ಲಕ್ಷ್ಮೇಶ್ವರ: ಪರಿಶಿಷ್ಟ ಜಾತಿಯ ಒಳಮೀಸಲಾತಿ ರದ್ದು ಪಡಿಸಲು ಆಗ್ರಹಿಸಿ ಲಕ್ಷ್ಮೇಶ್ವರ ತಾಲ್ಲೂಕಿನ ತಾಂಡಾದ ಯುವಕರು ಲಕ್ಷ್ಮೇಶ್ವರ ತಹಶಿಲ್ದಾರ ಅವರಿಗೆ ಮನವಿ ಸಲ್ಲಿಸಿದರು.
ಉದ್ದೇಶಿಸಿ ಮಾತನಾಡಿದ ಯುವ ಮುಖಂಡ ತುಕ್ಕಪ್ಪ ಪೂಜಾರ, ಸಂತೋಷ ರಾಠೋಡ ಒಳಮೀಸಲಾತಿಯಿಂದ ಸಣ್ಣ ಸಣ್ಣ ಸಮುದಾಯದ ಜನತೆಗೆ ಅನ್ಯಾಯವಾಗಲಿದೆ. ಸರ್ಕಾರ ಕೂಡಲೇ ಈ ಒಳಮೀಸಲಾತಿ ರದ್ದು ಮಾಡಿ ಜನರಿಗೆ ನ್ಯಾಯ ಒದಗಿಸಬೇಕು’ ಎಂದು ಒತ್ತಾಯಿಸಿದರು.
ವರದಿ : ಪರಮೇಶ ಎಸ್ ಲಮಾಣಿ
‘ಲಂಬಾಣಿ–ಬಂಜಾರ ಸಮಾಜದ ಜನರು ದುಡಿಯಲು ದೂರದ ಗೋವಾ, ಮುಂಬೈ, ಬೆಂಗಳೂರುಗಳಿಗೆ ಇಂದಿಗೂ ವಲಸೆ ಹೋಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅವರ ಏಳ್ಗೆಗೆ ಮಾರಕವಾದ ಈ ಒಳಮೀಸಲಾತಿ ರದ್ದು ಮಾಡಬೇಕು. ಬಂಜಾರಾ ಸಮುದಾಯ ಸೇರಿದಂತೆ ಭಜಂತ್ರಿ, ಭೋವಿ, ಕೊಂಚಿ, ಕೊರವರು ಸೇರಿ ಹಲವು ಸಣ್ಣ ಸಮಾಜದ ಜನರಿಗೆ ಅನ್ಯಾಯವಾಗಲಿದೆ’ ಎಂದು ಅಭಿಪ್ರಾಯಟ್ಟರು.
ನಂತರ ಮಾತನಾಡಿದ ಯುವ ಮುಖಂಡ ಪರಮೇಶ ಲಮಾಣಿ ಗಣತಿಯಲ್ಲಿ ಸಂಗ್ರಹಿಸಿದ ಪ್ರಾಯೋಗಿಕ ಮಾಹಿತಿ ತಾರತಮ್ಯವಾಗಿದೆ. ಮತ್ತು 02-08-2025 ರ ವರದಿ ಒಂದು ವ್ಯಕ್ತಿಯಾ ಆಯೋಗದಿಂದ ನೀಡಲ್ಪಟ್ಟಿದ್ದು ನಮ್ಮ ಸಮುದಾಯದ ವಿರುದ್ಧ ಪೂರ್ವಾನುಗ್ರಹ ಹೊಂದಿದೆ.
ಆಯೋಗ ನೀಡಿದ ಸಾಮಾಜಿಕ, ಶೈಕ್ಷಣೆ ಮತ್ತು ಉದ್ಯೋಗ ಸ್ಥಿತಿ ವಿವರಗಳಿಗೆ ‘C’ ಗುಂಪಿನ 63 ಜಾತಿಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಸಮರ್ಪಕ ಪ್ರತಿನಿಧಿತ್ವ ಇಲ್ಲವೆಂಬುದು ಸ್ಪಷ್ಟವಾಗುತ್ತದೆ. ಆದ್ದರಿಂದ ಈ 63 ಜಾತಿಗಳಿಗೆ ಹೆಚ್ಚು ಮೀಸಲಾಗಿ ಅಗತ್ಯವಿದೆ.
ಸಚಿವ ಸಂಪುಟವು ವರದಿಯನ್ನು ತಿದ್ದುಪಡಿ ಮಾಡಿ ‘A’ ‘B’ ‘C’ ಉಪವರ್ಗೀಕರಣ ಮಾಡಿರುವುದು ಸುಪ್ರೀಂ ಕೋಟಾ ತೀರ್ಪಿಗೆ ವಿರುದ್ಧವಾಗಿದೆ.
ರೋಸ್ಟರ್ ವ್ಯವಸ್ಥೆ ಮತ್ತು ‘A’ ‘B’ ‘C’ ಎಂದು ಜಾತಿ ಪ್ರಮಾಣ ಪತ್ರ ನೀಡುವ ಅಧಿಸೂಚನೆಗಳಿಗೆ ಕಾನೂನು ಆಧಾರವಿಲ್ಲ ಮತ್ತು ಇದು ಇತರ ಜಾತಿಗಳನ್ನು ಹೊರತುಪಡಿಸಿವಂತಾಗಿದೆ.
ಗುಂಪಿನಲ್ಲಿ 1+4=5 ರೀತಿ ಆಂತರಿಕ ಮೀಡಲಾತಿ ನೀಡುವುದು ಸುಪ್ರೀಂ ಕೋರ್ಟಿ ತೀರ್ಪಿಗೆ ವಿರುದ್ಧವಾಗಿದೆ.ಸಚಿವ ಸಂಪುಟದ ತೀರ್ಮಾನವನ್ನು ಪ್ರಶ್ನಿಸಿ ಸಲ್ಲಿಸಿದ ಪ್ರಕರಣಗಳು ಕರ್ನಾಟಕ ಹೈಕೋರ್ಟಿನಲ್ಲಿ ವಿಚಾರಣೆಯಲ್ಲಿದೆ ಎಂದು ಹೇಳಿದರು.
ಸಂದರ್ಭದಲ್ಲಿ ಗಿರೀಶ ಲಮಾಣಿ, ಕೀರಣ ಲಮಾಣಿ, ಗಣೇಶ ಲಮಾಣಿ, ಕ್ರಿಷ್ಣ ಲಮಾಣಿ, ಉಮೇಶ ಲಮಾಣಿ, ತುಳಚಪ್ಪ ಲಮಾಣಿ, ಸಂತೋಷ ಲಮಾಣಿ, ಚನ್ನಪ್ಪ ಲಮಾಣಿ, ಯಂಕಪ್ಪ ಲಮಾಣಿ, ದೇವೇಂದ್ರಪ್ಪ ಲಮಾಣಿ ಮತ್ತಿತರಿದ್ದರು.
