಡಳಿತಾಧಿಕಾರಿ ಶ್ರೀ ಎಮ್ ಸಿ ಹಿರೇಮಠ, ಪದಾಧಿಕಾರಿಗಳಾದ ಪ್ರೊ. ರೋಹಿತ್ ಒಡೆಯರ್, ಪ್ರೊ. ರಾಹುಲ್ ಒಡೆಯರ್, ಪ್ರೊ. ಸೈಯದ್ಮತೀನ್ ಮುಲ್ಲಾ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿದ್ದಾರೆ.
