Home » News » ತೆರಿಗೆ ವಸೂಲಾತಿಯಲ್ಲಿ ಶಿರಹಟ್ಟಿ ತಾಲೂಕು ಜಿಲ್ಲೆಗೆ ಪ್ರಥಮ..

ತೆರಿಗೆ ವಸೂಲಾತಿಯಲ್ಲಿ ಶಿರಹಟ್ಟಿ ತಾಲೂಕು ಜಿಲ್ಲೆಗೆ ಪ್ರಥಮ..

by CityXPress
0 comments

ಶಿರಹಟ್ಟಿ : 2025-26ನೇ ಸಾಲಿನ ಗ್ರಾಮ ಪಂಚಾಯಿತಿ ತೆರಿಗೆ ವಸೂಲಾತಿಯಲ್ಲಿ ಶೇ.100ರಷ್ಟು ಗುರಿ ತಲುಪುವ ಮೂಲಕ ಶಿರಹಟ್ಟಿ ತಾಲ್ಲೂಕು ಗದಗ ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿದೆ.

ಪ್ರಸಕ್ತ ಸಾಲಿನಲ್ಲಿ ಒಟ್ಟು ₹1.56 ಕೋಟಿ (₹1,55,95,040) ಕಂದಾಯ ಬೇಡಿಕೆ ಇತ್ತು. ತಾಲ್ಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳ ವಿಶೇಷ ಅಭಿಯಾನದಿಂದಾಗಿ ಬೇಡಿಕೆಗಿಂತ ಅಧಿಕವಾಗಿ ₹1.56 ಕೋಟಿ (₹1,56,65,649 ಅಂದರೆ ಶೇ. 100.45) ಸಂಗ್ರಹಿಸಲಾಗಿದೆ. ಇದರಲ್ಲಿ ಕೋಗನೂರು ಗ್ರಾಮ ಪಂಚಾಯಿತಿ ಶೇ.124.40ರಷ್ಟು ಸಾಧನೆ ಮಾಡಿ ತಾಲೂಕಿನಲ್ಲಿ ಅಗ್ರಸ್ಥಾನದಲ್ಲಿದೆ.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ, ಯೋಜನಾಧಿಕಾರಿ, ಸಹಾಯಕ ನಿರ್ದೇಶಕರು ಪಂಚಾಯತ್ ರಾಜ್ ಅವರುಗಳ ತಂಡಗಳ ನೇತೃತ್ವದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ಪರಿಶ್ರಮ ಹಾಗೂ 14 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ ಸಾರ್ವಜನಿಕರ ಸಂಪೂರ್ಣ ಸಹಕಾರದಿಂದ ಕರ ವಸೂಲಾತಿಯಲ್ಲಿ ಶೇ.100ರಷ್ಟು ಗುರಿ ತಲುಪಲು ಸಾಧ್ಯವಾಗಿದೆ.

ಪಂಚಾಯಿತಿಗಳಿಗೆ ಕಟ್ಟುವ ತೆರಿಗೆ ಹಣವನ್ನು ಗ್ರಾಮಗಳಲ್ಲಿ ರಸ್ತೆ, ಚರಂಡಿ, ಬೀದಿ ದೀಪಗಳ ದುರಸ್ಥಿಗೆ ಬಳಕೆ ಮಾಡುವ ಕುರಿತು ಬಿಲ್ ಕಲೆಕ್ಟರ್‌ಗಳು ಮನವರಿಕೆ ಮಾಡಿಕೊಟ್ಟಿದ್ದರು. ಇವರ ಜೊತೆ ಎನ್‌ಆರ್‌ಎಲ್‌ಎಂ, ಎಲ್‌ಸಿಆರ್‌ಪಿ, ಕೃಷಿ ಸಖಿ, ಪಶು ಸಖಿ, ಬ್ಯಾಂಕ್ ಸಖಿಯರು ಅಭಿಯಾನಕ್ಕೆ ಕೈಜೋಡಿಸಿದ್ದರು. ಇವರಿಂದ ಪ್ರೇರಣೆಗೊಂಡ ಜನರು ಸಕಾಲದಲ್ಲಿ ತೆರಿಗೆ ಹಣ ಪಾವತಿಸಿದ್ದಾರೆ. ತೆರಿಗೆ ಶುಲ್ಕವನ್ನು ಆನ್ ಲೈನ್ ಮೂಲಕ ಜಮಾ ಮಾಡಿಸುವ ವ್ಯವಸ್ಥೆ ಸಾಧನೆಗೆ ಸಹಕಾರಿ ಆಗಿದೆ ಎಂದು ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ತಿಳಿಸಿದರು.

banner

ನಮ್ಮ ಗ್ರಾಮ ನಮ್ಮ ತೆರಿಗೆ ಸಹಕಾರಿ: ನೋಡಲ್ ಅಧಿಕಾರಿಗಳ ನೇತೃತ್ವದಲ್ಲಿ ರೂಪಿಸಲಾಗಿದ್ದ ‘ನಮ್ಮ ಗ್ರಾಮ-ನಮ್ಮ ತೆರಿಗೆ’ ಅಭಿಯಾನವೂ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು, ಕಾರ್ಯದರ್ಶಿಗಳು, ಬಿಲ್ ಕಲೆಕ್ಟರ್‌ಗಳು ಹಾಗೂ ಸ್ವಸಹಾಯ ಸಂಘಗಳ ಮಹಿಳೆಯರು ಮನೆ ಮನೆಗೆ ತೆರಳಿ ತೆರಿಗೆ ಪಾವತಿಯ ಮಹತ್ವ ಮತ್ತು ಆನ್‌ಲೈನ್ ಪಾವತಿ ಬಗ್ಗೆ ಅರಿವು ಮೂಡಿಸಿದ ಪರಿಣಾಮ ಯಶಸ್ಸು ಸಿಕ್ಕಿದೆ. ಇದರ ಜೊತೆಗೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ 36 ಮಾನದಂಡಗಳ ಆಡಳಿತಾತ್ಮಕ ಕಾರ್ಯಕ್ಷಮತೆಯ ಶ್ರೇಣಿಯಲ್ಲಿ ಶಿರಹಟ್ಟಿ ತಾಲ್ಲೂಕು ಗದಗ ಜಿಲ್ಲೆಗೆ ಪ್ರಥಮ ಸ್ಥಾನ ಅಲಂಕರಿಸಲು ಸಾಧ್ಯವಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಾಮಣ್ಣ ದೊಡ್ಡಮನಿ ಅವರು ಸಂತಸ ಹಂಚಿಕೊಂಡರು.

ಕೋಟ್

‘ಗ್ರಾಮ ಸ್ವರಾಜ್‍ದ ಕನಸು ನನಸಾಗಲು ಗ್ರಾಮಗಳು ಆರ್ಥಿಕವಾಗಿ ಸಶಕ್ತವಾಗಬೇಕು. ಆ ಹಿನ್ನೆಲೆಯಲ್ಲಿ ತೆರಿಗೆ ಪಾವತಿಸುವುದು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿ. ಇನ್ನೂ ಕಂದಾಯ ಬಾಕಿ ಇರುವವರು ಶೀಘ್ರ ತೆರಿಗೆ ಪಾವತಿಸಿ ಗ್ರಾಮಗಳ ಅಭಿವೃದ್ದಿ ಸಹಕರಿಸಿ’.

ರಾಮಣ್ಣ ದೊಡ್ಡಮನಿ ಕಾರ್ಯನಿರ್ವಾಹಕ ಅಧಿಕಾರಿ ತಾಲೂಕು ಪಂಚಾಯತ್ ಶಿರಹಟ್ಟಿ

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb